ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿ ಶಿಕ್ಷಕನ ಮಗ ಈಗ ಭಾರತದ ಮುಖ್ಯ ನ್ಯಾಯಮೂರ್ತಿ

By Mahesh
|
Google Oneindia Kannada News

ಬೆಂಗಳೂರು, ಸೆ.28: ಕರ್ನಾಟಕದ ಶಾಲಾ ಶಿಕ್ಷಕರೊಬ್ಬರ ಮಗ ಇಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಬೆಳೆದಿದ್ದಾರೆ. ಹಿಂದುಳಿದ ಸಮುದಾಯಕ್ಕೆ ಸೇರಿದ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು ಅವರು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎಚ್ಎಲ್ ದತ್ತು ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಇದುವರೆಗೂ ಕರ್ನಾಟಕದ ಮೂಲದ ಇ.ಎಸ್‌. ವೆಂಕಟರಾಮಯ್ಯ (1989), ಎಂ.ಎನ್‌. ವೆಂಕಟಾಚಲಯ್ಯ (1993), ಎಸ್‌. ರಾಜೇಂದ್ರ ಬಾಬು (2004) ಅವರು ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಎಚ್.ಎಲ್.ದತ್ತು ಅವರು, ಕೇರಳ ಹಾಗೂ ಪಂಜಾಬ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದರು.

ನ್ಯಾ.ಲೋಧಾ ಅವರ ನೇತೃತ್ವದ ನ್ಯಾಯಾಧೀಶರ ನೇಮಕಾತಿ ಸಮಿತಿ (ಕೊಲಿಜಿಯಂ), ದತ್ತು ಅವರ ಹೆಸರನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಡತ ರವಾನಿಸಿತ್ತು. ಎನ್ ಡಿಎ ಸರ್ಕಾರವೂ ಇದನ್ನು ಒಪ್ಪಿ ರಾಷ್ಟ್ರಪತಿಗಳಿಗೆ ರವಾನಿಸಿತ್ತು. ಪ್ರಣಬ್ ಮುಖರ್ಜಿ ಅವರು ಇದಕ್ಕೆ ಅಂಕಿತ ಹಾಕಿದ್ದರು. [ಕನ್ನಡಿಗ ಎಚ್ಎಲ್ ದತ್ತು ಪ್ರಮಾಣ ವಚನ]

ಎಚ್ಎಲ್ ದತ್ತು ಅವರ ವೃತ್ತಿ ಹಾಗೂ ಜೀವನದ ಪ್ರಮುಖ ಘಟ್ಟಗಳು:
* 1950ರ ಡಿ.3ರಂದು ಬಳ್ಳಾರಿ ಜಿಲ್ಲೆಯ ಹಂದ್ಯಾಲದಲ್ಲಿ ದತ್ತು ಜನಿಸಿದರು.
* ನಂತರ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಪ್ರಾಥಮಿಕ ವಿದ್ಯಾಭಾಸ ಮುಂದುವರೆಸಿದರು. ದತ್ತು ಅವರ ತಂದೆ ಬೀರೂರಿನಲ್ಲಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
* ಜಸ್ಟೀಸ್ ದತ್ತು ಅವರು ಬೆಂಗಳೂರಿನ ಆರ್ ಟಿ ನಗರ ನಿವಾಸಿ.
* ಅವರ ಪತ್ನಿ ಜಿ ಗಾಯತ್ರಿ ದತ್ತು, ಪುತ್ರ ನಿತಿನ್ ದತ್ ಮತ್ತು ಮೊಮ್ಮಗ ಮಿಹಿರ್ ಆದಿತ್ಯ.
* ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಿಯ. ಗಣಪತಿ ಇವರ ಇಷ್ಟ ದೇವತೆ.
* ದತ್ತು ಅವರು ಬಿಎಸ್‌ಸಿ ಎಲ್‌ಎಲ್‌ಬಿ ಪದವೀಧರರಾದರು.
[ಕನ್ನಡಿಗರು ಹೆಮ್ಮೆ ಪಡುವ ಚಿತ್ರಗಳಿವು]
* 1975ರ ಅ.23ರಂದು ವಕೀಲರಾಗಿ ನೋಂದಾಯಿತರಾದರು.
* ದತ್ತು ಅವರು ಬೆಂಗಳೂರಿನಲ್ಲಿ ಮೊದಲು ವಕೀಲ ವೃತ್ತಿ ಆರಂಭಿಸಿದರು. ಸಿವಿಲ್‌ , ಕ್ರಿಮಿನಲ್‌, ಸಾಂವಿಧಾನಿಕ ಮತ್ತು ತೆರಿಗೆ ಸಂಬಂಧಿ ವ್ಯಾಜ್ಯಗಳಲ್ಲಿ ಅವರು ವಾದ ಮಾಡಿದ್ದಾರೆ.
* ಬೆಂಗಳೂರು ಮಹಾನಗರಪಾಲಿಕೆಯ ವಕೀಲರಾಗಿದ್ದರು
* 1983ರಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡ ಅವರು 1990ರಲ್ಲಿ ಸರ್ಕಾರಿ ಅಡ್ವೋಕೇಟ್‌ ಆಗಿ ನಿಯೋಜಿತರಾಗಿ 1992ರವರೆಗೆ ಕಾರ್ಯನಿರ್ವಹಿಸಿದರು.
* ಜಸ್ಟೀಸ್ ಎಸ್. ರಾಜೇಂದ್ರ ಬಾಬು(34ನೇ ಸಿಜೆಐ) ಅವರನ್ನು ದತ್ತು ಅವರು ಗುರುವಾಗಿ ಕಾಣುತ್ತಿದ್ದಾರೆ.

Chief Justice of India HL Dattu

* 1983ರಿಂದ 1990 ತನಕ ಮಾರಾಟ ತೆರಿಗೆ ಇಲಾಖೆ ಪರ ವಕಾಲತ್ತು ವಹಿಸುವ ಸರ್ಕಾರಿ ವಕೀಲರಾಗಿದ್ದರು.
* 1992ರಿಂದ 1993ವರೆಗೆ ತೆರಿಗೆ ಇಲಾಖೆಯ ಹೆಚ್ಚುವರಿ ಸ್ಥಾಯಿ ವಕೀಲರಾಗಿದ್ದರು.
* 1993 ರಿಂದ 1995 ತೆರಿಗೆ ಇಲಾಖೆಯ ಸ್ಥಾಯಿ ಸಮಿತಿಯ ಸಿನೀಯರ್ ಕೌನ್ಸೆಲ್ ಆಗಿದ್ದರು.
* 1995ರ ಡಿ. 18ರಂದು ಕರ್ನಾಟಕ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.
* 2007ರ ಫೆ.12ರಂದು ಚಂಡೀಗಢ ಹೈಕೋರ್ಟಿನ ಮುಖ್ಯ ನ್ಯಾಯಧೀಶರಾದರು.
* 2007ರ ಮೇ 18ರಂದು ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಾದರು.
* 2008ರ ಡಿ. 17ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು.
* 2008ರಿಂದ ಇಲ್ಲಿ ತನಕ ಸುಪ್ರೀಂಕೋರ್ಟಿನ ಹಾಲಿ ಜಡ್ಜ್ ಆಗಿದ್ದರು.
* ಸೆ.28, 2014ರಂದು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕಾರ
* ಡಿ.2, 2015 ರ ತನಕ ಸಿಜೆಐಯಾಗಿ ಅಧಿಕಾರ.
* ಇತ್ತೀಚಿನ ವರ್ಷಗಳಲ್ಲಿ ದೀರ್ಘ ಅವಧಿ ಸಿಜೆಐ ಆಗುವ ಯೋಗ ದತ್ತು ಅವರಿಗೆ ಸಿಕ್ಕಿದೆ.

ವಿವಾದ: ವಕೀಲೆ ಹಾಗೂ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್‌ನ ಮಾಜಿ ಉದ್ಯೋಗಿ ನಿಶಾ ಪ್ರಿಯಾ ಭಾಟಿಯಾ (51) ಅವರು ಅವರು ದತ್ತು ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊರೆಸಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸುವ ಸರ್ಕಾರದ ಶಿಫಾರಸನ್ನು ರದ್ದು ಮಾಡಬೇಕು ಎಂದು ಕೋರ್ಟ್ ಮೊರೆ ಹೊಕ್ಕಿದ್ದರು.[ವಿವರ ಇಲ್ಲಿದೆ ಓದಿ]

English summary
Handyala Lakshminarayanaswamy Dattu is 42nd Chief Justice of India in the Supreme Court from 28.9.2014. HL Dattu is son of a school teacher, is a fervent devotee of Lord Ganesha and a connoisseur of Carnatic music. Here is brief profile of proud son of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X