ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳೊಂದಿಗೆ ಸಿಎಂ ಸಿದ್ದರಾಮಯ್ಯ ಸಂವಾದ

|
Google Oneindia Kannada News

ಬೆಂಗಳೂರು, ನ.13 : 'ಮಕ್ಕಳು ದೇವರ ಸಮಾನ. ಇತ್ತೀಚೆಗೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು ಪ್ರಾಣಿಗಳಿಗಿಂತಲೂ ಕಡೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಕ್ಕಳ ದಿನಾಚರಣೆ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಗುರುವಾರ ಮಕ್ಕಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಮಕ್ಕಳ ಸಂಸತ್ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ರಾಜ್ಯದ ವಿವಿಧ ಶಾಲೆಗಳ ಸುಮಾರು 250 ಮಕ್ಕಳು ಸಂವಾದದಲ್ಲಿ ಪಾಲ್ಗೊಂಡಿದ್ದಾರೆ.

ಮಕ್ಕಳ ಸಂಸತ್ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸದಸ್ಯ ಕೃಷ್ಣಭಟ್, ಆರೋಗ್ಯ ಸಚಿವ ಯು.ಟಿ.ಖಾದರ್ ಮುಂತಾದವರು ಪಾಲ್ಗೊಂಡಿದ್ದಾರೆ. [ಮಕ್ಕಳ ಮುಂದೆ ಬಾಲ್ಯದ ರಹಸ್ಯ ಬಿಚ್ಚಿಟ್ಟ ಮೋದಿ]

ಸಚಿವರನ್ನು ನೋಡಿದ್ದೀರಾ? : ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಚಿವೆ ಉಮಾಶ್ರೀ ಅವರನ್ನು ನೋಡಿದ್ದೀರಾ?, ಸಚಿವೆಯಾಗಿ ನೋಡಿದ್ದೀರಾ? ಅಥವ ಸಿನಿಮಾದಲ್ಲಿ ನೋಡಿದ್ದೀರಾ? ಎಂದು ಹಾಸ್ಯ ಚಟಾಕಿ ಹಾರಿಸುತ್ತಾ ಸಂವಾದ ನಡೆಸಿದರು. ಶಾಲೆಗಳಲ್ಲಿ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಿಎಂ, ಪರಿಚಿತರಿಂದಲೇ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಮಕ್ಕಳು ದೇವರ ಸಮಾನ ಅವರ ಮೇಲೆ ದೌರ್ಜನ್ಯ ನಡೆಸುವವರು ಎರಡು ಕಾಲಿನ ಮೃಗಗಳಂತೆ, ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಕ್ಕಳಿಗೆ ಭರವಸೆ ನೀಡಿದರು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಶಾಲೆಗಳಿಗೆ ನೀಡಲಾಗಿದೆ. ಅದನ್ನು ಪಾಲನೆ ಮಾಡದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇಂಗ್ಲಿಷ್ ಕಲಿಯಬೇಡಿ ಎನ್ನೋಲ್ಲ : ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕೆಂದು ತಜ್ಞರ, ಸಾಹಿತಿಗಳ ಒತ್ತಾಯವಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಆದೇಶ ಜಾರಿ ಮಾಡಿದೆ. ಆದರೆ, ಸುಪ್ರೀಂಕೋರ್ಟ್‍ನಲ್ಲಿ ಈ ಆದೇಶಕ್ಕೆ ಮನ್ನಣೆ ದೊರಕಿಲ್ಲ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, ಇಂಗ್ಲಿಶ್ ಕಲಿಯಬೇಡಿ ಎಂದು ನಾನು ಯಾರಿಗೂ ಹೇಳುವುದಿಲ್ಲ, ಆದರೆ, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಾಗಲಿ ಎಂದರು.

Bengaluru


ನಂದಿ ಕುಣಿತಕ್ಕೆ ಹೋಗುತ್ತಿದ್ದೆ : '1 ರಿಂದ 4ನೇ ತರಗತಿವರೆಗೆ ನಾನು ಶಾಲೆಗೆ ಹೋಗಲಾಗಲಿಲ್ಲ. ನನ್ನ ಪೋಷಕರು, ಶಾಲೆಗೆ ಕಳುಹಿಸದೇ ನಂದಿ ಕುಣಿತಕ್ಕೆ ಕಳುಹಿಸುತ್ತಿದ್ದರು. ನಂದಿ ಕುಣಿತದ ಮೇಷ್ಟ್ರು ನನಗೆ ಅಕ್ಷರಾಭ್ಯಾಸ ಮಾಡಿಸಿದರು'.

ಎಮ್ಮೆ ಕಾಯುತ್ತಿದ್ದೆ : ಮಕ್ಕಳೊಂದಿಗೆ ಮಾತನಾಡುತ್ತಾ ತಮ್ಮ ತುಂಟಾಟದ ಬಗ್ಗೆ ಹೇಳಿದ ಸಿಎಂ 'ಕೆರೆಯಲ್ಲಿ ಈಜಾಡಿಕೊಂಡು, ಸ್ನೇಹಿತರ ಜೊತೆ ಜಗಳವಾಡಿಕೊಂಡು ಮನೆಗೆ ಬರುತ್ತಿದ್ದೆ. ಶನಿವಾರ, ಭಾನುವಾರ ಎಮ್ಮೆ ಮೇಯಿಸೋಕೆ ಹೋಗುತ್ತಿದ್ದೆ' ಎಂದರು.

English summary
Around 250 students of government schools participated in the interaction with Chief Minister Siddaramaiah in Children's Parliament Vidhana Soudha, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X