ಎಚ್ಚೆತ್ತ ಕರ್ನಾಟಕ ಸರ್ಕಾರ : ನೀರು ಸಂಗ್ರಹಕ್ಕೆ ಯೋಜನೆ

Written By:
Subscribe to Oneindia Kannada

ಬೆಂಗಳೂರು, ಮೇ, 14: ಬರ, ಕುಡಿಯುವ ನೀರಿನ ತಾತ್ವಾರ ಎದುರಿಸುತ್ತಿರುವ ಕರ್ನಾಟಕ ಕೆಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಮಳೆ ನೀರು ಕೊಯ್ಲು ಮತ್ತು ನೀರು ಸಂಗ್ರಹಕ್ಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಕರ್ನಾಟಕದ 3562 ಕೆರೆಗಳಲ್ಲಿ ಈ ಬಾರಿಯ ಮಳೆಗಾಲದಲ್ಲಿ ನೀರು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ್‌ ತಂಗಡಗಿ ತಿಳಿಸಿದ್ದಾರೆ. ಕೆರೆಗಳ ಹೂಳು ತೆಗೆಯಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.[ಉತ್ತರ ಕನ್ನಡದ ಜೀವನಾಡಿ ಅಘನಾಶಿನಿಯೂ ಬರಿದು]

water

90.95 ಕೋಟಿ ರೂ. ವೆಚ್ಚದಲ್ಲಿ 2957 ಕೆರೆಗಳ ಒತ್ತುವರಿ ತೆರವು ಹಾಗೂ ರಾಜಕಾಲುವೆಗಳ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೆರೆಗಳಲ್ಲಿ ನೀರು ಸಂಗ್ರಹಿಸಿ ಆ ಮೂಲಕ ಅಂತರ್ಜಲ ಮಟ್ಟ ಸುಧಾರಣೆ ಮಾಡಲಾಗುವುದು. ಉದ್ಯೋಗ ಖಾತ್ರಿ ಯೋಜನೆಯನ್ನು ಇದಕ್ಕೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.[ಬಕ್ಕ ಬರಿದಾದ ಕೆಆರ್‌ಎಸ್, ಕೊಡಗಿನಲ್ಲಿ ಮಳೆ ಸಿಂಚನ]

ಹೂಳು ಅವ್ಯವಹಾರ ಸಿಐಡಿಗೆ: ಕೊಪ್ಪಳ ಜಿಲ್ಲೆಯಲ್ಲಿ ಕೆರೆ ಹೂಳು ತೆಗೆಯುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದ ದೂರುಗಳು ಕೇಳಿಬಂದಿದ್ದು ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದು ಎಂದು ತಿಳಿಸಿದರು.

English summary
Minister for Minor Irrigation Shivaraj Tangadagi suspended 26 engineers of the Minor Irrigation and Public Works departments and ordered a probe into irregularities in the execution of works involving over Rs. 34 crore. Forty-seven contractors have been blacklisted for producing bogus bills.
Please Wait while comments are loading...