ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಗಿದ ನೀಟ್ ಪರೀಕ್ಷೆ, ಜೂನ್ 8ಕ್ಕೆ ಫಲಿತಾಂಶ

ಇಂದು ಬೆಳಿಗ್ಗೆ 10 ಗಂಟೆಯಿಂದ 1 ಗಂಟೆ ತನಕ ಪರೀಕ್ಷೆ ನಡೆಯಿತು. ಸದ್ಯ ಯಾವುದೇ ಸಮಯದಲ್ಲಿ ಸಿಬಿಎಸ್ಇ ಕೀ ಆನ್ಸರ್ ಪತ್ರಿಕೆಗಳನ್ನು ಬಿಡುಗಡೆ ಮಾಡಲಿದೆ. ಅಂದುಕೊಂಡಂತೆ ನಡೆದರೆ ಜೂನ್ 8ರಂದು ನೀಟ್ ಪರೀಕ್ಷೆಯ ಫಲಿತಾಂಶ ಹೊರ ಬೀಳಲಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 7: ಸಿಬಿಎಸ್ಇ ಸಂಸ್ಥೆ ನಡೆಸುವ ನೀಟ್ ಪರೀಕ್ಷೆ ಇಂದು ದೇಶಾದ್ಯಂತ ಯಶಸ್ವಿಯಾಗಿ ನಡೆಯಿತು. ಸದ್ಯದಲ್ಲೇ ಅಧಿಕೃತ ಉತ್ತರ ಪತ್ರಿಕೆಯನ್ನು ಸಿಬಿಎಸ್ಇ ಬಿಡುಗಡೆ ಮಾಡಲಿದ್ದು ಜೂನ್ 8ರಂದು ಫಲಿತಾಂಶ ಹೊರ ಬೀಳಲಿದೆ.

ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ವೈದ್ಯಕೀಯ, ದಂತ ವೈದ್ಯ, ಆಯುಷ್ ಮತ್ತು ಪಶು ವೈದ್ಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಈ ನೀಟ್ ಪರೀಕ್ಷೆಯನ್ನು ನಡೆಸಲಾಯಿತು. 2013ರಲ್ಲಿ ಮೊದಲ ಬಾರಿಗೆ ನೀಟ್ ಪರೀಕ್ಷೆ ನಡೆಸಲಾಗಿತ್ತು. ಇದಾದ ನಂತರ ನಿಂತಿದ್ದ ಪರೀಕ್ಷೆಯನ್ನು 2016ರಲ್ಲಿ ಮತ್ತೆ ಪುನರಾರಂಭಿಸಲಾಗಿತ್ತು. 2016ರಲ್ಲಿ ಎರಡು ಹಂತದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ಬಾರಿ ಒಂದೇ ಹಂತದಲ್ಲಿ ಪರೀಕ್ಷೆ ನಡೆಸಲಾಗಿದೆ.

CBSE conducted NEET 2017 was today, results are expected on June 8

ಇಂದು ಬೆಳಿಗ್ಗೆ 10 ಗಂಟೆಯಿಂದ 1 ಗಂಟೆ ತನಕ ಪರೀಕ್ಷೆ ನಡೆಯಿತು. ಸದ್ಯ ಯಾವುದೇ ಸಮಯದಲ್ಲಿ ಸಿಬಿಎಸ್ಇ ಕೀ ಆನ್ಸರ್ ಪತ್ರಿಕೆಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅಂದುಕೊಂಡಂತೆ ನಡೆದರೆ ಜೂನ್ 8ರಂದು ನೀಟ್ ಪರೀಕ್ಷೆಯ ಫಲಿತಾಂಶ ಹೊರ ಬೀಳಲಿದೆ.

ಈ ವರ್ಷ ಕರ್ನಾಟಕದ 8 ಕೇಂದ್ರಗಳು ಸೇರಿ ದೇಶದಾದ್ಯಂತ 103 ಕೇಂದ್ರಗಳಲ್ಲಿ 11,35,104 ಜನ ಪರೀಕ್ಷೆ ಬರೆದಿದ್ದಾರೆ.

English summary
Central Board of Secondary Education (CBSE) Conducted NEET 2017 was today. NEET entrance exam is conducted for admission into state and national level medical, dental, AYUSH and veterinary colleges. CBSE will release the official answer key of the exam anytime soon. NEET 2017 results are expected on June 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X