ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಬೃಹತ್ ಜಾಥಾ

By Mahesh
|
Google Oneindia Kannada News

ಬೀದರ್, ಜುಲೈ 20: ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆ ಪಡೆಯಲು ಜನಜಾಗೃತಿ ಮೆರವಣಿಗೆ ಜಾಥಾ ಯಶಸ್ವಿಯಾಗಿದೆ ಎಂದು ಎಂದು ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಘೋಷಿಸಿದ್ದಾರೆ. ಆದರೆ, ಮಾತೆ ಮಹಾದೇವಿಗೆ ಪ್ರಚಾರದ ಹುಚ್ಚು ಎಂದು ಇತಿಹಾಸ ತಜ್ಞ ಸಂಶೋಧಕ ಎಂ. ಚಿದಾನಂದ ಮೂರ್ತಿ ಟೀಕಿಸಿದ್ದಾರೆ. ಒಟ್ಟಾರೆ ಮತೊಮ್ಮೆ ವೀರಶೈವ ಹಾಗೂ ಲಿಂಗಾಯತ ನಡುವಿನ 'ಧರ್ಮ ಕದನ' ಮೊದಲುಗೊಂಡಿದೆ.

ಲಿಂಗಾಯತ vs ವೀರಶೈವ : ಎರಡೂ ಅಪ್ಪಟ ಜಂಗಮ ತತ್ವಲಿಂಗಾಯತ vs ವೀರಶೈವ : ಎರಡೂ ಅಪ್ಪಟ ಜಂಗಮ ತತ್ವ

ಬೀದರ್ ನ ನೆಹರೂ ಕ್ರೀಡಾಂಗಣದಿಂದ ಆರಂಭವಾದ ಬುಧವಾರ ಆರಂಭವಾದ ಮೆರವಣಿಗೆ ಜಾಥಾ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಸವೇಶ್ವರ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೊನೆಗೊಂಡಿತು. ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದ ಜಿಲ್ಲೆಗಳಿಂದ ಬಂದಿದ್ದ ಲಿಂಗಾಯತರು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಹಾಗೂ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮಹಾದೇವ ಅವರಿಗೆ ಸಲ್ಲಿಸಿದರು.

'ತಹಶೀಲ್ದಾರ್ ಗಳು ಲಿಂಗಾಯತರಿಗೆ ವೀರಶೈವ-ಲಿಂಗಾಯತ ಎಂದು ಜಾತಿ ಪ್ರಮಾಣಪತ್ರ ನೀಡುತ್ತಿದ್ದಾರೆ. ಲಿಂಗಾಯತರಲ್ಲಿ ಹಲವು ಉಪ ಜಾತಿಗಳಿವೆ. ಎಲ್ಲರಿಗೂ ವೀರಶೈವ ಲಿಂಗಾಯತ ಜಾತಿ ಪ್ರಮಾಣಪತ್ರ ಕೊಡುವುದು ಸರಿ ಅಲ್ಲ' ಎಂದು ಬಸವಲಿಂಗ ಪಟ್ಟದೇವರು ಹೇಳಿದ್ದಾರೆ. ಚಿತ್ರಕೃಪೆ: ವೀರಶೈವ ಲಿಂಗಾಯತ ಯುವ ವೇದಿಕೆ ಫೇಸ್ ಬುಕ್ ಪುಟ

ಬೀದರ್ ನಲ್ಲಿ ಬೃಹತ್ ಮೆರವಣಿಗೆ

ಬೀದರ್ ನಲ್ಲಿ ಬೃಹತ್ ಮೆರವಣಿಗೆ

'ಲಿಂಗಾಯತ ಸ್ವತಂತ್ರ ಧರ್ಮ' ಎಂದು ಬರೆಯಲಾದ ಟೋಪಿ, ಷಟ್‌ಸ್ಥಲ ಧ್ವಜ, ಬಸವೇಶ್ವರ ಚಿತ್ರ,ಕೇಸರಿ ಧ್ವಜ, ವಚನಗಳ ಫಲಕ ಸೇರಿದಂತೆ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ವಸ್ತುಗಳನ್ನು ಪ್ರದರ್ಶಿಸುತ್ತಾ ಘೋಷಣೆ ಕೂಗುತ್ತಾ ಬೀದರ್ ನ ತುಂಬಾ ಮೆರವಣಿಗೆ ಮಾಡಲಾಯಿತು.

ಮಾತೆ ಮಹಾದೇವಿಗೆ ಪ್ರಚಾರದ ಹುಚ್ಚು

ಮಾತೆ ಮಹಾದೇವಿಗೆ ಪ್ರಚಾರದ ಹುಚ್ಚು

'ಮಾತೆ ಮಹಾದೇವಿ ಅವರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಅವರಿಗೆ ಪ್ರಚಾರದ ಹುಚ್ಚು ಹಿಡಿದಿದೆ. ಅಖಿಲ ಭಾರತ ವೀರಶೈವ ಮಹಾಸಭಾದವರು ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸಲು ಒತ್ತಾಯಿಸುತ್ತಿರುವುದು ಸರಿಯಲ್ಲ. ಲಿಂಗಾಯತರು ಹಿಂದೂ ಧರ್ಮದ ಭಾಗ ಎನ್ನುವುದನ್ನು ಅಲಕ್ಷಿಸಿ ಅವರು ಸ್ಥಾನಮಾನ ಕೇಳುತ್ತಿದ್ದಾರೆ' ಎಂದು ಸಂಶೋಧಕ ಎಂ. ಚಿದಾನಂದ ಮೂರ್ತಿ ಟೀಕಿಸಿದ್ದಾರೆ

ವೀರಶೈವ ಪಂಥಕ್ಕೆ ಹೊಸ ಆಯಾಮ

ವೀರಶೈವ ಪಂಥಕ್ಕೆ ಹೊಸ ಆಯಾಮ

ಲಿಂಗಾಯತ ಶ್ರೀಸಾಮಾನ್ಯನ ಧರ್ಮ. ಬಸವಣ್ಣ ಧರ್ಮಗುರು. ಆದರೆ ಪಂಚಪೀಠಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಬೇಕಿದ್ದರೆ ವೀರಶೈವಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲಿ. ಆದರೆ, ಲಿಂಗಾಯತ ಧರ್ಮಕ್ಕೆ ತಗಲು ಹಾಕುವುದು ಬೇಡ' ಎಂದು ಮಾತೆ ಮಹಾದೇವಿ ವಾದಿಸಿದ್ದಾರೆ. ಆದರೆ, ಪಂಚಪೀಠಗಳ ಪ್ರಕಾರ ಬಸವಣ್ಣ ಅವರು ಹೊಸ ಧರ್ಮ ಸ್ಥಾಪಕರಲ್ಲ, ವೀರಶೈವ ಪಂಥಕ್ಕೆ ಹೊಸ ಆಯಾಮ ನೀಡಿದರು ಎನ್ನಲಾಗಿದೆ.

ಮಹಾಸಭಾದಿಂದ ಅನ್ಯಾಯ

ಮಹಾಸಭಾದಿಂದ ಅನ್ಯಾಯ

ಲಿಂಗಾಯತ ಪದಕ್ಕೆ ಸಮನಾರ್ಥಕವಾಗಿ ವೀರಶೈವ ಪದ ಬಳಕೆ ಮಾಡುತ್ತಿರುವ ಕಾರಣ ಇಲ್ಲಿಯವರೆಗೆ ಸ್ವತಂತ್ರ ಧರ್ಮ ಸ್ಥಾನಮಾನ ಸಿಕ್ಕಿಲ್ಲ. ಮಹಾಸಭಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬೀದರ್‌ನ ಖಂಡ್ರೆ ಪರಿವಾರ, ಈಗಿನ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಗೊಂದಲ ಹೆಚ್ಚಿಸುತ್ತಿದ್ದಾರೆ. ಎಲ್ಲಾ ವಿಚಾರ ಗೊತ್ತಿರುವ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರು ಅರ್ಧ ಸತ್ಯ ಮಾತ್ರ ಹೇಳುತ್ತಿದ್ದಾರೆ ಎಂದು ಮಾತೆ ಮಹಾದೇವಿ ಬೇಸರ ವ್ಯಕ್ತಪಡಿಸಿದರು.

R

ವೀರಶೈವ ಎಂಬುದು ಉಪ ಪಂಗಡ

ವೀರಶೈವ ಎಂಬುದು ಉಪ ಪಂಗಡ

ವೀರಶೈವ ಎಂಬುದು ವೇದ ಮತ್ತು ಆಗಮಗಳ ಆಧಾರದ ಮೇಲೆ ರೂಪುಗೊಂಡ ಶೈವ ಪಂಥದ ಶಾಖೆಯಾಗಿದೆ. ಅದಕ್ಕೆ ಸ್ವತಂತ್ರ ಧರ್ಮದ ಮನ್ನಣೆ ಸಾಧ್ಯವಿಲ್ಲ. ಹಾಗಾಗಿ ಲಿಂಗಾಯತ ಹಾಗೂ ವೀರಶೈವ ಪದಗಳ ಸಮಾನಾರ್ಥಕ ಬಳಕೆ ಸರಿಯಲ್ಲ. ವೀರಶೈವ ಎಂಬುದು ಲಿಂಗಾಯತ ಸಮುದಾಯದಲ್ಲಿ ನಂತರ ಬಂದು ಸೇರಿಕೊಂಡ ಒಂದು ಉಪ ಪಂಗಡ ಮಾತ್ರ'

English summary
The demand for independent religion status for Lingayats once again gathered new momentum on Wednesday when lakhs of people belonging to Lingayat community took to the streets in Bidar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X