ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಶೋಧಿತ ತೊಗರಿ, ಶೇಂಗಾ ತಳಿಗಳ ವಿಶೇಷವೇನು?

|
Google Oneindia Kannada News

ಬೆಂಗಳೂರು, ನ. 19 : ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾದ ಮೂರು ದಿನದ 'ಕೃಷಿಮೇಳ' ದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಎರಡು ಸಂಶೋಧಿತ ತಳಿಗಳನ್ನು ಬುಧವಾರ ಲೋಕಾರ್ಪಣೆ ಮಾಡಿದರು. ಬಿಆರ್ ಜಿ-5 (ತೊಗರಿ) ಮತ್ತು ಕೆಸಿಜಿ-6(ಕಡಲೆಕಾಯಿ) ತಳಿಗಳನ್ನು ರಾಜ್ಯಪಾಲರು ಬಿಡುಗಡೆ ಮಾಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಿರಂತರ ಸಂಶೋಧನೆಯಲ್ಲಿ ತೊಡಗಿದ್ದು ಪ್ರತಿ ವರ್ಷ ಆಯೋಜಿಸುವ ಕೃಷಿ ಮೇಳದಲ್ಲಿ ಇಂಥ ವಿನೂತನ ತಳಿಗಳನ್ನು ರೈತರಿಗೆ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡುತ್ತಿದೆ. ಮಣ್ಣಿನ ಗುಣಕ್ಕೆ ಅನುಗುಣವಾಗಿ ಹೊಸ ತಳಿಗಳನ್ನು ಶಿಫಾರಸು ಮಾಡಲಾಗುತ್ತಿದ್ದು ರೈತರ ಭಾಗವಹಿಸುವಿಕೆ ಮುಖ್ಯ ಎಂದು ಕೃಷಿ ವಿವಿ ಕುಲಪತಿ ಡಾ. ಡಿ.ಪಿ.ಕುಮಾರ್ ಮಾಹಿತಿ ನೀಡಿದರು.[ಬೆಂಗಳೂರಿನಲ್ಲಿ 3 ದಿನಗಳ ಕೃಷಿಮೇಳಕ್ಕೆ ಚಾಲನೆ]

agri

ಆರ್ ಜಿ-5 (ತೊಗರಿ) ವಿಶೇಷವೇನು?
* ಹೆಕ್ಟೇರ್ ಗೆ 25 ಕ್ಷಿಂಟಾಲ್ ಇಳುವರಿ
* ಪ್ಯುಸೇರಿಯಂ ಸೊರಗು ರೋಗ ನಿರೋಧಕ
* ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಕ್ಕೆ ಉತ್ತಮ
* ಅವಧಿ: 170-175 ದಿನಗಳು

ಕೆಸಿಜಿ-6(ಕಡಲೆಕಾಯಿ) ಇಳುವರಿ ಎಷ್ಟು?
* ಹೆಕ್ಟೇರ್ ಗೆ 2026 ಕೆಜಿ (ಹಸಿ) 735 ಕೆಜಿ ಎಣ್ಣೆ
* ಎಲೆಚುಕ್ಕಿ ಮತ್ತು ತುಕ್ಕು ರೋಗ ನಿರೋಧಕ
* ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಕ್ಕೆ ಉತ್ತಮ
* ಅವಧಿ: 105-110 ದಿನಗಳು

English summary
Bengaluru: Three days Krashi Mela-2014 started at Bengaluru agriculture university campus on Wednesday. Karnataka governor Vajubhai Rudabhai Vala lighted 2 new breeds, which are giving good Yield and Disease-resistant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X