ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಢೀರನೆ ಶಾಲೆಗೆ ಬಂದ ಸಿದ್ದು ಕಂಡು ಮಕ್ಕಳಿಗೆ ಹಿಗ್ಗೋಹಿಗ್ಗು

|
Google Oneindia Kannada News

ಕೊಪ್ಪಳ, ಜ.30 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೊಪ್ಪಳ ತಾಲ್ಲೂಕಿನ ಕನಕನಕಲ್ಲು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಮುಖ್ಯಮಂತ್ರಿಗಳನ್ನು ಕಂಡ ಮಕ್ಕಳು ಸಂತಸದಿಂದ ಅವರನ್ನು ಬರಮಾಡಿಕೊಂಡರು. ಶಾಲೆಯಲ್ಲಿ ಸಮಸ್ಯೆಗಳಿವೆಯೇ? ಎಂದು ಸಿಎಂ ಮಕ್ಕಳಿಂದ ಮಾಹಿತಿ ಪಡೆದುಕೊಂಡರು.

ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಪ್ಪಳದಿಂದ ಕುಷ್ಟಗಿಗೆ ತೆರಳುತ್ತಿದ್ದಾಗ ಮಾರ್ಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಗಮನಿಸಿದ ಸಿಎಂ ಕಾರು ನಿಲ್ಲಿಸುವಂತೆ ಸೂಚನೆ ನೀಡಿದರು. ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಮಕ್ಕಳ ಬಳಿ ತೆರಳಿದರು.

ಅನಿರೀಕ್ಷಿತವಾಗಿ ಶಾಲೆಗೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಕಂಡ ಮಕ್ಕಳು ಅವರಿಗೆ ನಮಸ್ಕರಿಸಿ, ಮುಖ್ಯಮಂತ್ರಿಯವರನ್ನು ಶಾಲೆಯೊಳಗೆ ಸಂತಸದಿಂದ ಬರಮಾಡಿಕೊಂಡರು. ಮುಖ್ಯಮಂತ್ರಿಗಳ ಅನಿರೀಕ್ಷಿತ ಭೇಟಿ ಶಾಲೆಯ ಶಿಕ್ಷರಿಗೂ ಅಚ್ಚರಿ ಉಂಟು ಮಾಡಿತು.

Koppal

ಶಾಲೆಯ ವ್ಯವಸ್ಥೆ ಬಗ್ಗೆ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿದ ಸಿಎಂ ಸಿದ್ದರಾಮಯ್ಯ ಅವರು, ಸ್ನಾನ ಮಾಡಲು ಪ್ರತಿದಿನವೂ ಬಿಸಿ ನೀರು ದೊರೆಯುತ್ತಿದೆಯೇ?, ಶಾಲೆಯಲ್ಲಿನ ಉಪಾಹಾರ ಹಾಗೂ ಭೋಜನದ ವ್ಯವಸ್ಥೆ ಹೇಗಿದೆ? ಬೆಳಗಿನ ಉಪಾಹಾರಕ್ಕೆ ನೀಡುವ ತಿನಿಸುಗಳೇನು ? ಊಟಕ್ಕೆ ಏನು ನೀಡಲಾಗುತ್ತದೆ? ಎಂದು ಮಾಹಿತಿ ಪಡೆದರು.[ಕುಕನೂರು ಗ್ರಾಮದ ವಿದ್ಯಾರ್ಥಿಗಳಿಗೆ ವೆಲ್ಕಂ ಬ್ರೇಕ್]

ಮುಖ್ಯಮಂತ್ರಿಯವರ ಎಲ್ಲಾ ಪ್ರಶ್ನೆಗಳಿಗೂ ಮಕ್ಕಳು ಸಕಾರಾತ್ಮಕ ಉತ್ತರ ನೀಡಿದರು. ಸಮಸ್ಯೆ ಇದ್ದರೆ ಹೇಳಿ ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಸಿಎಂ ಮಕ್ಕಳಿಗೆ ವಿಶ್ವಾಸ ತುಂಬಿದರು. ಮುಖ್ಯಮಂತ್ರಿಯವರ ಭರವಸೆಯ ಮಾತುಗಳಿಗೆ ಸ್ಪಂದಿಸಿದ ಮಕ್ಕಳು ಈ ವಸತಿ ಶಾಲೆಯು ಮನೆಗಿಂತಲೂ ಹೆಚ್ಚು ಚೆನ್ನಾಗಿದೆ ಎಂದು ತಿಳಿಸಿದರು. [ಕೊಪ್ಪಳ ರೈತರ ಬಾಯಲ್ಲಿ ಪಪ್ಪಾಯಿ ಜಪ!]

ಶಾಲೆಯ ಶಿಕ್ಷಕರು ವಸತಿ ಶಾಲೆಯ ಫಲಿತಾಂಶವು ಶೇಕಡಾ 100 ರಷ್ಟು ಇದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ರಾಷ್ಟ್ರಮಟ್ಟದಲ್ಲಿ ಕಬ್ಬಡಿ ಪಂದ್ಯವನ್ನು ಪ್ರತಿನಿಧಿಸಿದ ಶಾಲೆಯ ಮೂವರು ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು. ಮಕ್ಕಳನ್ನು ಸಿಎಂ ಅಭಿನಂದಿಸಿದರು.

Koppal

ಮುಖ್ಯಮಂತ್ರಿಗಳ ಜೊತೆ ಸಣ್ಣ ನೀರಾವರಿ ಸಚಿವ ಶಿವರಾಜ ಸಂಗಪ್ಪ ತಂಗಡಗಿ, ಸಹಕಾರ ಮತ್ತು ಸಕ್ಕರೆ ಸಚಿವ ಎಚ್. ಎಸ್. ಮಹದೇವ ಪ್ರಸಾದ್, ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಜಿಲ್ಲಾಧಿಕಾರಿ ಆರ್. ರಾಮಚಂದ್ರ ಜನ್ನು ಮುಂತಾದವರು ಇದ್ದರು.

English summary
Karnataka Chief Minister Siddaramaiah made a surprise visit to a Morarji Desai Residential School Kanakanakallu village of Koppal district on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X