ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ವಿಚಾರಣೆಗೆ ರಾಜ್ಯಪಾಲರ ಅನುಮತಿ ಕೋರುತ್ತಾ ಬಿಜೆಪಿ?

By Kiran B Hegde
|
Google Oneindia Kannada News

ಬೆಂಗಳೂರು, ಜ. 22: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಬಂದಿರುವ ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ವಿಚಾರಣೆ ನಡೆಸಲು ಅನುಮತಿ ನೀಡಬೇಕೆಂದು ಕೋರಿ ಬಿಜೆಪಿ ಮುಖಂಡರು ರಾಜ್ಯಪಾಲರಿಗೆ ಇದೇ ವಾರ ಮನವಿ ಸಲ್ಲಿಸುವ ಸಂಭವವಿದೆ.

ಮುಖ್ಯಮಂತ್ರಿ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರು ದೂರು ದಾಖಲಿಸುವ ಸಂಭವನೀಯತೆ ಇದೆ. [ಸಿದ್ದರಾಮಯ್ಯ ಅವ್ಯವಹಾರದ ಮೊತ್ತ 700 ಕೋಟಿ ರು.]

vala

ಆದರೆ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೂ ಡಿನೋಟಿಫಿಕೇಶನ್ ಪ್ರಕರಣ ಎದುರಿಸುತ್ತಿರುವ ಕಾರಣ ಪಕ್ಷದ ಬದಲು ವೈಯಕ್ತಿಕವಾಗಿ ದೂರು ದಾಖಲಿಸಬೇಕು ಎಂಬ ಯೋಚನೆಯೂ ಇದೆ. [ಡಿನೋಟಿಫೈ ಮಾಡಿದ್ದಲ್ಲಿ ರಾಜಕೀಯದಿಂದ ನಿವೃತ್ತಿ]

ಅಲ್ಲದೆ, ವೈಯಕ್ತಿಕ ದೂರು ದಾಖಲಿಸಿದಾಗ ಆತ ಮಾತ್ರ ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣಗಳನ್ನು ಆಲಿಸಬಹುದು. ಆದರೆ, ಪಕ್ಷದ ಮುಖಂಡರಿಗೆ ಇದು ಸಾಧ್ಯವಿಲ್ಲ ಎಂದು ಹಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. [ಮೋದಿಗೂ ಮೊರೆಯಿಟ್ಟ ಅರ್ಕಾವತಿ ನಿವೇಶನದಾರರು]

English summary
The BJP is expected to seek permission of Karnataka Governor to prosecute Chief Minister Siddaramaiah over his alleged involvement in the denotification of Arkavathi Layout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X