ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವನ್ನಪ್ಪುವ ದಿನ ಡಿಕೆ ರವಿಗೆ ಬಂದಿದ್ದು 4 ಫೋನ್‌ ಕರೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 22 : ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ರವಿ ಅವರಿಗೆ ಬಂದ ಫೋನ್‌ ಕರೆಗಳ ಮಾಹಿತಿಗಳನ್ನು ಸಂಗ್ರಹಣೆ ಮಾಡುತ್ತಿದ್ದಾರೆ. ಅವರು ಸಾವನ್ನಪ್ಪಿದ ದಿನ 4 ಫೋನ್‌ ಕರೆಗಳು ಬಂದಿದ್ದು, ಅವುಗಳ ಕುರಿತು ತನಿಖೆ ಆರಂಭಿಸಿದ್ದಾರೆ.

ಮಾರ್ಚ್ 16ರ ಸೋಮವಾರ ಸಂಜೆ ಕೋರಮಂಗಲ ಬಳಿಯ ತಾವರೆಕೆರೆ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗ್ರೂಪ್‌ಗೆ ಸೇರಿದ 'ಸೇಂಟ್ ಜಾನ್ಸ್‌ವುಡ್ ಅಪಾರ್ಟ್‌ಮೆಂಟ್'ನಲ್ಲಿ ಡಿ.ಕೆ.ರವಿ ಅವರ ಮೃತದೇಹ ಪತ್ತೆಯಾಗಿತ್ತು. ಇದಕ್ಕೂ ಮೊದಲು ಅಂದು ಅವರಿಗೆ 4 ಕರೆಗಳು ಬಂದಿದ್ದವು ಎಂಬುದನ್ನು ಸಿಬಿಐ ಪತ್ತೆ ಹಚ್ಚಿದ್ದು, ತನಿಖೆ ನಡೆಸುತ್ತಿದೆ. [ರವಿ ಲವ್ ಅಫೇರ್ ಎಲ್ಲಾ ಕಟ್ಟುಕಥೆ]

dk ravi

ತನಿಖೆ ನಡೆಸುತ್ತಿರುವ ಸಿಬಿಐ ರವಿ ಅವರು ಅವರು ತಮ್ಮ ಬ್ಯಾಚ್‌ ಮೇಟ್‌ಗೆ ಮಾಡಿದ ಕರೆಯ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಫೋನ್‌ ಮೂಲಕ ಬೆದರಿಕೆ ಕರೆ ಬಂದು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಎಂದು ತನಿಖೆ ನಡೆಸಲಾಗುತ್ತಿದೆ.[ಡಿಕೆ ರವಿ ಸಾವು: ಸಿಬಿಐ ತನಿಖೆಯ ಮೊದಲ ಪುಟ!]

ಕೇವಲ ವೈಯಕ್ತಿಕ ಕಾರಣವಲ್ಲ : ಡಿಕೆ ರವಿ ಅವರ ಸಾವು ಕೇವಲ ವೈಯಕ್ತಿಕ ಕಾರಣದಿಂದ ಸಂಭವಿಸಿಲ್ಲ ಎಂದು ಸಿಬಿಐ ಪ್ರಾಥಮಿಕ ತನಿಖೆಯಿಂದ ಅಭಿಪ್ರಾಯಪಟ್ಟಿದ್ದು, ಸಾವಿಗೆ ಬೇರೆ ಕಾರಣಗಳಿರಬಹುದು ಎಂಬ ಕುರಿತು ಸಿಬಿಐ ತನಿಖೆ ಮುಂದುವರೆಸಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಆದ ನಷ್ಟವೂ ಸಾವಿಗೆ ಕಾರಣವಿರಬಹುದು ಎಂದು ಸಿಬಿಐ ಶಂಕಿಸಿದೆ. [ಡಿಕೆ ರವಿ ಕೇಸ್ Timeline]

ತನಿಖೆಗೆ ಸೇರಿಕೊಳ್ಳಲಿದೆ ಐಡಿ : ಡಿ.ಕೆ. ರವಿ ಸಾವಿನ ಪ್ರಕರಣದ ತನಿಖೆ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಸಾವಿನ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಸೇರಿಕೊಂಡಿರುವ ಬಗ್ಗೆ ಸಿಬಿಐ ಮಾಹಿತಿ ಸಂಗ್ರಹಿಸಿದೆ. ಆದ್ದರಿಂದ ಜಾರಿ ನಿರ್ದೇಶನಾಲಯ (ಐಡಿ) ಕೂಡ ಸಿಬಿಐನೊಂದಿಗೆ ತನಿಖೆಯಲ್ಲಿ ಶೀಘ್ರದಲ್ಲೇ ಸೇರಿಕೊಳ್ಳಲಿದೆ.

English summary
The CBI is probing into the four calls IAS Officer D.K.Ravi got a day before he died. These calls are key to the probe as this could have led to him committing suicide the CBI feels. D.K.Ravi found dead in his apartment on March 16, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X