ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಮುಕ್ತ ಭಾರತ ಬಿಜೆಪಿಯ ಈಡೇರದ ಕನಸು!

|
Google Oneindia Kannada News

ಬೆಂಗಳೂರು, ಅ.20 : 'ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಬಿಜೆಪಿ ಕಸಸು ನನಸಾಗುವುದಿಲ್ಲ. ನಿನ್ನೆ ಮೊನ್ನೆ ಹುಟ್ಟಿದ ಬಿಜೆಪಿ ಪಕ್ಷ ಕಾಂಗ್ರೆಸ್ ಪಕ್ಷವನ್ನು ಏನೂ ಮಾಡಲು ಸಾಧ್ಯವಿಲ್ಲ' ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷ ಬಹುಮತಗಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಎಚ್.ಆಂಜನೇಯ ಅವರು, ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಕರ್ನಾಟಕ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದರು. ಎರಡು ರಾಜ್ಯ ಗೆದ್ದ ಬಿಜೆಪಿ ನಾಯಕರು ಎಲ್ಲಾ ರಾಜ್ಯಗಳಲ್ಲಿ ಜಯಗಳಿಸಿದ ಭಮೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು.

H Anjaneya

ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಅದು ಎಂದಿಗೂ ಸಾಧ್ಯವಿಲ್ಲ. ಸೂರ್ಯ ಚಂದ್ರ ಇರುವವರೆಗೂ ಬಿಜೆಪಿ ನಾಯಕರ ಈ ಆಸೆ ಈಡೇರಿವುದಿಲ್ಲ ಎಂದು ಹೇಳಿದ ಆಂಜನೇಯ ಅವರು, ದೇಶದಲ್ಲಿ ರಾಹುಲ್ ಹಠಾವೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. [ಮಹಾರಾಷ್ಟ್ರ, ಹರಿಯಾಣ ಫಲಿತಾಂಶ ಇಲ್ಲಿದೆ]

ಕಾಂಗ್ರೆಸ್ ಪಕ್ಷಕ್ಕೆ ಜನರ ಬೆಂಬಲವಿದೆ ಎಂದು ಹೇಳಿದ ಆಂಜನೇಯ ಅವರು, ಕರ್ನಾಟಕದಲ್ಲಿ ಈಗಲೂ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತಪಡೆದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿಗೆ ಗಂಭೀರತೆ ಇಲ್ಲ : 'ರಾಹುಲ್ ಗಾಂಧಿ ಸಮರ್ಥ ನಾಯಕ ಆದರೆ, ಗಂಭೀರತೆ ಇಲ್ಲ' ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಸೋಮವಾರ ಮಾತನಾಡಿದ ಅವರು, 'ದೇಶದಲ್ಲಿ ಈಗ ನರೇಂದ್ರ ಮೋದಿ ಅವರ ಅಲೆ ಉಳಿದಿಲ್ಲ, ಮೋದಿ ಅವರಿಗೆ ಸಮರ್ಥನಾಯಕನಾಗುವ ಯಾವುದೇ ಅರ್ಹತೆ ಇಲ್ಲ, ಅವರು ಮಾತಿನ ಮೂಲಕ ಜನರನ್ನು ಕನಸಿನ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ' ಎಂದು ಹೇಳಿದರು.

English summary
Karnataka Social Welfare Minister H Anjaneya said BJPs Congress mukt bharat not possible, Congress is a oldest party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X