ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಂ ರೇಟ್: ಬೆಂಗಳೂರಿಗೆ ಮೂರನೇ ಸ್ಥಾನ, ಆದರೂ ಹೆಣ್ಮಕ್ಕಳು ಸೇಫಂತೆ

|
Google Oneindia Kannada News

ಬೆಂಗಳೂರು, ಆಗಸ್ಟ್ 31: ಈ ಕ್ರೈಂ ಚಾರ್ಟ್ ನೋಡಿದರೆ ಬೆಂಗಳೂರಿಗರು ನಿಜಕ್ಕೂ ಯೋಚನೆ ಮಾಡುವಂಥ ವಿಷಯ ಇದೆ. ಆದರೆ ಬೇರೆ ಸಣ್ಣ ನಗರಗಳ ಅಪರಾಧ ಪ್ರಮಾಣಕ್ಕೆ ಹೋಲಿಸಿದರೆ ಇಲ್ಲಿ ಕಡಿಮೆ. ಹತ್ತು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ 53 ಮಹಾನಗರಗಳ ಕ್ರೈಂ ರೇಟ್ ಆಧರಿಸಿ ಪಟ್ಟಿ ತಯಾರಿಸಿದ್ದು, ಇದರಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

ದೆಹಲಿ ಮತ್ತು ಪಾಟ್ನಾ ಮೊದಲೆರಡು ಸ್ಥಾನದಲ್ಲಿವೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ 2015ರ ಅಂಕಿ-ಅಂಶಗಳ ಆಧಾರದಲ್ಲಿ ಪಟ್ಟಿ ತಯಾರಿಸಲಾಗಿದೆ. ಒಂದು ಲಕ್ಷ ಜನಸಂಖ್ಯೆಯನ್ನು ಮಾನದಂಡವಾಗಿ ಇಟ್ಟುಕೊಂಡು, ಒಟ್ಟು ಅಪರಾಧ ಪ್ರಕರಣಗಳನ್ನು ಲೆಕ್ಕ ಹಾಕಿ ಕ್ರೈಂ ರೇಟ್ ನಿರ್ಧರಿಸಲಾಗಿದೆ.[ಬೆಂಗಳೂರು: ಪಿಜಿಗೆ ನುಗ್ಗಿ ಐಟಿ ಉದ್ಯೋಗಿ ಮೇಲೆ ರೇಪ್]

Bengaluru ranked 3rd in crime rate

ಮಹಿಳೆಯರ ವರದಕ್ಷಿಣೆ ಸಾವು, ದೌರ್ಜನ್ಯ, ಕೊಲೆಗಳು ಇವುಗಳೆಲ್ಲದರ ಸಂಖ್ಯೆ ನೋಡಿದಾಗ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಆದರೆ ಲಕ್ಷ ಜನಸಂಖ್ಯೆ ಆಧಾರದಲ್ಲಿ ಹೋಲಿಸಿದಾಗ ಇದೇ ರೀತಿಯ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರಿಗಿಂತ ದೇಶದ ಇತರ ಸಣ್ಣ ನಗರಗಳಲ್ಲಿ ಪರಿಸ್ಥಿತಿ ಮತ್ತೂ ಭಯಂಕರವಾಗಿದೆ.

ಬೆಂಗಳೂರಿನಲ್ಲಿ 188 ಕೊಲೆ ಪ್ರಕರಣದಲ್ಲಿ 201 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿ (464 ಪ್ರಕರಣ, 490 ಸಾವು) ಮತ್ತು ಪಾಟ್ನಾ (232 ಪ್ರಕರಣ, 232 ಸಾವು) ಗಿಂತ ಬೆಂಗಳೂರು ಹಿಂದಿದೆ. ಆಂದರೆ ಪ್ರತಿ ಲಕ್ಷ ಜನಕ್ಕೆ 2.2 ಪ್ರಕರಣ ದಾಖಲಾದಂತಾಯಿತು. ಬೆಂಗಳೂರಿಗಿಂತ ಸಣ್ಣ ನಗರಗಳಾದ ಪಾಟ್ನಾ (11.3), ಮೀರತ್ (5.8), ಜೋಧ್ ಪುರ್ (5.1) ಹಾಗೂ ದೆಹಲಿಯಲ್ಲಿ (4.1) ಆ ಪ್ರಮಾಣ ಹೆಚ್ಚಾಗಿದೆ.[ಪರಪ್ಪನ ಅಗ್ರಹಾರ : ತರಕಾರಿ ವಾಹನದಲ್ಲಿ ಕೈದಿ ಪರಾರಿ!]

ಆದರೆ, ಅಟೆಂಪ್ಟ್ ಟು ಮರ್ಡರ್ ಕೇಸಲ್ಲಿ 464 ಪ್ರಕರಣದಲ್ಲಿ 481 ಗಾಯಾಳುಗಳಾಗಿದ್ದು, ಬೆಂಗಳೂರು ಎರಡನೆ ಸ್ಥಾನದಲ್ಲಿದ್ದರೆ, ಇದೇ ಪ್ರಕರಣದಲ್ಲಿ ದೆಹಲಿ (674 ಪ್ರಕರಣ, 703 ಗಾಯಾಳುಗಳು) ಮೊದಲ ಸ್ಥಾನದಲ್ಲಿದ್ದರೆ, ಮುಂಬೈ (231 ಪ್ರಕರಣ, 243 ಗಾಯಾಳುಗಳು) ಮೂರನೇ ಸ್ಥಾನದಲ್ಲಿದೆ.

ಇನ್ನು ಮಹಿಳೆಯರಿಗೆ ಬೆಂಗಳೂರೇ ಸೇಫ್. ಅತ್ಯಾಚಾರ ಪ್ರಕರಣಗಳಲ್ಲಿ ಬೆಂಗಳೂರು ಹನ್ನೆರಡನೇ ಸ್ಥಾನ (112 ಪ್ರಕರಣ) ದಲ್ಲಿದೆ. ದೆಹಲಿ (1893), ಮುಂಬೈ (712), ಜೈಪುರ (273) ಮೊದಲ ಮೂರು ಸ್ಥಾನದಲ್ಲಿವೆ. ಪ್ರಕರಣಗಳ ಶೇಕಡಾವಾರು ಪ್ರಮಾಣದಲ್ಲೂ ಜೋಧ್ ಪುರ (13.4), ದೆಹಲಿಗಿಂತ (1.6), ಬೆಂಗಳೂರು (1.3) ಹಿಂದಿದೆ.

ವರದಕ್ಷಿಣೆ ಸಾವು ಪ್ರಕರಣ: ದೆಹಲಿ (100), ಪಾಟ್ನಾ (74), ಬೆಂಗಳೂರು (54). ಶೇಕಡಾವಾರು ಪ್ರಮಾಣದಲ್ಲಿ ಬೆಂಗಳೂರು (0.6), ಆಗ್ರಾ (3.6), ಪಾಟ್ನಾದಲ್ಲಿ (2.5) ಇದೆ. ಮಹಿಳೆಯರ ಮೇಲಿನ ದೌರ್ಜನ್ಯದ 718 ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ದೆಹಲಿ, ಮುಂಬೈಗೆ ಹೋಲಿಸಿದರೆ ಇಲ್ಲಿನ ಪರಿಸ್ಥಿತಿಯೇ ವಾಸಿ.[ಬೆಂಗಳೂರು, ಮುಂಬೈನಲ್ಲೂ ಐಎಸ್ ಐಎಸ್ ನಿಂದ ಚಾಕು ದಾಳಿಗೆ ಸ್ಕೆಚ್]

ಬೆಂಗಳೂರಿನಲ್ಲಿ ಪೊಲೀಸರೇ ಸ್ವತಃ ದಾಖಲಿಸಿಕೊಂಡಿರುವ ಕೇಸುಗಳು 35,575. ಈ ಸಂಖ್ಯೆ ಕೂಡ ದೆಹಲಿ, ಮುಂಬೈಗೆ ಹೋಲಿಸಿದರೆ ಬಹಳ ಕಡಿಮೆ. ಇಂಥ ಅಪರಾಧ ಪ್ರಕರಣಗಳಲ್ಲಿ 85 ಲಕ್ಷ ಜನಸಂಖ್ಯೆಯ ಬೆಂಗಳೂರಿನದು ಶೇ 5.3ರಷ್ಟು ಪಾಲಿದೆ.

English summary
Bengaluru city third in a list of 53 big cities (population of 10 lakh or more) in major crimes, but smaller cities have much higher incidence rate.Delhi and Patna are the top two crime cities, National Crime Records Bureau data for 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X