ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಕಳೆದ ತಿಂಗಳೇ ಮೇಟಿ ಸಿಡಿ ನೋಡಿದ್ರು: ಶೆಟ್ಟರ್ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವರು ತಿಂಗಳ ಹಿಂದೆಯೇ ಮಾಜಿ ಸಚಿವ ಮೇಟಿ ರಾಸಲೀಲೆ ಸಿಡಿ ನೋಡಿದ್ದರು ಎಂದು ವಿರೋಧ ಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನೆಡೆಸಿದರು.

By Ananthanag
|
Google Oneindia Kannada News

ಕೊಪ್ಪಳ, ಡಿಸೆಂಬರ್ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ.ಪರಮೇಶ್ವರ ತಿಂಗಳ ಹಿಂದೆಯೇ ಮೇಟಿ ರಾಸಲೀಲೆ ಸಿಡಿ ನೋಡಿದ್ದರು ಎಂದು ವಿರೋಧ ಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಹತ್ವದ ಆರೋಪ ಮಾಡಿದ್ದಾರೆ.

ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಶೆಟ್ಟರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ತಿಂಗಳ ಹಿಂದೆಯೇ ಮಾಜಿ ಸಚಿವ ಮೇಟಿಯವರ ಕಮ್ಮಕಾಂಡದ ಸಿಡಿ ನೋಡಿದ್ದರು ಆದರೆ ಎಲ್ಲರಿಗೂ ನೋಡಿಲ್ಲ ಎಂದು ಹೇಳುತ್ತಿದ್ದರು ಎಂದು ತಿಳಿಸಿದರು.

ಅಲ್ಲದೆ ಈ ಆರೋಪವನ್ನು ಬೇಗ ಮುಚ್ಚಿಹಾಕುವಂತೆ ಮೇಟಿಯವರನ್ನು ಸಂಪರ್ಕಿಸಿ ತಿಳಿಸಿದ್ದರು, ಅಲ್ಲದೆ ಆರೋಪಕ್ಕೆ ಸಂಬಂಧಿಸಿದವರ ಬಾಯಿ ಮುಚ್ಚಿಸಲು ಮೇಟಿಯವರಿಗೆ ಹೇಳಿದ್ದರು ಎಂದು ಶೆಟ್ಟರ್ ತಿಳಿಸಿದರು.[ಮೇಟಿ ವಿಡಿಯೋ ಬೆಂಗ್ಳೂರು ದಾಟಿ ದೆಹಲಿಗೆ: ರಾಹುಲ್ ಗೆ ರಾಸಲೀಲೆ ದೂರು]

CM, Home minister last month to see the CD Meti says shettar

ರಾಜ್ಯದ ರಾಜಕೀಯದಲ್ಲಿ ಇಂತಹ ಭ್ರಷ್ಟ ಸಂಪುಟವನ್ನು ನಾವು ಎಲ್ಲೂ ನೋಡಿಲ್ಲ. ಇವರ ಬೆನ್ನಿಗೆ ಸ್ವತಃ ಮುಖ್ಯಮಂತ್ರಿಗಳೇ ನೀಲುತ್ತಾರೆ. ಜಯಚಂದ್ರ, ಚಿಕ್ಕರಾಯಪ್ಪ ಅವರಿಗೆ ಸಾಥ್ ನೀಡಿದ್ದಾರೆ. ತನ್ವೀರ್ ಸೇಟ್ ಅವರ ಪ್ರಕರಣದಲ್ಲಿ ಮೃದುವಾದ ಸಿಎಂ, ಮಾಜಿ ಸಚಿವ ಮೇಟಿ ಆರೋಪವನ್ನು ಮುಚ್ಚಿಹಾಕಲು ಹವಣಿಸುತ್ತಿದ್ದಾರೆ. ಹೀಗಾಗಿ ಮೊದಲು ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.[ಮೇಟಿ ರಾಸಲೀಲೆ ಬಯಲಿಗೆಳೆದ ಮುಲಾಲಿಗೆ ಪೊಲೀಸರ 6 ಪ್ರಶ್ನೆ]

ರಾಜ್ಯದ ವ್ಯವಸ್ಥೆಯನ್ನು ಈ ಸರ್ಕಾರ ಮಣ್ಣು ಪಾಲು ಮಾಡಿದೆ. ಜನತೆ ನೀಡಿದ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರಿಗೆ ದುರಾಡಳಿತವನ್ನು ಪ್ರದರ್ಶಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹರಿಹಾಯ್ದರು.

English summary
CM Siddaramaiah and home minister G. Parameshwara last month to see the H.Y. Meti CD says jagadish shettar in gangavati in koppal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X