ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ : ಧಾರವಾಡ, ರಾಯಚೂರು, ಮೈಸೂರಿನಲ್ಲಿ ಸ್ಥಳ ಪರಿಶೀಲನೆ

|
Google Oneindia Kannada News

ಧಾರವಾಡ, ಆ.28 : ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್‌ನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗುತ್ತದೆ ಎಂದು ಘೋಷಿಸಿದೆ. ನವದೆಹಲಿಯಿಂದ ಆಗಮಿಸಿರುವ ತಜ್ಞರ ತಂಡ ಮೂರು ಜಿಲ್ಲೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದೆ.

ಕರ್ನಾಟಕ ಸರ್ಕಾರ ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಐಐಟಿ ಸ್ಥಾಪನೆ ಮಾಡಬಹುದು ಎಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮೂರು ಜಿಲ್ಲೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲು ತಜ್ಞರ ತಂಡ ರಾಜ್ಯಕ್ಕೆ ಆಗಮಿಸಿದೆ. [ಐಐಟಿ : 3 ಜಿಲ್ಲೆಗಳತ್ತ ಬೊಟ್ಟು ತೋರಿಸಿದ ಸಿದ್ದರಾಮಯ್ಯ]

iit

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಪರ ಕಾರ್ಯದರ್ಶಿ ಆರ್. ಸುಬ್ರಮಣ್ಯ, ಮುಂಬೈನ ಐಐಟಿ ನಿರ್ದೇಶಕ ಪ್ರೊ.ದೇವಾಂಗ್ ವಿ.ಶಾಖರ್, ಗಾಂಧಿನಗರದ ಐಐಟಿ ನಿರ್ದೇಶಕ ಸುಧೀರ್ ಎಲ್.ಜೈನ್ ನೇತೃತ್ವದ ತಜ್ಞರ ತಂಡ ಶುಕ್ರವಾರ ಧಾರವಾಡ ಮತ್ತು ರಾಯಚೂರಿನಲ್ಲಿ ಸ್ಥಳ ಪರಿಶೀಲನೆ ನಡೆಸಿದೆ. [ರಾಯಚೂರಿನಲ್ಲಿ ಐಐಟಿ ಸ್ಥಾಪನೆಗೆ ಆದ್ಯತೆ]

ಧಾರವಾಡದ ನಗರದ ವಾಲ್ಮೀ ಹಾಗೂ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಧಾರವಾಡದ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಸೇರಿದಂತೆ ಇತರ ಅಧಿಕಾರಿಗಳು ತಂಡಕ್ಕೆ ಧಾರವಾಡದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ್ದಾರೆ. [ಐಐಟಿ ಮೈಸೂರಿನಲ್ಲಿ ಸ್ಥಾಪನೆಯಾಗಲಿ]

ಶುಕ್ರವಾರ ಮಧ್ಯಾಹ್ನ ತಂಡ ರಾಯಚೂರಿಗೆ ಭೇಟಿ ನೀಡಿದೆ. ರಾಯಚೂರಿನಲ್ಲಿ ಐಐಟಿ ಸ್ಥಾಪನೆಯಾಗಬೇಕು ಎಂಬುದು ಬೇಡಿಕೆಯಾಗಿದೆ. ರಾಯಚೂರಿನಲ್ಲೇ ಐಐಟಿ ಸ್ಥಾಪನೆಗೆ ಒತ್ತಾಯಿಸಿ ರಾಯಚೂರು ಬಂದ್ ನಡೆಸಲಾಗಿತ್ತು. ತಜ್ಞರ ತಂಡ ಜಿಲ್ಲೆಯಲ್ಲಿಯೂ ಪರಿಶೀಲನೆ ನಡೆಸಲಿದೆ.

ಗುರುವಾರ ಮೈಸೂರಿನಲ್ಲಿ ಪರಿಶೀಲನೆ : ಗುರುವಾರ ರಾಜ್ಯಕ್ಕೆ ಆಗಮಿಸಿದ ತಂಡ ಮೈಸೂರಿನಲ್ಲಿ ಪರಿಶೀಲನೆ ನಡೆಸಿದೆ. ನಂಜನಗೂಡು ತಾಲೂಕಿನ ತಾಂಡವಪುರ, ಹಿಮ್ಮಾವು, ಹುಳಿಮಾವು ಗ್ರಾಮಗಳ ವ್ಯಾಪ್ತಿಯ 499 ಎಕರೆ ಭೂಮಿಯನ್ನು ಜಿಲ್ಲಾಡಳಿತ ಐಐಟಿ ಸ್ಥಾಪನೆಗೆ ಗುರುತಿಸಿದ್ದು, ಅದನ್ನು ಪರಿಶೀಲನೆ ನಡೆಸಲಾಗಿದೆ.

ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ, ಚಾಮರಾಜನಗರ ಸಂಸದ ಧ್ರುವನಾರಾಯಣ್, ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಸೇರಿದಂತೆ ಹಲವು ಅಧಿಕಾರಿಗಳು ಮೈಸೂರಿನಲ್ಲಿ ತಂಡದ ಜೊತೆಗಿದ್ದರು.

English summary
Human resource development ministry team visited Dharwad, Raichur, Mysuru district to inspect the land identified for establishing the proposed Indian Institute of Technology (IIT) in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X