ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಿನ ನೂರು ಸ್ಥಳಗಳಲ್ಲಿ ವೈ ಫೈ ಹಾಟ್ ಸ್ಪಾಟ್

By Mahesh
|
Google Oneindia Kannada News

ಚಿಕ್ಕಮಗಳೂರು, ಜುಲೈ 09: ಚಿಕ್ಕಮಗಳೂರು ಜಿಲ್ಲೆಯಲ್ಲಿ 3ಜಿ ಸೇವೆಯನ್ನು ಒದಗಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ ಎಲ್ ಸಂಸ್ಥೆ ಈಗ ಜಿಲ್ಲೆಯ ನೂರು ಸ್ಥಳಗಳಲ್ಲಿ ವೈ-ಫೈ ಹಾಟ್‌ಸ್ಪಾಟ್ ಸೇವೆ ಒದಗಿಸಲು ನಿರ್ಧರಿಸಲಾಗಿದೆ ಎಂದು ಬಿಎಸ್‌ಎನ್‌ಎಲ್‌ನ ಕರ್ನಾಟಕ ವಿಭಾಗದ ಜನರಲ್ ಮ್ಯಾನೇಜರ್ ಸತ್ಯನಾರಾಯಣ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 32 ಮೊಬೈಲ್ ಟವರ್‌ಗಳಿಗೆ ಬೇಡಿಕೆಯಿದ್ದು, ಹತ್ತು ಟವರ್‌ಗಳು ಸದ್ಯದಲ್ಲೇ ಮಂಜೂರಾಗಲಿವೆ ಎಂದಿದ್ದಾರೆ.

3ಜಿ ಸೇವೆ ಹಾಗೂ ವೈಫೈ ಹಾಟ್ ಸ್ಪಾಟ್ ಗಳನ್ನು ಶೀಘ್ರದಲ್ಲೇ ತಾಲೂಕು ಹಾಗೂ ಗ್ರಾಮಪಂಚಾಯಿತಿ ಮಟ್ಟಕ್ಕೂ ಕೊಂಡೊಯ್ಯಲಾಗುವುದು ಎಂದರು. ಚಿಕ್ಕಮಗಳೂರಿಗೂ ಮೊದಲು ಕರ್ನಾಟಕದ ಮಂಡ್ಯ, ಮಂಗಳೂರು, ತುಮಕೂರು, ದಾವಣಗೆರೆ-ಚಿತ್ರದುರ್ಗ ನಗರಗಳಲ್ಲಿ ಬಿಎಸ್ ಎನ್ಎಲ್ 3ಜಿ ಸೇವೆ ಒದಗಿಸಿದೆ.

ನಗರದ ಬೋಳರಾಮೇಶ್ವರ ವೃತ್ತ, ಹೊಸಮನೆ ಬಡಾವಣೆ ಅಲ್ಲದೆ ಹಿರೇಮಗಳೂರು, ಹಲಸು ಮನೆ, ತೆಂಗಿನ ಮನೆ, ಬಾಳೆಹೊನ್ನೂರು, ಮೂಡಿಗೆರೆ ಟೌನ್, ಭೂತನ ಕಾಡು ಹಾಗೂ ಕೂಡ್ಲುವಳ್ಳಿಯಲ್ಲಿ ಟವರ್ ನಿರ್ಮಿಸಲು ಜಾಗ ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ.

Chikkamagaluru district to get 100 Wi Fi Hotspot BSNL

2ಜಿ ಸೇವೆ, ಬಿಟಿಎಸ್ ಟವರ್‌ಗಳು, 3ಜಿ ಟವರ್‌ಗಳು, ಸಿಡಿಎಂಎ ಟವರ್‌ಗಳನ್ನು ನಿರ್ಮಿಸಲಾಗುತ್ತದೆ. ಜಿಲ್ಲೆಯಲ್ಲಿ ಕೊಪ್ಪ, ಶೃಂಗೇರಿ, ಮೂಡಿಗೆರೆ ಈ ಮೂರು ತಾಲೂಕುಗಳು ಅತಿ ಹೆಚ್ಚು ಗ್ರಾಹಕರನ್ನು ಹೊಂದಿವೆ. ಬಿಎಸ್‌ಎನ್‌ಎಲ್‌ಗೆ ಶೇ.70ರಷ್ಟು ಆದಾಯ ಮೂರು ತಾಲೂಕುಗಳಿಂದಲೇ ಬರುತ್ತಿದೆ ಎಂದು ತಿಳಿಸಿದರು.

ನೆಟ್ವರ್ಕ್ ಜಾಲ: ಕೇಂದ್ರ ಸರ್ಕಾರದ ಹೈ ಸ್ಪೀಡ್ ಆಪ್ಟಿಕ್ ಫೈಬರ್ ಜಾಲ ಸಂಪರ್ಕ ಯೋಜನೆ ಮೂಲಕ ಕರ್ನಾಟಕದ 5,600 ಗ್ರಾಮ ಪಂಚಾಯಿತಿಗಳನ್ನು ಬೆಸೆಯಲು ಯೋಜನೆ ರೂಪಿಸಲಾಗಿದೆ.

ಸುಮಾರು 1,300 ಗ್ರಾಮ ಪಂಚಾಯಿತಿಗಳಿಗೆ ಸಂಪರ್ಕ ಸಾಧಿಸಲಾಗಿದೆ, ಮಂದ್ಯ, ಚಾಮರಾಜನಗರ, ಹಾಸನ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹೈಸ್ಪೀಡ್ ಸಂಪರ್ಕ ಸಾಧ್ಯವಿದೆ ಡಿಸೆಂಬರ್ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಬೆಂಗಳೂರಿನಲ್ಲಿ ಸುಮಾರು 64ಕ್ಕೂ ಅಧಿಕ ವೈಫೈ ಹಾಟ್ ಸ್ಪಾಟ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಎಂಜಿ ರಸ್ತೆ ಟ್ರೀನಿಟಿ ಮಾಲ್, ಲಾಲ್ ಬಾಗ್ ನಂತರ ಕಬ್ಬನ್ ಪಾರ್ಕ್ ಮುಂತಾದೆಡೆ ವೈಫೈ ಲಭ್ಯವಾಗಲಿದೆ ಎಂದು ಬಿಎಸ್ ಎನ್ ಎಲ್ ಪ್ರಕಟಿಸಿದೆ.

English summary
Chikkamagaluru district to get 100 Wi Fi Hotspot BSNL.Earlier BSNL launched 3G mobile services in 5 Telecom District including the state capital Bangalore along with Mandya, Mangalore and Tumkur, Davanagere-Chitradurga cities in Karnataka Telecom circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X