ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಸವನ ಗೌಡ ಬಾದರ್ಲಿ

ಭರ್ಜರಿ 9ಸಾವಿರ ಮತಗಳ ಅಂತರದಲ್ಲಿ ಬಸವನಗೌಡ ಬಾದರ್ಲಿ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೆಂಪರಾಜ್, ಅಮೃತ್, ರಾಜೇಂದ್ರ ಹಾಗೂ ಸಾಮಿಯಾ ತಬ್ರೇಜ್ ಆಯ್ಕೆಯಾಗಿದ್ದಾರೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 21: ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಸಹೋದರನ ಪುತ್ರ ಬಸವನಗೌಡ ಬಾದರ್ಲಿ ಆಯ್ಕೆಯಾಗಿದ್ದಾರೆ.

ರಾಜ್ಯಾದ್ಯಂತ ಕಳೆದ ವಾರ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿತ್ತು. ಇನ್ನು ಅಧ್ಯಕ್ಷ ಸ್ಥಾನ ಸೇರಿದಂತೆ ರಾಜ್ಯ ಪದಾಧಿಕಾರಿಗಳ ಆಯ್ಕೆಗೆ ಶನಿವಾರ ನಗರದ ಅರಮನೆ ಮೈದಾನದಲ್ಲಿ ಮತದಾನ ನಡೆದಿತ್ತು.[ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷಗಿರಿ ಮುಕುಟ ಯಾರಿಗೆ?]

Basavanagouda Badarli elected as a new president for Karnataka Youth Congress.

ಇದರಲ್ಲಿ ಭರ್ಜರಿ 9ಸಾವಿರ ಮತಗಳ ಅಂತರದಲ್ಲಿ ಬಸವನಗೌಡ ಬಾದರ್ಲಿ ಜಯ ಸಾಧಿಸಿದ್ದಾರೆ. ಈ ಮೂಲಕ ಆಡಳಿತರೂಢ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಬಾದರ್ಲಿ ಪಾಲಾಗಿದೆ.

ಇನ್ನು ಉಪಾಧ್ಯಕ್ಷರಾಗಿ ಕೆಂಪರಾಜ್, ಅಮೃತ್, ರಾಜೇಂದ್ರ ಹಾಗೂ ಮಹಿಳಾ ವಿಭಾಗದ ಮೀಸಲಾತಿಯಲ್ಲಿ ಸಾಮಿಯಾ ತಬ್ರೇಜ್ ಆಯ್ಕೆಯಾಗಿದ್ದಾರೆ.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷಗಿರಿಗೆ ತೀವ್ರ ಪೈಪೋಟಿ ನಡೆದಿತ್ತು. ಒಟ್ಟು 8 ಜನ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅಮೃತಾಗೌಡ, ಬಸವನಗೌಡ ಬಾದರ್ಲಿ, ಉಮೇಶ್ ಬೋರೇಗೌಡ, ಬೈರೇಗೌಡ, ರಾಜೇಂದ್ರ, ಶಿವಕುಮಾರ್, ಕೆಂಪರಾಜ್, ಪುಷ್ಪಲತಾ, ಸಾಮಿಯ ತಬರೇಜ್ ಕಣದಲ್ಲಿದ್ದರು. ಇವರಲ್ಲಿ ಶಾಸಕ ಕೆ.ಎಸ್ ರಾಜಣ್ಣ ಪುತ್ರ ಆರ್. ರಾಜೇಂದ್ರ ಹಾಗೂ ಬಸವನಗೌಡ ಬಾದರ್ಲಿ ಮಧ್ಯೆ ರಾಜ್ಯಾಧ್ಯಕ್ಷ ಹುದ್ದೆಗೆ ಪೈಪೋಟಿ ನಡೆದಿತ್ತು. ಇದೀಗ ಬಸವನಗೌಡ ಬಾದರ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

{promotion-urls}

English summary
Sindhanur MLA Hampanagouda Badarli’s relative Basavanagouda Badarli elected as a new president for Karnataka Youth Congress. Election for the new office-bearers for the youth wing of the party was held on Saturadya, May 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X