ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕನ್ನ, ಮೂವರ ಬಂಧನ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 05 : ನಕಲಿ ಬಿಲ್‌ಗಳ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ವೈದ್ಯಕೀಯ ನೆರವು ದುರ್ಬಳಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಸುಮಾರು 3.39 ಕೋಟಿ ರೂ.ಗಳ ಈ ಹಗರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.

ಬಂಧಿತರನ್ನು ಕಲಬುರಗಿ ಜಿಲ್ಲೆಯ ಅಮೋಘಪ್ಪ, ತುಮಕೂರಿನ ಎಂ.ಕೆ.ಕಿರಣ್‌, ಮಂಡ್ಯದ ಸಿ.ಎಂ.ನಾಗರಾಜ್‌ ಎಂದು ಗುರುತಿಸಲಾಗಿದೆ. ಬೆಂಗಳೂರಿನ ವಿವಿಧ ಖಾಸಗಿ ಆಸ್ಪತ್ರೆಗಳ ನಕಲಿ ಬಿಲ್ ಮತ್ತು ಜನಪ್ರತಿನಿಧಿಗಳ ನಕಲಿ ಶಿಫಾರಸು ಪತ್ರವನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ.[196 ಕೋಟಿ ಲ್ಯಾಬ್ ಟೆಂಡರ್ ಅಕ್ರಮದ ಬಗ್ಗೆ ಸಿಐಡಿ ತನಿಖೆ]

vidhana soudha

ಆರೋಪಿ ಅಮೋಘಪ್ಪ ಕಲಬುರಗಿಯ ತನ್ನೂರಿನ ಜನರು ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳ ಜನರ ಬಳಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ನೆರವು ಕೊಡಿಸುವುದಾಗಿ ವಂಚಿಸಿದ್ದ. ಕಿರಣ್ ತುಮಕೂರು ಮತ್ತು ಗುಬ್ಬಿ ತಾಲೂಕಿನ 8 ಜನರ ಹೆಸರಿನಲ್ಲಿ ನಕಲಿ ದಾಖಲೆ ಸಿದ್ಧಪಡಿಸಿ ಚಂಚನೆ ಮಾಡಿದ್ದ. ನಾಗರಾಜ್ ಮಂಡ್ಯ, ಮದ್ದೂರಿನಲ್ಲಿ 16 ಜನರ ಹೆಸರಿನಲ್ಲಿ ನಕಲಿ ದಾಖಲೆ ಸಿದ್ಧಪಡಿಸಿ ವಂಚನೆ ಮಾಡಿದ್ದ.[ಸಿಐಡಿ ಮತ್ತು ನ್ಯಾಯಾಂಗ ತನಿಖೆಯ ನಡುವಿನ ವ್ಯತ್ಯಾಸವೇನು?]

ಆರೋಪಿಗಳಿಂದ ಬೆಂಗಳೂರಿನ ಸಾಗರ್, ಪೂರ್ಣಿಮಾ, ಮಲ್ಯ, ಫೋರ್ಟೀಸ್, ಅಪೋಲೋ, ನಾರಾಯಣ ಹೃದಯಾಲಯ, ಮಹಾರಾಷ್ಟ್ರದ ಯಶೋಧರಾ, ಅಶ್ವಿನಿ ಮುಂತಾದ ಆಸ್ಪತ್ರೆಗಳ ನಕಲಿ ಬಿಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಾರ್ಯಾಲಯದ ಪರಿಹಾರ ನಿಧಿ ವಿಭಾಗದ ದ್ವಿತೀಯ ದರ್ಜೆ ಸಹಾಯಕ ಲಿಂಗೇಗೌಡ ಅವರನ್ನು ಈಗಾಗಲೇ ಸಿಐಡಿ ಬಂಧಿಸಿದೆ.

ಏನಿದು ಹಗರಣ? : ಬಡವರ ವೈದ್ಯಕೀಯ ವೆಚ್ಚಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಈ ಯೋಜನೆಯನ್ನು ಕೆಲವರು ದುರುಪಯೋಗ ಪಡಿಸಿಕೊಂಡು ನಕಲಿ ಬಿಲ್‌ಗಳನ್ನು ಸಿದ್ಧಪಡಿಸಿ ಸುಮಾರು 3.39 ಕೋಟಿ ಹಣ ಪಡೆದಿದ್ದರು.

2015ರ ಅಕ್ಟೋಬರ್‌ನಲ್ಲಿ ವೈದ್ಯಕೀಯ ನೆರವು ಕೋರಿ ಸಲ್ಲಿಕೆಯಾಗಿದ್ದ ಕೆಲವು ಅರ್ಜಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಅವು ನಕಲಿ ಎಂದು ತಿಳಿದುಬಂದಿತ್ತು. ಮುಖ್ಯಮಂತ್ರಿಗಳ ಕಚೇರಿ ಈ ಬಗ್ಗೆ ವಿಧಾನಸೌಧ ಪೊಲೀಸರಿಗೆ ದೂರು ನೀಡಿತ್ತು. ನಂತರ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Criminal Investigation Department arrested three persons in connection with the misuse of Chief Minister's Relief Fund by using fake medical bills.
Please Wait while comments are loading...