ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ ಆದೇಶ ವಿರುದ್ಧ ನಿಂತರೆ, ಕರ್ನಾಟಕದ ಗತಿ ಏನು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆ. 22: ಸುಪ್ರೀಂಕೋರ್ಟ್ ಆದೇಶವನ್ನು ಕರ್ನಾಟಕ ಸರ್ಕಾರ ಉಲ್ಲಂಘಿಸಿಲ್ಲ, ಆದರೆ, ವಿಳಂಬ ಮಾಡಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ಆದರೆ, ಸುಪ್ರೀಂ ಆದೇಶ ವಿರುದ್ಧ ನಿಂತರೆ, ನ್ಯಾಯಾಂಗ ನಿಂದನೆಯಾಗುವುದಿಲ್ಲವೇ? ಕರ್ನಾಟಕ ಸರ್ಕಾರದ ಗತಿ ಏನು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸೆಪ್ಟೆಂಬರ್ 21 ರಿಂದ 27ರ ವರೆಗೂ ಪ್ರತಿದಿನ 6,000 ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ಬುಧವಾರ ಆದೇಶಿಸಿದೆ. [ಬಂಗಾರಪ್ಪ ಬಗ್ಗೆ ಮಾತನಾಡ್ತೀರಿ, 1995ರಲ್ಲಿ ಪರಿಸ್ಥಿತಿ ಗೊತ್ತೇನ್ರಿ']

ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್ಸೆಂಕೃಷ್ಣ ಅವರ ಸಲಹೆಯನ್ನು ಕರ್ನಾಟಕ ಸರ್ಕಾರ ಪಡೆದುಕೊಂಡಿದೆ. ಜತೆಗೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆದಿದೆ. [ಸಿದ್ದರಾಮಯ್ಯ ಮಾತಿನ ಅರ್ಥವೇನು: ಮುಂದೇನಾಗಬಹುದು?]

ಜತೆಗೆ ನಾಲ್ಕು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿದ್ದು, ಇದರ ಸಾಧಕ ಬಾಧಕಗಳನ್ನು ಚರ್ಚೆ ಕೂಡಾ ನಡೆದಿದೆ. [ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ?]

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನ್ಯಾಯಯುತವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಬೇಡ. [ಬಿಜೆಪಿ ನಾಯಕರೇ ನೀವಿಟ್ಟ ಹೆಜ್ಜೆ ತಪ್ಪು!]

ತಮಿಳುನಾಡಿಗೆ ನೀರು ಬಿಡುವ ಅಗತ್ಯವಿಲ್ಲ ಎಂಬ ಒಮ್ಮತದ ನಿರ್ಧಾರವನ್ನು ವಿಶೇಷ ಅಧಿವೇಶನದ ನಂತರ ಪ್ರಕಟಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮುಂದಿನ ಕಾನೂನು ಹೋರಾಟ ಹೇಗೆ? ಮುಂದೆ ಓದಿ...

ನ್ಯಾಯಾಂಗ ನಿಂದನೆ ಹೊರೆಸಿ ಕರ್ನಾಟಕಕ್ಕೆ ಛೀಮಾರಿ?

ನ್ಯಾಯಾಂಗ ನಿಂದನೆ ಹೊರೆಸಿ ಕರ್ನಾಟಕಕ್ಕೆ ಛೀಮಾರಿ?

ತಮಿಳುನಾಡಿಗೆ ಕರ್ನಾಟಕ ನೀರು ಬಿಡಭೇಕು ಎಂಬ ಸುಪ್ರೀಂಕೋರ್ಟಿನ ಆದೇಶವನ್ನು ಕರ್ನಾಟಕ ಸರ್ಕಾರ ಪಾಲಿಸಬಾರದು ಎಂದು ಶಾಸಕಾಂಗ ತಿಳಿಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ.ಕರ್ನಾಟಕ ಸರ್ಕಾರದ ಇಮೇಜ್ ಹಾಳಾಗುತ್ತದೆ. ಕರ್ನಾಟಕ ಹಠಿಮಾರಿ ಧೋರಣೆ ಬಗ್ಗೆ ಎಲ್ಲರೂ ಪೂರ್ವಗ್ರಹ ಪೀಡಿತರಾಗುತ್ತಾರೆ. ಕಾನೂನಿನ ಹೋರಾಟಕ್ಕೆ ತೊಡಕಾಗುತ್ತದೆ.

ಕಾನೂನಿನ ಮೂಲಕವೇ ಬಗೆ ಹರಿಸಿಕೊಳ್ಳುವುದು ಹೇಗೆ?

ಕಾನೂನಿನ ಮೂಲಕವೇ ಬಗೆ ಹರಿಸಿಕೊಳ್ಳುವುದು ಹೇಗೆ?

ಸದ್ಯಕ್ಕೆ ಸಿದ್ದರಾಮಯ್ಯ ಅವರು ತೆಗೆದುಕೊಂಡಿರುವ ನಿರ್ಣಯ ತಾಂತ್ರಿಕವಾಗಿ ಸರಿಯಾಗಿದೆ. ಆದೇಶವನ್ನು ವಿಳಂಬ ಮಾಡಬಹುದೇ ಹೊರತೂ ಆದೇಶದ ವಿರುದ್ಧ ನಿಲ್ಲುವಂತಿಲ್ಲ. ಸೆ.23ರಂದು ವಿಶೇಷ ಅಧಿವೇಶನದಲ್ಲಿ ಶಾಸಕರು ನೀರು ಬಿಡದಿರುವಂತೆ ಒಕ್ಕೊರಲ ಬೆಂಬಲ ವ್ಯಕ್ತಪಡಿಸಿದರೆ, ಸುಪ್ರೀಂ ಆದೇಶ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಸಿದ್ದರಾಮಯ್ಯ ಅವರು ತೆಗೆದುಕೊಳ್ಳುವ ನಿರ್ಣಯದ ಮೇಲೆ ಸೆ.27ರ ನಂತರ ಕೋರ್ಟ್ ವಿಚಾರಣೆಯಲ್ಲಿ ವಾದಿಸಲು ಸಾಧ್ಯ.

ಸಂವಿಧಾನ ಬಿಕ್ಕಟು ಉದ್ಭವಿಸಬಹುದು

ಸಂವಿಧಾನ ಬಿಕ್ಕಟು ಉದ್ಭವಿಸಬಹುದು

ಕಾನೂನು ಉಲ್ಲಂಘಿಸಿ, ಸುಪ್ರೀಂ ಆದೇಶದ ವಿರುದ್ಧ ನಿಂತರ ಕರ್ನಾಟಕದಲ್ಲಿ ಸಂವಿಧಾನ ಬಿಕ್ಕಟು ಉದ್ಭವಿಸಬಹುದು. ಶಾಸಕಾಂಗ ತೆಗೆದುಕೊಂಡ ನಿರ್ಣಯವನ್ನು ಅಸಂವಿಧಾನ ಎಂದು ಬದಿಗೆ ತಳ್ಳಬಹುದು. ಕರ್ನಾಟಕ ಸರ್ಕಾರ ಬೇಕೆಂತಲೇ ಆದೇಶವನ್ನು ಉಲ್ಲಂಘಿಸುತ್ತಿದ್ದರೆ ನ್ಯಾಯಾಂಗ ನಿಂದನೆ ಕೇಸ್ ಜಡಿಯಬಹುದು.

ಕೇಂದ್ರ ಸರ್ಕಾರದ ಪಾತ್ರವೇನು

ಕೇಂದ್ರ ಸರ್ಕಾರದ ಪಾತ್ರವೇನು

ಕರ್ನಾಟಕದಲ್ಲಿ ಸಂವಿಧಾನ ಬಿಕ್ಕಟು ಉದ್ಭವಿಸಿದರೆ, ಕರ್ನಾಟಕದ ವಿರುದ್ಧ ಸುಪ್ರೀಂಕೋರ್ಟ್ ತನ್ನ ಅಧಿಕಾರ ಬಳಸಿ ಅರ್ಟಿಕಲ್ 356ರ ಅನ್ವಯ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬಹುದು. ಕೇಂದ್ರ ಸರ್ಕಾರ ಕೂಡಾ ಸ್ವಯಂ ಪ್ರೇರಿತವಾಗಿ ಅರ್ಟಿಕಲ್ 356 ಜಾರಿಗೊಳಿಸಬಹುದು.


English summary
The Karnataka cabinet on Wednesday decided to put on hold release of Cauvery water to Tamil Nadu. Supreme Court had directed Karnataka to release 6,000 cusecs of water to Tamil Nadu between September 21 and 27.Can Karnataka be held in contempt?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X