ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಐಟಿ ಕೈಗೆ ಸಿಕ್ಕಿಬಿದ್ದ ಅಶ್ವಿನ್ ರಾವ್ : ಯಾರು, ಏನು ಹೇಳಿದರು?

|
Google Oneindia Kannada News

ಬೆಂಗಳೂರು, ಜುಲೈ 27 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಹಣದ ಬೇಡಿಕೆ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರನ್ನು ಎಸ್‌ಐಟಿ ಬಂಧಿಸಿದೆ. ಇದರಿಂದ ಪ್ರಕರಣದ ಪ್ರಮುಖ ಆರೋಪಿಯ ಬಂಧನವಾದಂತಾಗಿದೆ.

ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಲೋಕಾಯುಕ್ತ ಅಶ್ವಿನ್ ರಾವ್ ಅವರನ್ನು ಸೋಮವಾರ ಬೆಳಗ್ಗೆ ತೆಲಂಗಾಣದಲ್ಲಿ ಬಂಧಿಸಿದೆ. ಜುಲೈ 25ರೊಳಗೆ ವಿಚಾರಣೆಗೆ ಹಾಜರಾಗುವಂತೆ ಅಶ್ವಿನ್ ರಾವ್ ಅವರಿಗೆ ಎಸ್‌ಐಟಿ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಅಶ್ವಿನ್ ರಾವ್ ಹಾಜರಾಗಿರಲಿಲ್ಲ. [ತೆಲಂಗಾಣದಲ್ಲಿ ಸಿಕ್ಕಿಬಿದ್ದ ಕೈಗೆ ಸಿಕ್ಕಿಬಿದ್ದ ಅಶ್ವಿನ್ ರಾವ್]

ಎಡಿಜಿಪಿ ಕಮಲ್ ಪಂಥ್ ನೇತೃತ್ವದ ಎಸ್‌ಐಟಿ ತಂಡ ಇದುವರೆಗೂ ಲೋಕಾಯುಕ್ತ ಜಂಟಿ ಆಯುಕ್ತ ಸಯ್ಯದ್ ರಿಯಾಜ್, ಅಶೋಕ್, ಶ್ರೀನಿವಾಸಗೌಡ ಮತ್ತು ಶಂಕರೇಗೌಡ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದೆ. ಅಶ್ವಿನ್ ರಾವ್ ಅವರನ್ನು ಇಂದು ಸಂಜೆ ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

ತಮ್ಮ ಪುತ್ರನ ಬಂಧನವಾಗಿರುವ ಹಿನ್ನಲೆಯಲ್ಲಿ ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ರಾಜೀನಾಮೆ ನೀಡಬೇಕು ಎಂದು ವಿವಿಧ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಭಾಸ್ಕರರಾವ್ ಅಧಿಕಾರದಲ್ಲಿ ಮುಂದುವರೆದರೆ ಸಾಕ್ಷಿಗಳು ನಾಶವಾಗುವ ಆತಂಕವಿದೆ ಎಂದು ಹೇಳಿದ್ದಾರೆ. ಅಶ್ವಿನ್ ರಾವ್ ಬಂಧನದ ಬಗ್ಗೆ ಯಾರು, ಏನು ಹೇಳಿದರು ನೋಡೋಣ ಬನ್ನಿ....

ಬಂಧನದ ಬಗ್ಗೆ ಖಚಿತವಾದ ಮಾಹಿತಿ ಇಲ್ಲ

ಬಂಧನದ ಬಗ್ಗೆ ಖಚಿತವಾದ ಮಾಹಿತಿ ಇಲ್ಲ

'ಅಶ್ವಿನ್ ರಾವ್ ಬಂಧನದ ಬಗ್ಗೆ ಖಚಿತವಾದ ಮಾಹಿತಿ ಇಲ್ಲ, ಹಗರಣದ ಸತ್ಯಾಂಶ ಹೊರಬರಲಿ ಎಂದು ಎಸ್‌ಐಟಿ ರಚನೆ ಮಾಡಲಾಗಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ನಿಜಾಂಶ ಜನರಿಗೆ ತಿಳಿಯಬೇಕು

ನಿಜಾಂಶ ಜನರಿಗೆ ತಿಳಿಯಬೇಕು

ಅಶ್ವಿನ್ ರಾವ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, 'ಭ್ರಷ್ಟಾಚಾರ ಪ್ರಕರಣದಲ್ಲಿ ಇದುವರೆಗೂ ಹಲವರ ಬಂಧನವಾಗಿದೆ. ತಡವಾಗಿಯಾದರೂ ಅಶ್ವಿನ್ ರಾವ್ ಬಂಧನವಾಗಿದೆ. ಲೋಕಾಯುಕ್ತದಲ್ಲಿ ಕೋಟ್ಯಾಂತರ ರೂ. ಹಗರಣ ನಡೆದಿದೆ. ಇನ್ನಾದರೂ ಜನರಿಗೆ ನಿಜಾಂಶ ಏನೆಂದು ತಿಳಿಯಲಿ' ಎಂದು ಶೆಟ್ಟರ್ ಹೇಳಿದರು.

'ಈಗಲಾದೂ ಲೋಕಾಯುಕ್ತರು ರಾಜೀನಾಮೆ ಕೊಡಲಿ'

'ಈಗಲಾದೂ ಲೋಕಾಯುಕ್ತರು ರಾಜೀನಾಮೆ ಕೊಡಲಿ'

'ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರು ಈಗಲಾದರೂ ರಾಜೀನಾಮೆ ನೀಡಲಿ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.'ಭ್ರಷ್ಟರಿಗೆ ಕಠಿಣವಾದ ಶಿಕ್ಷೆಯಾಗಬೇಕು. ಲೋಕಾಯುಕ್ತದ ಪಾರದರ್ಶಕತೆ ಬಗ್ಗೆಯೇ ಜನರಿಗೆ ಅನುಮಾನವಿದೆ. ಆದ್ದರಿಂದ ಬೇಗ ತನಿಖೆ ನಡೆದು ಸತ್ಯಾಂಶ ಹೊರಬರಬೇಕು' ಎಂದು ತಿಳಿಸಿದರು.

ತನಿಖೆಯಲ್ಲ ಇದೊಂದು ಮಹತ್ವದ ಹೆಜ್ಜೆ

ತನಿಖೆಯಲ್ಲ ಇದೊಂದು ಮಹತ್ವದ ಹೆಜ್ಜೆ

'ಅಶ್ವಿನ್ ರಾವ್ ಬಂಧನ ಎಸ್‌ಐಟಿ ತನಿಖೆಯಲ್ಲಿ ಮಹತ್ವದ ಹೆಜ್ಜೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪ್ರತಿಕ್ರಿಯೆ ನೀಡಿದರು.
'ನಾವು ಎಸ್‌ಐಟಿ ಜೊತೆ ಮಾತನಾಡಿದಾಗಲೇ ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಶ್ವಿನ್ ರಾವ್ ಅವರನ್ನು ಬಂಧಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಬೇಗ ತನಿಖೆ ಪೂರ್ಣಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂಬ ಭರವಸೆ ಇದೆ' ಎಂದು ಅವರು ಹೇಳಿದ್ದಾರೆ.

'ಸಾಕ್ಷಿ ನಾಶವಾಗದಿರಲಿ ಎಂಬುದು ಆಶಯ'

'ಸಾಕ್ಷಿ ನಾಶವಾಗದಿರಲಿ ಎಂಬುದು ಆಶಯ'

'ತಡವಾಗಿಯಾದರೂ ಅಶ್ವಿನ್ ರಾವ್ ಬಂಧನವಾಗಿದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಅವರು ಅಶ್ವಿನ್ ರಾವ್ ಬಂಧನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ. ಲೋಕಾಯುಕ್ತ ನ್ಯಾ.ಭಾಸ್ಕರಾವ್ ಇನ್ನೂ ರಾಜೀನಾಮೆ ನೀಡಿಲ್ಲ. ಸಾಕ್ಷಿ ನಾಶವಾಗದಿರಲಿ ಎಂಬುದು ನಮ್ಮ ಆಶಯ' ಎಂದು ಕುಮಾರಸ್ವಾಮಿ ಹೇಳಿದರು.

'ರಾಜೀನಾಮೆ ಕೇಳುವ ಅಧಿಕಾರವಿಲ್ಲ'

'ರಾಜೀನಾಮೆ ಕೇಳುವ ಅಧಿಕಾರವಿಲ್ಲ'

ಅಶ್ವಿನ್ ರಾವ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು, 'ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಸತ್ಯಾಂಶ ಹೊರಬರುತ್ತದೆ. ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಆದರೆ, ರಾಜೀನಾಮೆ ಕೊಟ್ಟಿಲ್ಲ. ಅವರ ರಾಜೀನಾಮೆ ಕೇಳುವ ಅಧಿಕಾರ ಸರ್ಕಾರಕ್ಕೆ ಇಲ್ಲ' ಎಂದು ಹೇಳಿದರು.

'ಸರ್ಕಾರ ಯಾವುದೇ ರಾಜಕೀಯ ಮಾಡುತ್ತಿಲ್ಲ'

'ಸರ್ಕಾರ ಯಾವುದೇ ರಾಜಕೀಯ ಮಾಡುತ್ತಿಲ್ಲ'

'ಲೋಕಾಯುಕ್ತದಲ್ಲಿ ನಡೆದ ಹಗರಣದ ಬಗ್ಗೆ ಎಸ್‌ಐಟಿ ತನಿಖೆ ಮಾಡುತ್ತಿದೆ. ತನಿಖೆಯ ಎಲ್ಲಾ ಜವಾಬ್ದಾರಿಗಳನ್ನು ಎಸ್‌ಐಟಿ ನೋಡಿಕೊಳ್ಳುತ್ತಿದೆ. ಸರ್ಕಾರ ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯೆ ನೀಡಿದರು. 'ಪ್ರತಿಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ' ಎಂದು ಅವರು ಆರೋಪಿಸಿದರು.

'ಲೋಕಾಯುಕ್ತರು ರಾಜೀನಾಮೆ ನೀಡಲಿ'

'ಲೋಕಾಯುಕ್ತರು ರಾಜೀನಾಮೆ ನೀಡಲಿ'

'ಲೋಕಾಯುಕ್ತದಲ್ಲಿನ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಶ್ವಿನ್ ರಾವ್ ಅವರನ್ನು ಬಂಧಿಸಿರುವುದನ್ನು ಸ್ವಾಗತಿಸುತ್ತೇನೆ. ಇನ್ನಾದರೂ ಲೋಕಾಯುಕ್ತ ನ್ಯಾ.ಭಾಸ್ಕರಾವ್ ರಾಜೀನಾಮೆ ನೀಡಲಿ, ಇಲ್ಲವಾದಲ್ಲಿ ಸಾಕ್ಷಿಗಳು ನಾಶವಾಗಲು ಅವಕಾಶ ಇರುತ್ತದೆ' ಎಂದು ಜೆಡಿಎಸ್‌ ಶಾಸಕ ವೈಎಸ್‌ವಿ ದತ್ತಾ ಆತಂಕ ವ್ಯಕ್ತಪಡಿಸಿದ್ದಾರೆ.

'ಭಾಸ್ಕರರಾವ್ ಅವರನ್ನು ಶೀಘ್ರದಲ್ಲಿಯೇ ಬಂಧಿಸಬೇಕು'

'ಭಾಸ್ಕರರಾವ್ ಅವರನ್ನು ಶೀಘ್ರದಲ್ಲಿಯೇ ಬಂಧಿಸಬೇಕು'

'ಎಸ್‌ಐಟಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಅನ್ನಿಸುತ್ತಿದೆ. ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರನ್ನು ಎಸ್‌ಐಟಿ ಬಂಧಿಸಬೇಕು. ಮುಖ್ಯಮಂತ್ರಿಗಳು ಲೋಕಾಯುಕ್ತರ ರಾಜೀನಾಮೆಗೆ ಒತ್ತಾಯಿಸಬೇಕು' ಎಂದು ಆಮ್ ಆದ್ಮಿ ಪಕ್ಷದ ಮುಖಂಡ ರವಿಕೃಷ್ಣಾ ರೆಡ್ಡಿ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

'ಸಿಬಿಐ ತನಿಖೆಗೆ ವಹಿಸಿದರೆ ಸತ್ಯಾಂಶ ಹೊರಬರುತ್ತದೆ'

'ಸಿಬಿಐ ತನಿಖೆಗೆ ವಹಿಸಿದರೆ ಸತ್ಯಾಂಶ ಹೊರಬರುತ್ತದೆ'

'ಅಶ್ವಿನ್ ರಾವ್ ಬೆಂಗಳೂರಿನಲ್ಲೇ ಇದ್ದರು ಅವರನ್ನು ಬಂಧಿಸಲು ಇಷ್ಟು ದಿನ ಬೇಕಾಯಿತೇ?' ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪ್ರಶ್ನಿಸಿದ್ದಾರೆ. 'ಈ ಹಗರಣದಲ್ಲಿ ಐಎಎಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಆದ್ದರಿಂದ ಈ ಬಗ್ಗೆ ಸಿಬಿಐ ತನಿಖೆಯಾಗಬೇಕು' ಎಂದು ಆರ್.ಅಶೋಕ್ ಒತ್ತಾಯಿಸಿದರು.

English summary
The Special Investigation Team (SIT) arrested Karnataka Lokayukta Justice Y.Bhaskar Rao son Ashwin Rao in connection with corruption case in Lokayukta. Who said what.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X