ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ

|
Google Oneindia Kannada News

ಬೆಂಗಳೂರು, ಆಗಸ್ಟ್ 31 : ಅಕ್ರಮ ಭೂ ಒತ್ತುವರಿ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ಪರಿಹರಿಸುವ ವಿಶೇಷ ನ್ಯಾಯಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‍.ನಾರಾಯಣ್‍ ಅವರ ನೇತೃತ್ವದಲ್ಲಿ ನ್ಯಾಯಾಲಯ ಸ್ಥಾಪನೆಯಾಗಿದೆ.

ಬೆಂಗಳೂರಿನ ಕಂದಾಯ ಭವನದ 3ನೇ ಮಹಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಕೋರ್ಟ್ ಉದ್ಘಾಟನೆ ಮಾಡಿದರು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಂದರ್ಭದಲ್ಲಿ ಉಪಸ್ಥಿತರಿದ್ದರು.[ಭೂಕಬಳಿಕೆ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ]

ಅಕ್ರಮ ಭೂ ಒತ್ತುವರಿ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ, ಭೂಗಳ್ಳರಿಗೆ ಶಿಕ್ಷೆ ವಿಧಿಸಲು 'ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ' ಸ್ಥಾಪನೆ ಮಾಡಲಾಗಿದೆ. ಭೂ ಕಬಳಿಕೆ ವಿಶೇಷ ಅಧಿನಿಯಮ 2011ರಡಿಯಲ್ಲಿ ಈ ವಿಶೇಷ ನ್ಯಾಯಲಯವನ್ನು ಸ್ಥಾಪಿಸಲಾಗಿದೆ.[ರಾಜಕಾಲುವೆ ಒತ್ತುವರಿ ತೆರವು ಎಂಬ ನಿಗೂಢ ರಹಸ್ಯ]

ವಿಶೇಷ ಕೋರ್ಟ್ ಕರ್ನಾಟಕ ಭೂಕಬಳಿಕೆ ತಡೆ ಕಾಯ್ದೆ 2011ರ ಸೆಕ್ಷನ್‌ 7ರ ಅಡಿ ಬರುವ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಲಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್‍.ನಾರಾಯಣ್‍ ಅವರ ನೇತೃತ್ವದಲ್ಲಿ ಪೀಠ ಸ್ಥಾಪನೆಯಾಗಿದೆ...[ಭೂ ಒತ್ತುವರಿ ತೆರವಿಗೆ ಕ್ರಮ]

ನ್ಯಾಯಾಲಯದ ಸದಸ್ಯರು

ನ್ಯಾಯಾಲಯದ ಸದಸ್ಯರು

* ಎಚ್.ಎನ್‍.ನಾರಾಯಣ್‍ - ಅಧ್ಯಕ್ಷರು
* ರಾಯಪ್ಪ ಹನುಮಂತಪ್ಪ ರೆಡ್ಡಿ - ನ್ಯಾಯಿಕ ಸದಸ್ಯರು
* ಬಿ.ಬಾಲಕೃಷ್ಣ - ನ್ಯಾಯಿಕ ಸದಸ್ಯರು
* ಮನೀಶ್‍ ಮೌದ್ಗಿಲ್ - ಕಂದಾಯ ಸದಸ್ಯರು
* ಹಪ್ಸಿಬಾರಾಣಿ ಕೊರ್ಲಾಪಾಟಿ - ಕಂದಾಯ ಸದಸ್ಯರು

ವಿಶೇಷ ಕೋರ್ಟ್‌ ಸ್ಥಾಪನೆ ಮಾಡಿದ್ದು ಏಕೆ?

ವಿಶೇಷ ಕೋರ್ಟ್‌ ಸ್ಥಾಪನೆ ಮಾಡಿದ್ದು ಏಕೆ?

ಭೂಕಬಳಿಕೆ ಎಂದು ಆಪಾದಿಸಲಾದ ಯಾವುದೇ ಕೃತ್ಯದ ಶೀಘ್ರ ವಿಚಾರಣೆಗೆ ಮತ್ತು ಕಬಳಿಸಲಾದ ಭೂಮಿಯ ಒಡೆತನ ಮತ್ತು ಕಬಳಿಸಲಾದ ಹಕ್ಕು ಸ್ವಾಮ್ಯಕ್ಕೆ ಅಥವಾ ಕಾನೂನು ಸಮ್ಮತ ಸ್ವಾಧೀನತೆಗೆ ಸಂಬಂಧಪಟ್ಟ ಮೊಕದ್ದಮೆಗಳ ಮತ್ತು ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ XIV-ಎ ಅಧ್ಯಾಯದಲ್ಲಿ ನಿರ್ಧಿಷ್ಟಪಡಿಸಲಾದಂಥ ಅಪರಾಧಗಳ ಅಧಿವಿಚಾರಣೆ ನಡೆಸುವುದಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ.

ಬೆಂಗಳೂರಲ್ಲಿ ಇರಲಿದೆ ಕೋರ್ಟ್

ಬೆಂಗಳೂರಲ್ಲಿ ಇರಲಿದೆ ಕೋರ್ಟ್

ಬೆಂಗಳೂರನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕೋರ್ಟ್ ಸ್ಥಾಪನೆಯಾಗಲಿದೆ. ಇಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ನೋಡಿಕೊಂಡು ಅಗತ್ಯ ವಿದ್ದರೆ ಹೆಚ್ಚುವರಿ ನ್ಯಾಯಾಲಯಗಳನ್ನು ಹಾಗೂ ವಿಭಾಗೀಯ ಪೀಠಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ.

ಕಂದಾಯ ಭವನದಲ್ಲಿದೆ ಕೋರ್ಟ್

ಕಂದಾಯ ಭವನದಲ್ಲಿದೆ ಕೋರ್ಟ್

ಬೆಂಗಳೂರಿನ ಕಂದಾಯ ಭವನದ 3ನೇ ಮಹಡಿಯಲ್ಲಿ ಕೋರ್ಟ್ ಕಾರ್ಯನಿರ್ವಹಣೆ ಮಾಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಕೋರ್ಟ್ ಉದ್ಘಾಟನೆ ಮಾಡಿದರು.

English summary
Karnataka Chief Minister Siddaramaiah on August 31st 2016 inaugurated the special court for land grab case at Kandaya Bhavan, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X