ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮಗುವಿಗೆ ಜೀವರಕ್ಷಕ ಪೋಲಿಯೋ ಹಾಕಿಸಿದ್ರಾ?

|
Google Oneindia Kannada News

ಬೆಂಗಳೂರು, ಜ, 18: ನಿಮ್ಮ ಮಗುವಿಗೆ ಜೀವರಕ್ಷಕ ಪೋಲಿಯೋ ಹಾಕಿಸಿದ್ರಾ? ಇಲ್ಲವಾ.. ಹಾಗಾದರೆ ಕೂಡಲೇ ಹಾಕಿಸಿ, ಎಲ್ಲಾ ಆಸ್ಪತ್ರೆ, ಬಸ್ ನಿಲ್ದಾಣಗಳಲ್ಲಿ ಸಂಜೆ 5 ಗಂಟೆವರೆಗೂ ಪೋಲಿಯೋ ಹನಿ ಕಾರ್ಯಕ್ರಮ ಚಾಲ್ತಿಯಲ್ಲಿರುತ್ತದೆ.

ಮಗುವಿಗೆ ಪೋಲೀಯೋ ಹನಿ ಹಾಕುವ ಮೂಲಕ ಸಿಎಂ ಸಿದ್ದರಾಮಯ್ಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದರು. ಈ ಹಿಂದೆ ಎಷ್ಟೇ ಸಲ ಲಸಿಕೆ ಹಾಕಿದ್ದರೂ ಮತ್ತೊಮ್ಮೆ ಲಸಿಕೆ ಹಾಕಿಸಬೇಕು. ಈ ವರ್ಷ 75 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಗುರಿ ಹೊಂದಲಾಗಿದೆ. ಫೆ .22 ರಂದು ಮತ್ತೆ ಲಸಿಕೆ ಹಾಕಲಾಗುತ್ತಿದೆ. ನಾಗರಿಕರು ಸ್ವಯಂ ಪ್ರೇರಿತವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

bengaluru

ರಾಜ್ಯದಲ್ಲಿ 32,628 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 51,558 ತಂಡಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದು, ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ಎಲ್ಲ ಕಡೆ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು. ಆರೋಗ್ಯ ಸಚಿವ ಯು.ಟಿ.ಖಾದರ್ ಉಪಸ್ಥಿತರಿದ್ದರು.

ರಾಷ್ಟ್ರ ಪೊಲಿಯೋ ಮುಕ್ತ ಎಂದು ಹೇಳಲಾಗಿದ್ದರೂ ನೆರೆಯ ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ರೋಗ ಕಂಡುಬಂದಿರುವುದರಿಂದ ದೇಶಾದ್ಯಂತ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬಿಬಿಎಂಪಿ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ಪಪೊಲೀಯೋ ಹನಿ ಹಾಕಲಿದ್ದು ಬಸ್ ನಿಲ್ದಾಣ, ಆಸ್ಪತ್ರೆ, ಮೆಡಿಕ್ ಶಾಪ್ , ರೈಲು ನಿಲ್ದಾಣ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಹಾಕಲಾಗುತ್ತಿದೆ.

English summary
Bengaluru: Chief Minister Siddaraaiah inaugurated Pulse Polio immunisation programme in Bengaluru, on Sunday. Officials from Bruhat Bangalore Mahanagara Palike (BBMP) and the Health Department under Bengaluru (Urban) jointly conducting this event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X