ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ರಾಜಭವನದಲ್ಲಿ ಶುಕ್ರವಾರ ಏನೇನಾಯ್ತು?

|
Google Oneindia Kannada News

ಬೆಂಗಳೂರು, ಜ.23 : ಶುಕ್ರವಾರ ಕರ್ನಾಟಕದ ರಾಜಭವನ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ರಾಜಭವನಕ್ಕೆ ಭೇಟಿ ನೀಡಿದ್ದರು. ರಾಜ್ಯಪಾಲ ವಜೂಭಾಯಿ ರುಡಾಭಾಯಿ ವಾಲಾ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಸಿಎಂ ಮರಳಿದ ನಂತರ ಬಿಜೆಪಿ ನಾಯಕರು ರಾಜಭವನಕ್ಕೆ ಆಗಮಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ವಿವಾದವು ರಾಜಭವನದ ಅಂಗಳವನ್ನು ತಲುಪಿದೆ. ಸಿಎಂ ವಿರುದ್ಧ ದೂರು ನೀಡಲು ಅನುಮತಿ ನೀಡುವಂತೆ ನಟರಾಜ್ ಶರ್ಮ ಎಂಬುವವರು ರಾಜ್ಯಪಾಲರಿಗೆ ಮನವಿ ಮಾಡಲು ಅವಕಾಶ ಕೇಳಿದ್ದರು. ಆದರೆ, ಇಂದು ರಾಜ್ಯಪಾಲರು ಸಮಯಾವಕಾಶ ನೀಡಲಿಲ್ಲ. [ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?]

Vajubhai Rudabhai

ಸಿಎಂ ರಾಜ್ಯಪಾಲರ ಭೇಟಿ : ಇಂದು ಬೆಳಗ್ಗೆ 11.30ರ ವೇಳೆಗೆ ಸಿಎಂ ಸಿದ್ದರಾಮಯ್ಯ ರಾಜಭವನಕ್ಕೆ ಆಗಮಿಸಿದರು. ಇಂದು ರಾಜ್ಯಪಾಲ ವಜೂಭಾಯಿ ವಾಲಾ ಅವರ 73ನೇ ಹುಟ್ಟು ಹಬ್ಬ. ರಾಜ್ಯಪಾಲರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ, ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚಿಸದೇ ಅಲ್ಲಿಂದ ಮರಳಿದರು. [ಅರ್ಕಾವತಿ ಬಡಾವಣೆ ಫೈಟ್ ಯಾರು, ಏನು ಹೇಳಿದರು?]

ಸಿಎಂ ವಿರುದ್ಧ ದೂರು : ಮಧ್ಯಾಹ್ನ 2.30ರ ವೇಳೆಗೆ ಸಾಮಾಜಿಕ ಕಾರ್ಯಕರ್ತ ನಟರಾಜ್ ಶರ್ಮ ಎಂಬುವವರು ಕೆಲವು ವಕೀಲರೊಂದಿಗೆ ರಾಜಭವನಕ್ಕೆ ಆಗಮಿಸಿ ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ದಾಖಲು ಮಾಡಲು ಅನುಮತಿ ಕೇಳಿದ್ದರು. ಆದರೆ, ಇಂದು ರಾಜ್ಯಪಾಲರು ಸಮಯ ನೀಡಲಿಲ್ಲ.

ಬಿಜೆಪಿ ನಾಯಕರ ಆಗಮನ : ಮಧ್ಯಾಹ್ನ 1.30ರ ಸುಮಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮುಂತಾದ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಹುಟ್ಟು ಹಬ್ಬದ ಶುಭಾಶಯ ಸಲ್ಲಿಸಿದರು.

ರಾಜಭವನದ ಹೊರಗೆ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ರಾಜ್ಯಪಾಲರ ಜೊತೆ ನಮ್ಮದು ಸೌಹಾರ್ದ ಭೇಟಿಯಾಗಿತ್ತು. ನಾವು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ದೂರು ನೀಡಲು ಹೋಗಿಲ್ಲ. ಆದರೆ, ಬಿಜೆಪಿ ಖಾಸಗಿ ವ್ಯಕ್ತಿಯಿಂದ ದೂರು ನೀಡಲು ನಿರ್ಧರಿಸಿದೆ. ಬಿಜೆಪಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

English summary
Karnataka Chief Minister Siddaramaiah and BJP leaders meet Governor Vajubhai Rudabhai Vala on Friday at Raj Bhavan in Bengaluru, wishes him on his 73rd birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X