ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿವೈಎಸ್ಪಿ ಕಲ್ಲಪ್ಪ ಸಾವಿಗೆ ಕಾರಣವೇನು? ಎಸ್ಪಿ ಸಂತೋಷ್ ಪ್ರತಿಕ್ರಿಯೆ

By Mahesh
|
Google Oneindia Kannada News

ಚಿಕ್ಕಮಗಳೂರು, ಜುಲೈ 05: ಚಿಕ್ಕಮಗಳೂರಿನ ಡಿವೈಎಸ್ಪಿಯಾಗಿದ್ದ ಕಲ್ಲಪ್ಪ ಹಂಡಿಭಾಗ ಅವರು ತಮ್ಮ ಊರಿನಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಸುದ್ದಿ ತಿಳಿದಿರಬಹುದು. ಕಲ್ಲಪ್ಪ ಅವರ ಸಾವಿಗೆ ಕಾರಣವೇನು ಎಂದು ಕೇಳಿದರೆ ತಕ್ಷಣಕ್ಕೆ ಮರ್ಯಾದೆಗೆ ಅಂಜಿ ಆತುರದ ನಿರ್ಧಾರ ಕೈಗೊಂಡಿದ್ದಾರೆ ಎನ್ನಬಹುದು.

ಆದರೆ, ಕಲ್ಲಪ್ಪ ಅವರ ಸಂಬಂಧಿಕರು ಪೊಲೀಸ್ ಇಲಾಖೆ ಕಿರುಕುಳವೇ ಕಾರಣ ಎಂದಿದ್ದಾರೆ. ಗೃಹ ಸಚಿವ ಜಿ ಪರಮೇಶ್ವರ ಅವರ ಉಸ್ತುವಾರಿ ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ಇಲಾಖೆಗೆ ಮುಜುಗರ ತಂದಿರುವುದಂತೂ ನಿಜ.

ಚಿಕ್ಕಮಗಳೂರಿನ ಡಿವೈಎಸ್ಪಿಯಾಗಿದ್ದ ಕಲ್ಲಪ್ಪ ಅವರು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರುಗೋಡ ಠಾಣಾ ವ್ಯಾಪ್ತಿಯ ತಮ್ಮ ಹೆಂಡತಿಯ ಅಜ್ಜಿಯ ಮನೆಯಲ್ಲಿ ಮಂಗಳವಾರ ಮುಂಜಾನೆ ನೇಣು ಹಾಕಿಕೊಂಡು ಒದ್ದಾಡುತ್ತಿದ್ದರು. ತೀವ್ರ ಅಸ್ವಸ್ಥಗೊಂಡಾಗ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ಕರದೊಯ್ಯಲಾಯಿತಾದರೂ ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದಾರೆ. [ಡಿವೈಎಸ್ ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ]

Chikkamagaluru SP Santhosh Babu

ಎಸ್ ಪಿ ಸಂತೋಷ್ ಬಾಬು ವಿರುದ್ಧ ಆಕ್ರೋಶ: ಕಲ್ಲಪ್ಪ ಹಂಡಿಭಾಗ ಅವರು ಆತ್ಮಹತ್ಯೆಗೆ ಶರಣಾಗಲು ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿ(ಎಸ್ ಪಿ) ಕೆ ಸಂತೋಷ್ ಬಾಬು ಅವರೇ ಕಾರಣ ಎಂದು ಕಲ್ಲಪ್ಪ ಅವರ ಸಂಬಂಧಿಕರು ನೇರವಾಗಿ ಆರೋಪಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ನಾನು ತನಿಖೆಯನ್ನೇ ಕೈಗೊಳ್ಳುವಂತಿಲ್ಲ. ಹೀಗಾಗಿ ನಾನು ಕಿರುಕುಳ ನೀಡುವುದಾದರೂ ಹೇಗೆ ಎಂದು ಸಂತೋಷ್ ಬಾಬು ಅವರು ಪ್ರಶ್ನಿಸಿದ್ದಾರೆ. [ಶೆಣೈ ಆರೋಪದಲ್ಲಿ ಹುರುಳಿಲ್ಲ, ತನಿಖೆಗೆ ಸಿದ್ಧ : ಬಳ್ಳಾರಿ ಎಸ್ಪಿ]

ಮಂಗಳೂರು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿದ್ದ ಸಂತೋಷ್ ಬಾಬು ಅವರು ಇತ್ತೀಚೆಗೆ ಚಿಕ್ಕಮಗಳೂರಿನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಡಿವೈಎಸ್ಪಿ ಕಲ್ಲಪ್ಪ ಪ್ರಕರಣದಲ್ಲಿ ಎಸ್ಪಿ ಅವರು ತನಿಖೆ ನಡೆಸುವಂತಿಲ್ಲ. ಈ ಬಗ್ಗೆ ಸಂತೋಷ್ ಅವರ ಪ್ರತಿಕ್ರಿಯೆ ಹೀಗಿದೆ: [ಕಲ್ಲಪ್ಪ ಪ್ರಕರಣದಲ್ಲಿ ಕಿಡ್ನಾಪ್ ಆಗಿದ್ದ ತೇಜಸ್ ಹೇಳಿದ್ದೇನು?]

ಸಾಮಾನ್ಯವಾಗಿ ಡಿವೈಎಸ್ಪಿ ಅಥವಾ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಈ ರೀತಿ ಪ್ರಕರಣಗಳಲ್ಲಿ ಸ್ವತಃ ಎಸ್ಪಿ ಸ್ಥಾನದಲ್ಲಿರುವವರು ತನಿಖೆ ನಡೆಸುವಂತಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.

ಓರ್ವ ಹಿರಿಯ ಪೊಲೀಸ್ ಅಧಿಕಾರಿ ಹೆಸರು ಇಂಥ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ಇಲಾಖೆಗೆ ಇರಸು ಮುರಸು ತಂದಿರುವುದು ನಿಜ. ಎಫ್ ಐಆರ್ ನಲ್ಲಿ ಕಲ್ಲಪ್ಪ ಅವರ ಹೆಸರು ಸೇರಿಸಿ ರಾಜ್ಯ ಪೊಲೀಸ್ ಮಹಾನಿರೀಕ್ಷಕರಿಗೆ ಸಲ್ಲಿಸಲಾಗಿದೆ ಎಂದು ಜನಮಿತ್ರ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ, ಕಲ್ಲಪ್ಪ ಅವರು ಸಸ್ಪೆಂಡ್ ಆಗುವ ಮುನ್ನವೇ ಸೂಸೈಡ್ ಮಾಡಿಕೊಂಡು ಬಿಟ್ಟಿದ್ದಾರೆ.

English summary
Chikkamagaluru SP Santhosh Babu denies harassing Late DySP Kallappa Handibag. Kallappa committed suicide on July 5, 2016 was facing charges of kidnapping and taking a ransom of Rs 10 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X