ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿ ವಿರುದ್ಧದ ಕೇಸ್, ವಿಶೇಷ ಪೀಠದಲ್ಲಿ ವಿಚಾರಣೆ

|
Google Oneindia Kannada News

ಬೆಂಗಳೂರು, ಅ. 17 : ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಗೆ ವಿಶೇಷ ಪೀಠ ಸ್ಥಾಪನೆ ಮಾಡಲು ಸುಪ್ರೀಂಕೋರ್ಟ್ ತೀರ್ಮಾನಿಸಿದೆ. ನ.5ರ ನಂತರ ವಿಶೇಷ ಪೀಠ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಈ ಪ್ರಕರಣದ ಕುರಿತು ವಿಚಾರಣೆ ನಡೆಸಲಿದೆ.

ಸುಪ್ರೀಂಕೋರ್ಟ್‌ನಲ್ಲಿ ಇಂದು ಡಿ.ಕೆ.ಶಿವಕುಮಾರ್ ಸತ್ತವರ ಹೆಸರಿನಲ್ಲಿ ಡಿನೋಟಿಫೈ ಮಾಡಿದ್ದಾರೆ ಎಂಬ ಪ್ರಕರಣದ ತನಿಖೆಗೆ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಕಬ್ಬಾಳೆ ಗೌಡ, ಟಿ.ಜೆ.ಅಬ್ರಹಾಂ ಸಲ್ಲಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಎಚ್‌.ಎಸ್.ದತ್ತು ಅವರ ಪೀಠ ನಡೆಸಿತು.

dk shivakumar

ಅರ್ಜಿಯ ವಿಚಾರಣೆ ವೇಳೆ ಈ ರೀತಿಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ಪೀಠ ಸ್ಥಾಪನೆ ಮಾಡುವ ಅಗತ್ಯವಿದೆ ಎಂದು ಮುಖ್ಯನ್ಯಾಯಮೂರ್ತಿ ಎಚ್.ಎಲ್.ದತ್ತು ಅಭಿಪ್ರಾಯಪಟ್ಟರು. ಕೋರ್ಟ್‌ಗೆ 10 ದಿನಗ ರಜೆ ಇರುವುದರಿಂದ ನ.5ರ ನಂತರ ವಿಶೇಷ ಪೀಠ ರಚನೆ ಮಾಡಲು ನ್ಯಾಯಮೂರ್ತಿಗಳು ಸೂಚನೆ ನೀಡಿದರು.

ಪ್ರಕರಣದ ಹಿನ್ನೆಲೆ : ಬಿಡಿಎ 1986ರಲ್ಲಿ ಎನ್‍ಜಿಇಎಫ್ ಬಡಾವಣೆಗೆ ಬೆನ್ನಿಗಾನಹಳ್ಳಿಯ ಬಿ.ಕೆ.ಶ್ರೀನಿವಾಸ್ ಅವರ 4 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿತ್ತು. 1962ರಲ್ಲಿ ಕೈಗಾರಿಕೆ ಉದ್ದೇಶಕ್ಕೆ ಪರಿವರ್ತನೆಯಾಗಿದ್ದ ಭೂಮಿಯನ್ನು ವಸತಿ ಉದ್ದೇಶಕ್ಕೆ ಬಳಸಲು ಅನುವು ಮಾಡಿಕೊಡುವಂತೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪಗೆ ಭೂ ಮಾಲೀಕ ಶ್ರೀನಿವಾಸ್‌ ಹೆಸರಲ್ಲಿ ಡಿಕೆಶಿ ಅರ್ಜಿ ಸಲ್ಲಿಸಿದ್ದರು.

2010ರ ಮೇನಲ್ಲಿ ಈ ಜಾಗವನ್ನು ಡಿನೋಟಿಫೈ ಮಾಡಲಾಗಿತ್ತು. ಆದರೆ, ಡಿಕೆ ಶಿವಕುಮಾರ್ ಅವರು 2003ರಲ್ಲಿಯೇ ಈ ಭೂಮಿಯನ್ನು ಖರೀದಿ ಮಾಡಿದ್ದಾರೆ. ಸತ್ತವರ ಹೆಸರಲ್ಲಿ 2010ರಲ್ಲಿ ಡಿನೋಟಿಫೈ ಮಾಡಿಸಿದ್ದಾರೆ ಎಂದು ಕಬ್ಬಾಳೆ ಗೌಡ, ಟಿ.ಜೆ.ಅಬ್ರಹಾಂ ಲೋಕಾಯುಕ್ತ ಕೋರ್ಟ್‌ಗೆ ದೂರು ಸಲ್ಲಿಸಿದ್ದರು.

ಡಿಕೆ ಶಿವಕುಮಾರ್ ಇದಕ್ಕೆ ಕರ್ನಾಟಕ ಹೈಕೋರ್ಟ್‌ನಿಂದ ತಡೆಯಾಜ್ಞೆಯನ್ನು ಪಡೆದುಕೊಂಡಿದ್ದರು. ತಡೆಯಾಜ್ಞೆ ತೆರವುಗೊಳಿಸಬೇಕೆಂದು ಅಬ್ರಾಹಂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಈಗ ವಿಶೇಷ ಪೀಠ ಸ್ಥಾಪಿಸುವ ಪ್ರಸ್ತಾಪವನ್ನು ಸುಪ್ರೀಂಕೋರ್ಟ್ ಮಾಡಿದೆ. ಆದ್ದರಿಂದ ತನಖೆ ಚುರುಕಾಗಲಿದೆ.

English summary
Benniganahalli De-notification case inquiry will continue in Supreme Court special bench ordered Chief Justice H.L.Dattu. De-notification case field against Karnataka Energy Minister D.K. Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X