ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

75 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬರೆ ಎಳೆದ ಶಾಲಾ ಮಂಡಳಿ

By Vanitha
|
Google Oneindia Kannada News

ಪರೀಕ್ಷೆ ಎಂದರೆ ಕೇವಲ ಮೂರಕ್ಷರದ ಪದವಲ್ಲ. ಇದು ವರ್ಷ ವರ್ಷಗಳ ಕಥೆ. ಪರಿಶ್ರಮ, ಕನಸು, ಆತ್ಮವಿಶ್ವಾಸ, ಭವಿಷ್ಯದ ಪ್ರತಿಬಿಂಬ. ಮಕ್ಕಳ ಬಾಳಿಗೆ ಉತ್ತಮ ತಿರುವು ನೀಡುವ, ಪ್ರದೇಶ, ಜಿಲ್ಲೆ, ರಾಜ್ಯ, ದೇಶದ ದಾಖಲೆ ಪುಸ್ತಕದಲ್ಲಿ ಮುದ್ರೆ ಒತ್ತುವುದಕ್ಕೆ ಅವಕಾಶ ನೀಡುವ ಎಸ್ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳು ಇತ್ತೀಚಿನ ದಿನಗಳಲ್ಲಿ ಸರ್ಕಾರದ ಅವ್ಯವಸ್ಥೆಯ ಗೂಡಿನಲ್ಲಿ ನಲುಗುತ್ತಿದೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ, ಭರವಸೆ ಬದುಕನ್ನು ಕುಗ್ಗಿಸುತ್ತಿವೆ. ವಿದ್ಯಾರ್ಥಿಗಳ ಶ್ರಮಕ್ಕೆ ಕ್ಷಣಾರ್ಧದಲ್ಲಿ ಎಳ್ಳು. ನೀರು ಬಿಡುತ್ತಿವೆ.

ಯಾಕೆ ಈ ವಿಚಾರ ಎಂದು ನೀವು ಕೇಳಬಹುದು ಹೇಳ್ತಿನಿ ಮುಂದೆ ಓದಿ. ವಿದ್ಯಾಭ್ಯಾಸ ಬದುಕಿನ ಮೊದಲ, ನವ ಹೆಜ್ಜೆ ಎಸ್ಎಸ್ ಎಲ್ ಸಿ ಹಂತ. ಎಲ್ಲಾ ಪೂರ್ವ ತಯಾರಿ ಮಾಡಿಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋದರೆ ನಿಮ್ಮಲ್ಲಿ ಪ್ರವೇಶ ಪತ್ರ ಇಲ್ಲ, ನಿಮಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದರೆ ಆ ಪರಿಸ್ಥಿತಿಗೆ ಒಳಗಾದ ವಿದ್ಯಾರ್ಥಿಗಳ ಸ್ಥಿತಿ ಏನಾಗಬೇಡ ನೀವೇ ಯೋಚಿಸಿ.[ಪ್ರಶ್ನೆ ಪತ್ರಿಕೆ ಸೋರಿಕೆ, ಪಿಯು ವಿದ್ಯಾರ್ಥಿಗಳಲ್ಲಿ ಭುಗಿಲೆದ್ದ ಆಕ್ರೋಶ]

ಹೌದು ಬೆಂಗಳೂರಿನ ಥಣಿಸಂದ್ರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 30, ಕೊಪ್ಪಳದಲ್ಲಿ 27, ಹಾವೇರಿಯ ಸವಣೂರಿನಲ್ಲಿ 18 ವಿದ್ಯಾರ್ಥಿಗಳು ಸೇರಿಂದಂತೆ ಒಟ್ಟು 75 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದ ಸ್ಥಿತಿಗೆ ಒಳಗಾಗಿ ಕಣ್ಣೀರು ಗರೆಯುತ್ತಿದ್ದಾರೆ. ವಿದ್ಯಾಸಂಸ್ಥೆ ಮಾಡಿದ ಎಡವಟ್ಟಿಗೆ ಇವರು ತಮ್ಮ ಭವಿಷ್ಯದ ಬೆಲೆ ತೆತ್ತಿದ್ದಾರೆ. ವರ್ಷ ವರ್ಷಗಳ ಪರಿಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಭವಿಷ್ಯದ ಮೇಲೆ ಬರೆ ಎಳೆದ ಶಾಲೆ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿ ಪ್ರತಿಭಟನೆ ಕೈಗೊಂಡಿದ್ದರು. ಕೊನೆಗೂ ಇವರು ಪರೀಕ್ಷೆ ಬರೆಯಲೇ ಇಲ್ಲ.[ಏಪ್ರಿಲ್ 12ಕ್ಕೆ ಮರು ಪರೀಕ್ಷೆ, ಎಕ್ಸಾಂ ಬರೆಯಲ್ಲ: ವಿದ್ಯಾರ್ಥಿಗಳು]

Bengaluru: 75 students miss SSLC Exam due to School Management Goof-up

75 ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳ ನೋವು ಅಳಲು ಇಲ್ಲಿದೆ ನೋಡಿ

ಭವಿಷ್ಯದ ಕನಸು ಹೊತ್ತ ಸ್ವಾಮಿ ವಿವೇಕಾನಂದ ಶಾಲೆಯ ಮಕ್ಕಳು ಪರೀಕ್ಷಾ ಕೇಂದ್ರ ಬೆಳಿಗ್ಗೆ ಏಳು ಗಂಟೆಗೆ ತೆರಳಿದ್ದಾರೆ. ಆದರೆ ಪ್ರವೇಶ ಪತ್ರ ಇಲ್ಲದ ಕಾರಣ ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ನಿರಾಕರಿಸಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಪೋಷಕರು ವಿದ್ಯಾರ್ಥಿಗಳು ವಿಚಾರಿಸಿದಾಗ ಬೆಂಗಳೂರಿನ ಥಣಿಸಂದ್ರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಆಡಳಿತ ಮಂಡಳಿ ಸರ್ಕಾರದಿಂದ ಮಾನ್ಯತೆ ಪಡೆಯದ ಕಾರಣ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಶಾಲೆಯ ಮೂವತ್ತು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಿಲ್ಲ ಎಂಬ ವಿಷಯ ತಿಳಿದಿದೆ.

ಈ ವಿಷಯ ತಿಳಿದಾಕ್ಷಣ ಪೋಷಕರು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಶಾಲೆಯ ಮುಖ್ಯೋಪಾಧ್ಯಾಯರಿಗೆ ಮನವಿ ಮಾಡಿಕೊಂಡರೂ ಇವರ ಕೋರಿಕೆಗೆ ಯಾವುದೇ ಬೆಲೆ ಸಿಕ್ಕಿಲ್ಲ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ನೋವಿನ ಭಾರದಿಂದಲೇ ಪ್ರತಿಭಟನೆ ಕೈಗೊಂಡಿದ್ದಾರೆ.[ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ : 10 ಪ್ರಮುಖ ಬೆಳವಣಿಗೆಗಳು]

ವಿವೇಕಾನಂದ ಶಾಲೆಯ ಎಡವಟ್ಟು ಏನು?

ಸ್ವಾಮಿ ವಿವೇಕಾನಂದ ಶಾಲೆಯ ಕಾರ್ಯದರ್ಶಿ ನಾಗರಾಜ್ ಅವರಿಂದ ಹಣ ಪಡೆದ ಏಜೆಂಟ್ ವಿಜಯ ಕುಮಾರ್, ಇಲಾಖೆಗೆ ಯಾವುದೇ ದಾಖಲೆಗಳನ್ನು ನೀಡದೆ ಸುಳ್ಳು ಮಾನ್ಯತೆ ಪತ್ರ ನೀಡಿ ವಂಚಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಹೆಣ್ಣೂರು ಠಾಣೆ ಪೊಲೀಸರು ಕಾರ್ಯದರ್ಶಿ ಮತ್ತು ಏಜೆಂಟ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಆಡಳಿತ ಮಂಡಳಿ ಮಾಡಿದ್ದೇನು?

ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿಗಳು ಪ್ರವೇಶ ಶುಲ್ಕ ನೀಡಿರಲಿಲ್ಲ. ಹಾಗಾಗಿ ಪ್ರವೇಶ ಪತ್ರ ನೀಡಿರಲಿಲ್ಲ. ಅವರು ಮಾರ್ಚ್ ೨೯ಕ್ಕೆ ಶುಲ್ಕ ಪಾವತಿಸಿದ ಬಳಿಕ ಮಾರ್ಚ್ ೩೦ಕ್ಕೆ ಪ್ರವೇಶ ಪತ್ರ ನೀಡಿದ್ದಾರೆ. ಮಕ್ಕಳ ಬದುಕಿನೊಂದಿಗೆ ಆಟವಾಡಿದ್ದಾರೆ.[ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ, ಇಬ್ಬರು ಸಿಐಡಿ ವಶಕ್ಕೆ]

ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಸಾಧ್ಯವಿತ್ತು

ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಪರೀಕ್ಷಾ ಕೊಠಡಿಯ ನಿರ್ವಾಹಕರ ಒಪ್ಪಿಗೆಯ ಮೇರೆಗೆ ಈ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಹುದಿತ್ತು. ಆದರೆ ಕೊನೆಗೂ ಮುಂದಿನ ವರುಷವೇ ಪರೀಕ್ಷೆ ಬರೆಯಬೇಕಾಗಿದೆ.

English summary
Seventy-five students from Swami Vivekananda School (SVS) in Sarayipalya, Nagawara, missed their State Secondary Education Examination Board (SSLC) Exam on Wednesday, March 30 due to management failure to provide the hall tickets to the students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X