ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವದಲ್ಲಿ ಚನ್ನಪಟ್ಟಣದ ಗೊಂಬೆಗಳ ಕಲರವ

|
Google Oneindia Kannada News

ಬೆಂಗಳೂರು, ಡಿ.10 : ಚನ್ನಪಟ್ಟಣದ ಗೊಂಬೆಗಳು ಈ ಬಾರಿ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿವೆ. 'ಆನೆ ಬಂತೊಂದು ಆನೆ ಹಾಡಿನ' ಹಿನ್ನೆಲೆಯೊಂದಿಗೆ ಪರೇಡ್‌ನಲ್ಲಿ ಚನ್ನಪಟ್ಟಣದ ಗೊಂಬೆಗಳ ಸ್ತಬ್ಧಚಿತ್ರ ಪಾಲ್ಗೊಳ್ಳಲಿದೆ.

2015ರ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ 'ಆನೆ ಬಂತೊಂದು ಆನೆ ಹಾಡಿನ' ಹಿನ್ನೆಲೆಯೊಂದಿಗೆ ಪರೇಡ್‌ನಲ್ಲಿ ಚನ್ನಪಟ್ಟಣದ ಗೊಂಬೆಗಳ ಸ್ತಬ್ಧಚಿತ್ರ ಪಾಲ್ಗೊಳ್ಳಲಿದೆ ಎಂದು ವಾರ್ತಾ ಇಲಾಖೆಯ ನಿರ್ದೇಶಕ ವಿಶು ಕುಮಾರ್‌ ಅವರು ಹೇಳಿದ್ದಾರೆ.

 Republic Day Parade

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಶೇ.60-70ರಷ್ಟು ಮಕ್ಕಳು ಪಾಲ್ಗೊಳ್ಳುತ್ತಾರೆ. ಆದ್ದರಿಂದ ಅವರನ್ನು ಪ್ರಮುಖವಾಗಿಟ್ಟುಕೊಂಡು ಚನ್ನಪಟ್ಟಣದ ಗೊಂಬೆಗಳ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಿದ್ದೇವೆ. ದೆಹಲಿ ಕನ್ನಡ ಶಾಲೆಯ 8 ಮಕ್ಕಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತದೆ ಎಂದು ವಿಶು ಕುಮಾರ್ ತಿಳಿಸಿದ್ದಾರೆ. [ಗಣರಾಜ್ಯೋತ್ಸವ : ಸಿಮಿ, ಲಷ್ಕರ್ ದಾಳಿ ಸಾಧ್ಯತೆ]

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಅಮೆರಿಕಾದ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಬರಾಕ್‌ ಒಬಾಮಾ ಪತ್ನಿ ಮಿಷೆಲ್‌ ಕಳೆದ ಬಾರಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಚನ್ನಪಟ್ಟಣದ ಗೊಂಬೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಚನ್ನಪಟ್ಟಣ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಪ್ರಮುಖ ನಗರವಾಗಿದೆ. ಗೊಂಬೆಗಳ ತಯಾರಿಕೆಗೆ ಚನ್ನಪಟ್ಟಣ ಪ್ರಸಿದ್ಧಿ ಪಡೆದಿದೆ. ಪರ್ಶಿಯಾ ಪ್ರವಾಸದ ವೇಳೆ ಅಲ್ಲಿನ ಗೊಂಬೆಗಳಿಗೆ ಮಾರುಹೋಗಿದ್ದ ಟಿಪ್ಪು ಸುಲ್ತಾನ್‌ ಅಲ್ಲಿಂದ ಕುಶಲಕರ್ಮಿಗಳನ್ನು ಕರೆತಂದು ಚನ್ನಪಟ್ಟಣದಲ್ಲಿ ಗೊಂಬೆ ತಯಾರಿಕೆಗೆ ತಳಹಾದಿ ಹಾಕಿದ್ದ.

ಅಂದಹಾಗೆ 2014ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟಿಪ್ಪು ಸುಲ್ತಾನ್ ಘರ್ಜಿಸಿದ್ದ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಶೌರ್ಯ, ಸಾಹಸವನ್ನು ದೇಶಕ್ಕೆ ತಿಳಿಸಲು ಟಿಪ್ಪುವಿನ ಸ್ತಬ್ಧಚಿತ್ರ ನಿರ್ಮಿಸಲಾಗಿತ್ತು. [ಗಣರಾಜ್ಯೋತ್ಸವದಲ್ಲಿ ಟಿಪ್ಪು ಘರ್ಜನೆ]

English summary
Channapatna toys tableau will participate in 2015 Republic Day Parade from Karnataka. Channapatna is a city located in Bengaluru-Mysuru highway. The city is famous for its toys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X