ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NET, SLET ಫಲಿತಾಂಶ ಘೋಷಣೆಯಲ್ಲಿ ಮಾರ್ಪಾಟು

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 22 : ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಹಾಗೂ ರಾಜ್ಯ ಅರ್ಹತಾ ಪರೀಕ್ಷೆಯ (SLET) ಫಲಿತಾಂಶ ಘೋಷಣೆ ಮಾಡುವ ವಿಧಾನ ಹಾಗೂ ಮಾನದಂಡಗಳಾನ್ನು ಬದಲಾಯಿಸಲಾಗಿದೆ. ಕೇರಳ ಹೈಕೋರ್ಟ್ ನ ತೀರ್ಪಿನ ಅನುಸಾರ ಈ ತೀರ್ಮಾನ ಮಾಡಲಾಗಿದ್ದು, ಒಟ್ಟು ತೇರ್ಗಡೆ ಪ್ರಮಾಣವು ಶೇ 16ರಿಂದ ಶೇ 6ಕ್ಕೆ ಇಳಿಸಿದೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೂರು ಪತ್ರಿಕೆಗಳಲ್ಲಿ ಸರಾಸರಿ ಶೇ 40ರಷ್ಟು ಅಂಕ (ಈ ಮುಂಚೆ ಪತ್ರಿಕೆ 1 ಹಾಗೂ ಪತ್ರಿಕೆ 2ರಲ್ಲಿ ಶೇ 40 ಹಾಗೂ ಪತ್ರಿಕೆ 3ರಲ್ಲಿ ಶೇ 50ರಷ್ಟು ಅಂಕ ನಿಗದಿಯಾಗಿತ್ತು), ಒಬಿಸಿ, ಪರಿಶಿಷ್ಟ ಅಭ್ಯರ್ಥಿಗಳಿಗೆ ಮೂರು ಪತ್ರಿಕೆಗಳಿಗೆ ಸರಾಸರಿ ಕನಿಷ್ಠ ಶೇ 35ರಷ್ಟು (ಈ ಮುಂಚೆ ಪತ್ರಿಕೆ 1 ಹಾಗೂ ಪತ್ರಿಕೆ 2ರಲ್ಲಿ ಶೇ 35 ಹಾಗೂ ಪತ್ರಿಕೆ 3ರಲ್ಲಿ ಶೇ 40ರಷ್ಟು ಅಂಕ ನಿಗದಿಯಾಗಿತ್ತು) ಅಂಕವನ್ನು ಯುಜಿಸಿ ನಿಗದಿಪಡಿಸಿದೆ.

Changes in NET, SLET result announcement

ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳ ಪೈಕಿ ಶೇ 6ರಷ್ಟು ಮಂದಿಯನ್ನು (ಮೀಸಲಾತಿ ಪ್ರಕಾರ ಸಾಮಾನ್ಯ ವರ್ಗಕ್ಕೆ ಶೇ 47.5, ಒಬಿಸಿ ಶೇ 27, ಪರಿಶಿಷ್ಟ ಜಾತಿ ಶೇ 15, ಪರಿಶಿಷ್ಟ ಪಂಗಡ ಶೇ 7.5 ಹಾಗೂ ಅಂಗವಿಕಲರಿಗೆ ಶೇ 3) ಅರ್ಹರೆಂದು ಘೋಷಣೆ ಮಾಡಬೇಕು ಎಂದು ತೆಲಂಗಾಣ ಸರಕಾರಕ್ಕೆ ಬರೆದ ಪತ್ರವೊಂದರಲ್ಲಿ ಉಲ್ಲೇಖ ಮಾಡಲಾಗಿದೆ.

ಮುಂದೆ ನಡೆಯುವ ಎನ್ ಇಟಿ ಹಾಗೂ ಎಸ್ ಎಲ್ ಇಟಿ ಪರೀಕ್ಷೆಗಳಿಗೆ ಇದೇ ನಿಯಮವು ಚಾಲ್ತಿಗೆ ಬರಲಿದೆ. ಅಂದಹಾಗೆ ಈ ಎರಡು ಪರೀಕ್ಷೆಗಳನ್ನು ತೇರ್ಗಡೆ ಆಗುವುದರಿಂದ ಏನು ಪ್ರಯೋಜನ ಎಂಬ ಉದ್ಭವಿಸುತ್ತದೆ ಅಲ್ಲವೆ? ಸರಕಾರಿ, ಅನುದಾನಿತ ಪದವಿ ಕಾಲೇಜು ಮತ್ತು ವಿವಿಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗುವುದಕ್ಕೆ ಈ ಅರ್ಹತಾ ಪರೀಕ್ಷೆ ಪೈಕಿ ಒಂದರಲ್ಲಿ ತೇರ್ಗಡೆಯಾಗಿರಬೇಕು ಅಥವಾ ಪಿಎಚ್.ಡಿ ಪಡೆದಿರಬೇಕು ಎಂಬ ನಿಯಮವಿದೆ.

{promotion-urls}

English summary
In a coming NET, SLET result announcement changes will be made according to the judgement of Kerala high court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X