ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನ ಸಚಿವ ಡಿಕೆ ಶಿವಕುಮಾರ್ ವಿಚಾರಣೆ ನಂತರ ಮುಂದೇನು?

ಡಿಕೆ ಶಿವಕುಮಾರ್ ವಿರುದ್ಧದ ಆರೋಪ ಸಾಬೀತಾದರೆ ಮಂದೇನು? ಅವರು ಬೇನಾಮಿ ಆಸ್ತಿ ಮಾಡಿರುವುದು ಪತ್ತೆಯಾದರೆ, ಆ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ. 25ರಷ್ಟು ದಂಡ ಹಾಕಬಹುದು. ಬೇನಾಮಿ ಆಸ್ತಿಯ ಸಂಪೂರ್ಣ ಭಾಗವನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ

|
Google Oneindia Kannada News

ಬೆಂಗಳೂರು, ಆಗಸ್ಟ್ 8: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ವಿಚಾರಣೆ ಆಯ್ತು. ಸೋಮವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿರುವ ಕಚೇರಿಗೆ ಆಗಮಿಸಿದ್ದ ಅವರು, ಮೂರು ಗಂಟೆಗಳ ಕಾಲ ವಿಚಾರಣೆಗೊಳಪಟ್ಟಿದ್ದರು.

ಆನಂತರ, ಏನಾಯಿತು? ಇದಕ್ಕೆ ಉತ್ತರ ಆದಾಯ ತೆರಿಗೆ ಇಲಾಖೆಯೇ ನೀಡಿದೆ. ಅಲ್ಲಿನ ಮೂಲಗಳ ಪ್ರಕಾರ, ಡಿ.ಕೆ. ಶಿವಕುಮಾರ್ ಅವರ ವಿಚಾರಣೆ ವೇಳೆ ಅವರು ಹಲವಾರು ಮಾಹಿತಿಗಳನ್ನು ಇಲಾಖೆಗೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿಲ್ಲ: ಸುರೇಶ್ ಕುಮಾರ್ಡಿಕೆ ಶಿವಕುಮಾರ್ ರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿಲ್ಲ: ಸುರೇಶ್ ಕುಮಾರ್

ಆದರೆ, ಅವರ ಆಸ್ತಿ ಮೌಲ್ಯ ಮಾಪನದ ಸಂದರ್ಭದಲ್ಲಿ ಬೇನಾಮಿ ಆಸ್ತಿ ವಹಿವಾಟು ನಡೆಸಿರುವ ಗುಮಾನಿ ಇಲಾಖೆಗೆ ಇದೆ. ಈ ಬಗ್ಗೆ ಹೆಚ್ಚಿನ ಗಮನ ಕೊಡಲಾಗಿದೆ.

ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ: ಮುಂದಿರುವ ದಾರಿಯೇನು?ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ: ಮುಂದಿರುವ ದಾರಿಯೇನು?

ಇದಿನ್ನೂ ಖಚಿತವಾಗಿಲ್ಲ. ಇದು ಖಚಿತವಾದರೆ, ಅವರ ವಿರುದ್ಧ ಬೇನಾಮಿ ವಹಿವಾಟು ನಿಷೇಧ ಕಾಯ್ದೆ ಅನ್ವಯವಾಗುತ್ತದೆ. ಆಗ, ಡಿಕೆ ಶಿವಕುಮಾರ್ ಅವರು ಮತ್ತಷ್ಟು ಕಾನೂನಾತ್ಮಕ ಸಮಸ್ಯೆಗಳಿಗೆ ಒಳಗಾಗುವ ಸಂಭವವಿರುತ್ತದೆ ಎಂದು ಹೇಳಲಾಗಿದೆ.

 ದಂಡ, ಜಪ್ತಿಗೂ ಅವಕಾಶ

ದಂಡ, ಜಪ್ತಿಗೂ ಅವಕಾಶ

ಈ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ತಪ್ಪು ಸಾಬೀತಾದರೆ, ಅವರು ಗಳಿಸಿರುವ ಒಟ್ಟಾರೆ ಬೇನಾಮಿ ಆಸ್ತಿಯ ಮಾರುಕಟ್ಟೆ ಮೌಲ್ಯದ ಮೇಲೆ ಶೇ. 25ರಷ್ಟು ದಂಡ ವಿಧಿಸಬಹುದಾಗಿದೆ. ಅಲ್ಲದೆ, ಅಗತ್ಯ ಬಿದ್ದರೆ, ಆದಾಯ ತೆರಿಗೆ ಇಲಾಖೆಯು ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಲೂಬಹುದು.

 ಆಸ್ತಿ ಘೋಷಣೆ ಮುಖ್ಯ

ಆಸ್ತಿ ಘೋಷಣೆ ಮುಖ್ಯ

ಆಸ್ತಿ ತೆರಿಗೆ ಮೌಲ್ಯ ಮಾಪನಕ್ಕೆ ಒಳಪಡುವ ವ್ಯಕ್ತಿ ಅಥವಾ ಸಂಸ್ಥೆಗಳು ತಮ್ಮ ಆಸ್ತಿ ಪಾಸ್ತಿ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಘೋಷಿಸಿಕೊಳ್ಳಬೇಕು. ಇದರ ಜತೆಗೆ ತೆರಿಗೆ ಪಾವತಿಸಬೇಕು. ಇದನ್ನು ಪಾಲಿಸದಿದ್ದರೆ ತೊಂದರೆಯಾಗುತ್ತದೆ.

 ಆಸ್ತಿ ಘೋಷಣೆ ಜತೆಗೆ, ತೆರಿಗೆಯನ್ನೂ ಕಟ್ಟಬೇಕು

ಆಸ್ತಿ ಘೋಷಣೆ ಜತೆಗೆ, ತೆರಿಗೆಯನ್ನೂ ಕಟ್ಟಬೇಕು

ಶೋಧದ ವೇಳೆ ಇಂಥ ಬೇನಾಮಿ ಆಸ್ತಿಪಾಸ್ತಿ ಇರುವುದು ಕಂಡುಬಂದರೆ ಅಂಥ ಆಸ್ತಿಯನ್ನು ಹೊಂದಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಂಥ ಆಸ್ತಿಯ ಮೂಲದ ಬಗ್ಗೆ ಆರೋಪಿತರು ದಾಖಲೆಗಳನ್ನು ನೀಡಬೇಕಾಗುತ್ತದೆ. ಇದು ಅವರಿಂದ ಸಾಧ್ಯವಾಗದಿದ್ದರೆ, ದಂಡ, ಮುಟ್ಟುಗೋಲಿನಂಥ ಕ್ರಮಗಳನ್ನು ಎದುರಿಸಬೇಕಾಗುತ್ತದೆ.

 2016ರಲ್ಲಿ ಕಾಯ್ದೆಗೆ ತಿದ್ದುಪಡಿ

2016ರಲ್ಲಿ ಕಾಯ್ದೆಗೆ ತಿದ್ದುಪಡಿ

1988ರಿಂದ ಇದ್ದ ಕಾಯ್ದೆಗೆ ಕೇಂದ್ರ ಸರ್ಕಾರ 2016ರಲ್ಲಿ ತಿದ್ದುಪಡಿ ತಂದಿದೆ. ಅದರ ಅನ್ವಯ ಬೇನಾಮಿ ಆಸ್ತಿ ಜಪ್ತಿ ಮಾಡುವ ಅಧಿಕಾರ ಇಲಾಖೆಗೆ ಇದೆ ಎಂದೂ ಮೂಲಗಳು ತಿಳಿಸಿವೆ. ಐ.ಟಿ ಇಲಾಖೆಯ ಬೆಂಗಳೂರು ಕಚೇರಿಯಲ್ಲಿ ಪ್ರತ್ಯೇಕ ವಿಭಾಗವನ್ನೂ ತೆರೆಯಲಾಗಿದೆ.

English summary
If, Karnataka Power Minister DK Shivakumar found guilty in Benami asset allegations against him, the Income tax department may impose hefty fine on him and even the department may seize his asset, says the sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X