ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿ ಗಣತಿ : ಕುಂದು ಕೊರತೆ ಇದ್ದರೆ ಸಹಾಯವಾಣಿ ಬಳಸಿ

By Mahesh
|
Google Oneindia Kannada News

ಬೆಂಗಳೂರು, ಏ.14: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವೇಳೆ ಕುಂದುಕೊರತೆಗಳು, ಗೊಂದಲಗಳು ಯಾವುದೇ ಸಣ್ಣ ಅನುಮಾನ ಕಂಡು ಬಂದರೆ ಸಾರ್ವಜನಿಕರು ಕೂಡಲೇ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಸಚಿವ ಎಚ್. ಆಂಜನೇಯ ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಸಹಾಯವಾಣಿಗಾಗಿ 200 ಪ್ರತ್ಯೇಕ ಲೈನ್ ಗಳನ್ನು ನೀಡಲಾಗಿದೆ. 24X7 ಸಮಸ್ಯೆಗಳಿಗೆ ಪರಿಹಾರ ನೀಡಲು ಸಿಬ್ಬಂದಿ ಸಿದ್ದರಾಗಿದ್ದಾರೆ.

ಸಮೀಕ್ಷೆ ಸಮಯದಲ್ಲಿ ಸಮಸ್ಯೆ ಕಂಡು ಬಂದರೆ ತಪ್ಪದೇ 080-44554444 ಸಂಖ್ಯೆಗೆ ಕರೆ ಮಾಡಬಹುದು. ಏ.11ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಹೋಬಳಿ, ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ನಡೆಯುತ್ತಿದೆ.[ಜಾತಿ ಗಣತಿಗೆ ಸಿದ್ಧರಾಗಿ, ಯಾವ ಜಾತಿಗೆ ಯಾವ ಕಾಲಂ]

ಸಹಾಯವಾಣಿ ಉಚಿತವಲ್ಲ: ಹಿಂದುಳಿದ ವರ್ಗಗಳ ಆಯೋಗ ಹೊರ ತಂದಿರುವ ಈ ಸಹಾಯವಾಣಿಗೆ ಮಾಡುವ ಪ್ರತಿ ಕರೆಗೂ ಶುಲ್ಕ ವಿಧಿಸಲಾಗುತ್ತದೆ. ಇತರೆ ಸಹಾಯವಾಣಿಗಳಿದ್ದಂತೆ ಇದು ಟೋಲ್ ಫ್ರೀ ಅಲ್ಲ.

Caste Census, Social-Educational Survey Helpline launched

ಏ.30ರ ವರೆಗೂ 20 ದಿನಗಳ ಕಾಲ ನಿರಂತರವಾಗಿ ಸಮೀಕ್ಷಾ ಕಾರ್ಯ ನಡೆಯಲಿದೆ. ಸುಮಾರು 1.3 ಲಕ್ಷ ಗಣತಿದಾರ ಅಧಿಕಾರಿಗಳು 1.26 ಕೋಟಿಗೂ ಅಧಿಕ ಮನೆ ಮನೆ ಸಮೀಕ್ಷೆ ಮೂಲಕ ಜಾತಿ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ನಡೆಸಲಿದ್ದಾರೆ. [ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]

ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಕೌಟುಂಬಿಕ, ಮೀಸಲಾತಿ, ರಾಜಕೀಯ ಸೇರಿದಂತೆ 55 ವಿವಿಧ ಅಂಶಗಳನ್ನು ಒಳಗೊಂಡ ಪ್ರಶ್ನೆಗಳನ್ನು ಈಗಾಗಲೇ ಸಮೀಕ್ಷೆಗಾಗಿ ಸಿದ್ಧಪಡಿಸಲಾಗಿದೆ.

ರಜಾ ದಿನಗಳಲ್ಲೂ ಕೂಡ ಸಮೀಕ್ಷೆ ನಡೆಸಲಾಗುತ್ತದೆ. ಪ್ರತಿಯೊಂದು ಮಾಹಿತಿಯನ್ನೂ ನಿಖರವಾಗಿ ನೀಡಬೇಕು. ತಪ್ಪು ಮಾಹಿತಿಯನ್ನು ನೀಡಬಾರದೆಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್ ಕಾಂತರಾಜ್ ಕೋರಿದ್ದಾರೆ.

English summary
Social Welfare Minister H Anjaneya told reporters here on Monday, “We have established a call centre for the purpose with 200 dedicated lines. The helpline (080-4455 4444) will be functional 24 hours with trained staffers ready to provide any information or clear any doubts about any aspect of the survey.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X