ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಕ್ಕಿ ಜ್ವರ : ಬೀದರ್‌ನಲ್ಲಿ ಕೋಳಿಗಳ ಸಂಹಾರ ಆರಂಭ

|
Google Oneindia Kannada News

ಬೀದರ್, ಮೇ 11 : ಬೀದರ್ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ಮೇಳಕೇರಾ ಗ್ರಾಮದಲ್ಲಿ ಕೋಳಿಗಳ ಹತ್ಯೆ ಕಾರ್ಯಾಚರಣೆ ಆರಂಭವಾಗಿದೆ. ಮಂಗಳವಾರ ಸಂಜೆ ಆರಂಭವಾದ ಈ ಕಾರ್ಯಾಚರಣೆ ಬುಧವಾರ ಅಂತ್ಯಗೊಳ್ಳುವ ಸಾಧ್ಯತೆ ಇದೆ.

ಮೆಳಕೇರಾ ಗ್ರಾಮದಲ್ಲಿನ ರಮೇಶ್‌ ಗುಪ್ತಾ ಅವರ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಫಾರಂನಲ್ಲಿರುವ 1.42 ಲಕ್ಷ ಕೋಳಿಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ. ಮಂಗಳವಾರ ಸಂಜೆ 4 ಗಂಟೆಗೆ 250 ಸಿಬ್ಬಂದಿಗಳು ಕೋಳಿಗಳ ಸಂಹಾರ ಕಾರ್ಯ ಆರಂಭಿಸಿದ್ದಾರೆ. [ಹಕ್ಕಿ ಜ್ವರ, 1 ಲಕ್ಷ ಕೋಳಿ ಕೊಲ್ಲಲು ಆದೇಶ]

bidar

ಕಾರ್ಯಾಚರಣೆ ಹೇಗೆ? : ಕೋಳಿ ಕೊಲ್ಲುವ ಎಲ್ಲಾ ಸಿಬ್ಬಂದಿಗಳ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕಾರ್ಯಾಚರಣೆ ಆರಂಭಿಸಲಾಗಿದೆ. ಬಿಳಿ ಬಣ್ಣದ ರಬ್ಬರ್‌ ಡ್ರೆಸ್‌, ಕನ್ನಡಕ ಇರುವ ಮಾಸ್ಕ್‌ ಧರಿಸಿರುವ ಸಿಬ್ಬಂದಿಗಳು, ಕೋಳಿಗಳ ಕುತ್ತಿಗೆ ಮುರಿದು ಗೋಣಿ ಚೀಲಗಳಲ್ಲಿ ತುಂಬುತ್ತಾರೆ. ನಂತರ ಅದನ್ನು ಫಾರಂ ಪಕ್ಕದಲ್ಲಿಯೇ ತೋಡಿದ್ದ ಗುಂಡಿಗಳಲ್ಲಿ ಮುಚ್ಚಲಾಗುತ್ತಿದೆ. [ಮಂಗಟ್ಟೆ ಹಕ್ಕಿಯನ್ನು 'ಮಣ್ಣು' ಮಾಡಿದ ಭಟ್ಟರು]

ಗುಂಡಿಯಲ್ಲಿ ಕೋಳಿಗಳನ್ನು ಹಾಕಿದ ನಂತರ, ಸೋಂಕು ಹರಡದಂತೆ ತಡೆಯಲು ಅದರ ಮೇಲೆ ಐದಾರು ಪದರ ಸುಣ್ಣ, ಮೇಲೆ ಬ್ಲೀಚಿಂಗ್‌ ಪೌಡರ್ ಹಾಕಿ ಮಣ್ಣು ಮುಚ್ಚಲಾಗುತ್ತಿದೆ. ಮಂಗಳವಾರ ಸಂಜೆ ಆರಂಭವಾದ ಕಾರ್ಯಾಚರಣೆ, ಬುಧವಾರ ಸಂಜೆಯ ವೇಳೆಗೆ ಅಂತ್ಯಗೊಳ್ಳುವ ಸಾಧ್ಯತೆ ಇದೆ.

bird flu

'ಮಂಗಳವಾರ ಮಧ್ಯರಾತ್ರಿಯವರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ವಿಳಂಬವಾಗಿ ಆರಂಭವಾದ ಕಾರಣ ಕೋಳಿಗಳ ಸಂಹಾರಕ್ಕೆ ಹೆಚ್ಚು ಸಮಯ ಹಿಡಿಯುತ್ತಿದೆ. ಬುಧವಾರ ಸಂಜೆಯವರೆಗೂ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
Culling operations began in a private poultry farm in Melkera village of Humnabad taluk, Bidar district where bird flu was detected. 300 people involved in the operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X