ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸಭ್ಯ ಕುಡುಕರ ರಾಜಧಾನಿ ಎಂದ ಅಬಕಾರಿ ಸಚಿವ

|
Google Oneindia Kannada News

ಬೆಂಗಳೂರು, ಆಗಸ್ಟ್, 02: ಸಚಿವ ಸ್ಥಾನ ದಕ್ಕಿದ ಬಳಿಕ ರಾಜ್ಯ ಅಬಕಾರಿ ಸಚಿವ ಎಚ್ ವೈ ಮೇಟಿ ಮಾತನಾಡಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹುಲ್ಲಪ್ಪ ಯಮನಪ್ಪ ಮೇಟಿ(68) ಅಬಕಾರಿ ಇಲಾಖೆ 'ಮದ್ಯರಾತ್ರಿ'ಯನ್ನು ಬೆಂಗಳೂರಿನಲ್ಲಿ ಒಂದು ಗಂಟೆವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಕುಡುಕರ ಪರವಾಗಿ ಮಂಗಳವಾರ ಮಾತನಾಡಿರುವ ಸಚಿವ ಮೇಟಿ, ಬೆಂಗಳೂರಿನ ಕುಡುಕರು ಸಭ್ಯರು. ಅವರು ಕುಡಿದು ಗಲಾಟೆ ಮಾಡುವುದಿಲ್ಲ ಎಂದು ವಾದ ಮುಂದಿಟ್ಟಿದ್ದಾರೆ.[ಈ ವಿಷಯದಲ್ಲಿ ಕರ್ನಾಟಕಕ್ಕಿಂತ ಬಿಹಾರವೇ ಉತ್ತಮ!]

Bengaluru boozers are polite says Excise minister HY Meti

ಬೆಂಗಳೂರಿನ ಕುಡುಕರು ಸುಶಿಕ್ಷಿತರಾಗಿದ್ದು, ಗಲಾಟೆ ಮಾಡಿ ಯಾರಿಗೂ ತೊಂದರೆ ಕೊಡುವುದಿಲ್ಲ. ಹಳ್ಳಿಯ ಕುಡುಕರು ಕುಡಿದು, ಹಾದಿ ಬೀದಿಯಲ್ಲಿ ಬೀಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆಯನ್ನು ಸಹ ನೀಡಿದ್ದಾರೆ.

ಅಬಕಾರಿ ಸಚಿವರು ಹೇಳಿದ್ದಿಷ್ಟು
* ರಾಜ್ಯದ ಇತರೆ ಜಿಲ್ಲೆಯಲ್ಲಿ ರಾತ್ರಿ ಒಂದು ಗಂಟೆವರೆಗೆ ಮದ್ಯದ ಅಂಗಡಿ ತೆರೆದಿರಲು ಅವಕಾಶ ಇಲ್ಲ.[ಬ್ಲಾಕ್ ಲೇಬೆಲ್, ರೇಣುಕಾಚಾರ್ಯ ಇನ್ ಟ್ರಬಲ್]

* ಹೊಸ ಬಾರ್ ಲೈಸನ್ಸ್ ನೀಡುವ ಹಾಗೂ ಪಾನ ನಿಷೇಧ ಜಾರಿ ಮಾಡುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ.

* ಮದ್ಯದ ಅಂಗಡಿಯಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಪರಿಹಾರ ಕ್ರಮ ತೆಗೆದುಕೊಳ್ಳಲಾಗುವುದು.[ತಾಜಾತಾಜಾ ಬೀರ್ ಗೆ ರೇಣುಕಾಚಾರ್ಯ ಚಿಯರ್ಸ್]

* ಎಲ್ಲ ಮದ್ಯದ ಅಂಗಡಿಯಲ್ಲಿ ದರ ಪಟ್ಟಿ ಕಡ್ಡಾಯಗೊಳಿಸಲಾಗುತ್ತಿದೆ. ಅದರಂತೆ ವ್ಯಾಪಾರ ವಹಿವಾಟು ನಡೆಯಬೇಕು ಎಂದು ಹೇಳಿದರು.

ಆದರೆ ಏನೇ ಹೇಳಿ ಬಿಜೆಪಿ ಸರ್ಕಾರದಲ್ಲಿ ಅಬಕಾರಿ ಮಂತ್ರಿಯಾಗಿದ್ದ ರೇಣುಕಾಚಾರ್ಯ ಅವರಷ್ಟು ಸುದ್ದಿಯನ್ನು ಮೇಟಿ ಮಾಡುತ್ತಿಲ್ಲ.

English summary
Bengaluru: The State Government will gave particular the instructions to all liquor shops and bars Karnataka Minister for Excise HY Meti said on Tuesday, Aug 2 at a press meet in Vidhana Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X