ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಲ್ಸಿ ಎಲೆಕ್ಷನ್: ಜಗದೀಶ್ ಶೆಟ್ಟರ್ ತಮ್ಮನಿಗೆ ಟಿಕೆಟ್

By Mahesh
|
Google Oneindia Kannada News

ಬೆಂಗಳೂರು, ನ. 18: ವಿಧಾನಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿದೆ. ಬಿಜೆಪಿ ಹಿರಿಯ ನಾಯಕರ ಸೋದರರು ಟಿಕೆಟ್ ಗಳಿಸಿರುವುದು ಹಲವರ ಹುಬ್ಬೇರಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ನಡೆದ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೆಟ್ಟರ್‌ಗೆ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಟಿಕೆಟ್ ನೀಡಲು ತೀರ್ಮಾನಿಸಿದೆ.

BJP candidates for MLC polls 2015, Pradeep Shettar gets a ticket

ಟಿಕೆಟ್ ಪಡೆದವರ ಹೆಸರು ಹಾಗೂ ಕ್ಷೇತ್ರ ಇಂತಿದೆ:
* ಬೆಳಗಾವಿ: ಮಹಾಂತೇಶ್ ಕವಟಗಿಮಠ,
* ಕೊಡಗು: ಸುಜಾ ಕುಶಾಲಪ್ಪ,
* ಮೈಸೂರು: ರಘು,
* ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳು: ಪ್ರಾಣೇಶ್,
* ಶಿವಮೊಗ್ಗ : ಆರ್.ಕೆ.ಸಿದ್ದರಾಮಣ್ಣ,
* ಉತ್ತರ ಕನ್ನಡ : ಗಣಪತಿ,
* ಕಲಬುರಗಿ: ಜಿ.ಬಿ.ಪಾಟೀಲ್,
* ಕೊಪ್ಪಳ : ಎಂ.ವಿ.ಚಂದ್ರಶೇಖರ್.
* ದಾವಣಗೆರೆ- ಚಿತ್ರದುರ್ಗ ಕ್ಷೇತ್ರ: ನವೀನ್
* ಬೆಳಗಾವಿ ಪದವೀಧರ ಕ್ಷೇತ್ರ: ಎಂ.ವಿ.ರವಿಶಂಕರ್
* ಬಾಗಲಕೋಟೆ : ಹನುಮಂತ ನಿರಾಣಿ
* ವಾಯುವ್ಯ ಪದವೀಧರ ಕ್ಷೇತ್ರ: ಅರುಣ್‌ ಶಹಾಪುರ
* ಪಶ್ಚಿಮ ಶಿಕ್ಷಕರ ಕ್ಷೇತ್ರ: ಎಂ.ನಾಗರಾಜ್‌

ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಉಭಯ ಸದನಗಳ ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸುರೇಶ್‌ಕುಮಾರ್, ಸಿ.ಟಿ.ರವಿ ಹಾಗೂ ರಘುನಾಥ ಮಲ್ಕಾಪುರೆ ಉಪಸ್ಥಿತರಿದ್ದರು.

2013ರಲ್ಲಿ ಬೈ ಎಲೆಕ್ಷನ್ ನಲ್ಲಿ ಕಣಕ್ಕಿಳಿದಿದ್ದ ಪ್ರದೀಪ್ ಶೆಟ್ಟರ್ ಅವರು ಕಾಂಗ್ರೆಸ್ಸಿನ ನಾಗರಾಜ್ ಛಬ್ಬಿ ವಿರುದ್ಧ ಸೋಲು ಕಂಡಿದ್ದರು. ಈ ಬಾರಿ ಪ್ರದೀಪ್ ಶೆಟ್ಟರ್ ಅಲ್ಲದೆ, ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಸೋದರ ಹನುಮಂತ ನಿರಾಣಿ ಅವರಿಗೂ ಅವಕಾಶ ಸಿಕ್ಕಿದೆ. 2016ರ ಜನವರಿ 6ರೊಳಗೆ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.

ಪರಿಷತ್ ಬಲಾಬಲ :
ವಿಧಾನಪರಿಷತ್ ಸದಸ್ಯರ ಸಂಖ್ಯೆ ಒಟ್ಟು 75. ಕಾಂಗ್ರೆಸ್ 28, ಬಿಜೆಪಿ 30, ಜೆಡಿಎಸ್ 12, ಪಕ್ಷೇತರ 4, ಸಭಾಧ್ಯಕ್ಷರು 1 (ಒನ್ ಇಂಡಿಯಾ ಸುದ್ದಿ)

English summary
The State BJP on Tuesday is said to have finalised the names of siblings of two senior leaders for the elections to the Legislative Council from the graduates and local authorities constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X