ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಚಾರಕ್ಕೆ ಬಿಜೆಪಿಯಿಂದ 'ವಾಟ್ಸಾಪ್ ತಂತ್ರ', 5000 ಗ್ರೂಪ್ ರಚನೆ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 28: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ. ಸಾಮಾಜಿಕ ಜಾಲತಾಣಗಳನ್ನು ಭರ್ಜರಿಯಾಗಿ ನೆಚ್ಚಿಕೊಂಡಿರುವ ಬಿಜೆಪಿ ಪ್ರಚಾರಕ್ಕಾಗಿ 5,000 ವಾಟ್ಸಾಪ್ ಗುಂಪುಗಳನ್ನು ತಯಾರಿಸಲು ಮುಂದಾಗಿದೆ. ಈ ಗುಂಪುಗಳ ಮೂಲಕ ಜನರನ್ನು ತಲುಪುವ ಯೋಜನೆ ಹಾಕಿಕೊಂಡಿದೆ.

ಇದಕ್ಕಾಗಿ 25,000 ಕಾರ್ಯಕರ್ತರಿಗೆ ತರಬೇತಿ ನೀಡುವ ಗುರಿಯನ್ನೂ ಬಿಜೆಪಿ ಹಾಕಿಕೊಂಡಿದೆ. ಕಳೆದ ಆರು ತಿಂಗಳಿನಿಂದ ಇದಕ್ಕಾಗಿ ತರಬೇತಿಗಳೂ ನಡೆಯುತ್ತಿವೆ. "ಬಿಜೆಪಿಯ ಐಟಿ ಸೆಲ್ 2007ರಿಂದ಻ ಅಸ್ತಿತ್ವದಲ್ಲಿದೆ. ವಾಟ್ಸಾಪ್ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ವಾಟ್ಸಾಪ್ ಮೂಲಕ ಸಂಪರ್ಕ ಸಾಧಿಸಲು ಯೋಚಿಸಲಾಗಿದೆ. ರಾಜ್ಯ, ಜಿಲ್ಲಾ, ಕ್ಷೇತ್ರ ಮಟ್ಟದಲ್ಲಿ ಬೇರೆ ಬೇರೆ ರೀತಿಯ ಗುಂಪುಗಳನ್ನು ರಚಿಸಲಾಗಿದೆ. ನಮ್ಮ ಗುರಿ 5,000 ಸದ್ಯ 2,000 ಗುಂಪುಗಳನ್ನು ಆರಂಭಿಸಲಾಗಿದೆ," ಎಂದು ಬಿಜೆಪಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಬಾಲಾಜಿ ಬಸವರಾಜ್ ಎನ್ಡಿಟಿವಿಗೆ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆಗೆ ಬಿಜೆಪಿಯಿಂದ ಸಮೀಕ್ಷೆವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆಗೆ ಬಿಜೆಪಿಯಿಂದ ಸಮೀಕ್ಷೆ

BJP’s ‘WhatsApp Strategy’ with 5,000 groups to win Karnataka

ಬಿಜೆಪಿಯ ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರು ಮೊಬೈಲ್ ನಂಬರ್ ಗಳನ್ನು ಹೊಂದಿಸುವ ಕೆಲಸದಲ್ಲಿ ನಿರತವಾಗಿದ್ದು, ಇವರಿಗೆಲ್ಲಾ ಆಕರ್ಷಕ ಅನಿಮೇಷನ್, ಜಿಫ್ ಚಿತ್ರಗಳನ್ನು ಬಿಜೆಪಿ ಕಡೆಯಿಂದ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ.

ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ 100 ಜನ ವಾಟ್ಸಾಪ್ ಅಡ್ಮಿನ್ ಗಳನ್ನು ನಿಯುಕ್ತಿ ಮಾಡಿಕೊಳ್ಳುವ ಗುರಿ ಬಿಜೆಪಿ ಮುಂದಿದೆ. ಇವರ ಮೂಲಕ ತಮಗೆ ಬೇಕಾದ ಸರಕುಗಳನ್ನು ಜನರಿಗೆ ತಲುಪಿಸುವುದು ಬಿಜೆಪಿ ಉದ್ದೇಶವಾಗಿದೆ.

ಉತ್ತರ ಪ್ರದೇಶದಲ್ಲೂ ಬಿಜೆಪಿ ಪ್ರಚಾರಕ್ಕೆ ಮೊಬೈಲ್ ಹಾಗೂ ವಾಟ್ಸಾಪ್ ಗಳನ್ನು ದೊಡ್ಡಮಟ್ಟಕ್ಕೆ ಬಳಸಿಕೊಂಡಿತ್ತು; ಮತ್ತು ದೊಡ್ಡ ಮಟ್ಟಕ್ಕೆ ಗೆಲುವನ್ನೂ ಸಾಧಿಸಿತ್ತು.

English summary
BJP is training nearly 25,000 volunteers to run WhatsApp groups across the state that will promote candidates and the party's main promises. The goal is to create 5,000 groups. The training for those who will run them began six months ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X