ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಂದ್: ಸಾರ್ವಜನಿಕರಿಗೆ ಗೈಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಏ.17: ಮೇಕೆದಾಟು ಬಳಿ ಕರ್ನಾಟಕ ಸರ್ಕಾರ ನಿರ್ಮಿಸಲು ಹೊರಟಿರುವ ಅಣೆಕಟ್ಟು ವಿವಾದಕ್ಕೆ ಕಾರಣವಾಗಿದೆ. ಕಾವೇರಿಕೊಳ್ಳದಲ್ಲಿ ಕಾಮಗಾರಿ ಕೈಗೊಂಡು ಕರ್ನಾಟಕ ಕಾವೇರಿ ಐ ತೀರ್ಪನ್ನು ಉಲ್ಲಂಘಿಸುತ್ತಿದೆ ಎಂದು ತಮಿಳುನಾಡು ದೂರಿದೆ. ತಮಿಳುನಾಡಿನ ನಿಲುವು ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಏ.18ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

'ಕರ್ನಾಟಕ ಬಂದ್‌'ಗೆ ಕರ್ನಾಟಕದ ಎಲ್ಲ ವಲಯಗಳಿಂದ, ಎಲ್ಲ ಸಂಸ್ಥೆಗಳಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಶನಿವಾರ ಕರ್ನಾಟಕ ಬಂದ್ ಸಂಪೂರ್ಣ ಯಶಸ್ವಿಯಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ ಎಂದು ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ. [ಕರ್ನಾಟಕ ಬಂದ್ : 500 ಸಂಘಟನೆಗಳ ಬೆಂಬಲ]

ಶನಿವಾರ (ಏ.18) ಬಂದ್ ದಿನ ಬಸ್ ಸಂಚಾರ, ಆಟೋರಿಕ್ಷಾ, ಕ್ಯಾಬ್ ಸೇವೆ ಇರುತ್ತದೆಯೇ? ಸರ್ಕಾರಿ ನೌಕರರು ಬೆಂಬಲ ಸೂಚಿಸಿದ್ದಾರೆಯೇ? ಖಾಸಗಿ ವಲಯದ ಅಭಿಪ್ರಾಯ ಹೇಗಿದೆ? ಸಾರ್ವಜನಿಕರಿಗೆ ಮಾರ್ಗದರ್ಶಿ ಇಲ್ಲಿದೆ.

ಬಸ್ ಸಂಚಾರ ವ್ಯತ್ಯಯ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ನೌಕರರ ಸಂಘದಿಂದ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಿಎಂಟಿಸಿ ಹಾಗೂ ಕೆಎಸ್ಸಾರ್ಟಿಸಿ ಬಸ್ ಸಂಚಾರ ವ್ಯತ್ಯಯಗೊಳ್ಳಲಿದೆ. [ಬನ್ನಿ ಮೇಕೆದಾಟು, ಸಂಗಮ ಸುತ್ತಿ ಬರೋಣ]

ಮೆಟ್ರೋ ಸಂಚಾರ ಬಂದ್:
ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಮಾತನಾಡಿ, ಪೊಲೀಸರ ನಿರ್ದೇಶನದಂತೆ ರೈಲು ಸಂಚಾರ ಸ್ಥಗಿತಗೊಳಿಸಲಾಗುವುದು. ಬಹುತೇಕ ರೈಲು ಸಂಚಾರ ನಿಲ್ಲಿಸಲಾಗುವುದು. [ಮೇಕೆದಾಟು ಯೋಜನೆ ಏನು, ವಿವಾದ ಏಕೆ?]

ಸಿನಿಮಾ ರಂಗ, ಚಿತ್ರ ಪ್ರದರ್ಶನ ಬಂದ್

ಸಿನಿಮಾ ರಂಗ, ಚಿತ್ರ ಪ್ರದರ್ಶನ ಬಂದ್

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಂದ್‌ಗೆ ಬೆಂಬಲ ನೀಡಿದ್ದು, ಶನಿವಾರ ಚಿತ್ರೀಕರಣ, ಚಿತ್ರ ಪ್ರದರ್ಶನ ಸ್ಥಗಿತಗೊಳ್ಳಲಿದೆ. ಮಲ್ಟಿಪ್ಲೆಕ್ಸ್ ಸ್ಕ್ರೀನ್ ಗಳು ಕೂಡಾ ಬಂದ್ ಆಗಲಿವೆ.

ಕೆಎಫ್ ಸಿಸಿ ಕರೆಗೆ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ನೆನಪಿರಲಿ ಪ್ರೇಮ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಿನಿಮಾ ರಂಗ ಬಂದ್

ಸಿನಿಮಾ ರಂಗ ಬಂದ್

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಂದ್‌ಗೆ ಬೆಂಬಲ ನೀಡಿದ್ದು, ಶನಿವಾರ ಚಿತ್ರೀಕರಣ, ಚಿತ್ರ ಪ್ರದರ್ಶನ ಸ್ಥಗಿತಗೊಳ್ಳಲಿದೆ. ಮಲ್ಟಿಪ್ಲೆಕ್ಸ್ ಸ್ಕ್ರೀನ್ ಗಳು ಕೂಡಾ ಬಂದ್ ಆಗಲಿವೆ.

ಶಾಪಿಂಗ್ ಮಾಲ್, ಮೆಟ್ರೋ ಇತ್ಯಾದಿ

ಶಾಪಿಂಗ್ ಮಾಲ್, ಮೆಟ್ರೋ ಇತ್ಯಾದಿ

ಸೂಪರ್ ಬಜಾರ್, ಶಾಪಿಂಗ್ ಮಾಲ್, ಮಲ್ಟಿಪೆಕ್ಸ್ ಗಳು ಸಂಜೆ 6ರತನಕ ಬಂದ್ ಮಾಡುವ ಎಲ್ಲಾ ಲಕ್ಷಣಗಳಿವೆ. ಸಂಜೆ ನಂತರ ಎಂದಿನಂತೆ ವಹಿವಾಟು ನಡೆಯಲಿದೆ.

ಅಡುಗೆ ಅನಿಲ ಸರಬರಾಜು

ಅಡುಗೆ ಅನಿಲ ಸರಬರಾಜು

ಶನಿವಾರ ಇಡೀ ದಿನ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಇರುವುದಿಲ್ಲ. ಸಿಲಿಂಡರ್ ಮನೆಗೆ ಬರದಿದ್ದರೆ ಏಜೆಂಟರನ್ನು ದೂರಬೇಡಿ.

ಪೆಟ್ರೋಲ್ ಬಂಕ್

ಪೆಟ್ರೋಲ್ ಬಂಕ್

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಪೆಟ್ರೋಲ್ ಕೂಡ ಬಂಕ್‌ಗಳಲ್ಲಿ ಲಭ್ಯವಾಗದು. ಮೊದಲೇ ಪೆಟ್ರೋಲ್ ಟ್ಯಾಂಕ್ ತುಂಬಿಟ್ಟುಕೊಂಡರೆ ಒಳಿತು. ಅಥವಾ ಸಂಜೆ 6ರವರೆಗೆ ಕಾಯಬೇಕು. ಪೆಟ್ರೋಲ್ ಹಾಕುವ ಹುಡುಗ/ಗಿಯರು ಮುಷ್ಕರ ಹೂಡಿದ್ದಾರೆ.

ಬ್ಯಾಂಕ್ ವಹಿವಾಟು

ಬ್ಯಾಂಕ್ ವಹಿವಾಟು

ಶನಿವಾರ ಬ್ಯಾಂಕ್‌ಗಳು ತೆರೆಯುತ್ತವಾ ಗೊತ್ತಿಲ್ಲ. ಈ ಕುರಿತಂತೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ಕೆಲ ಬ್ಯಾಂಕುಗಳು ಅರ್ಧ ದಿನ ಅರ್ಧ ಬಾಗಿಲು ತೆರೆದು ಅಗತ್ಯ ಸೇವೆ ಒದಗಿಸುವ ಭರವಸೆ ನೀಡಿವೆ.

ಆಸ್ಪತ್ರೆ ಹಾಗೂ ಅಗತ್ಯಸೇವೆ

ಆಸ್ಪತ್ರೆ ಹಾಗೂ ಅಗತ್ಯಸೇವೆ

ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಡೆಯಲಿರುವ ಬಂದ್‌ನಿಂದ ಆಂಬ್ಯುಲೆನ್ಸ್ ಮತ್ತು ಅಗ್ನಿ ಶಾಮಕ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಆಟೋರಿಕ್ಷಾ, ಕ್ಯಾಬ್

ಆಟೋರಿಕ್ಷಾ, ಕ್ಯಾಬ್

ಆಟೋರಿಕ್ಷಾ ಯೂನಿಯನ್, ಟ್ರಕ್ ಚಾಲಕರು, ಪ್ರವಾಸಿ ಟ್ಯಾಕ್ಸಿ ಮಾಲೀಕರ ಸಂಘ ಬಂದ್ ಗೆ ಬೆಂಬಲ ನೀಡಿವೆ. ಆನ್ ಲೈನ್ ಟ್ಯಾಕ್ಸಿ ಸೇವೆ ಒದಗಿಸುವ ಟ್ಯಾಕ್ಸಿ ಫಾರ್ ಶ್ಯೂರ್, ಓಲಾ, ಉಬರ್ ಮಾತ್ರ ಪರಿಸ್ಥಿತಿ ನೋಡಿಕೊಂಡು ಟ್ಯಾಕ್ಸಿ ರಸ್ತೆಗಿಳಿಸುವುದಾಗಿ ಹೇಳಿದ್ದಾರೆ.

ಐಟಿ ಬಿಟಿ ಕಂಪನಿಗಳು

ಐಟಿ ಬಿಟಿ ಕಂಪನಿಗಳು

ಬಹುತೇಕ ಕಂಪನಿಗಳಿಗೆ ಶನಿವಾರ ರಜೆ ದಿನವಾಗಿದೆ. ಹೀಗಾಗಿ ಹೆಚ್ಚಿನ ಸಮಸ್ಯೆ ಇಲ್ಲ. ಶನಿವಾರ ಕೆಲಸ ಇದ್ದವರು ವರ್ಕ್ ಫ್ರಂ ಹೋಮ್ ಸೌಲಭ್ಯ ಬಳಸಿಕೊಳ್ಳಬಹುದು. ಇಲ್ಲವೇ ರಜೆ ತೆಗೆದುಕೊಂಡು ಭಾನುವಾರ ಕೆಲಸಕ್ಕೆ ಬರಬಹುದು ಎಂದು ಕಂಪನಿಗಳು ಹೇಳಿವೆ.

ಕೋರ್ಟ್ ಕಚೇರಿ

ಕೋರ್ಟ್ ಕಚೇರಿ

ಶನಿವಾರ ಯಾವುದೇ ಕೋರ್ಟ್ ಕಲಾಪಗಳು ಇರುವುದಿಲ್ಲ. ಕೋರ್ಟ್ ಹತ್ತಿರ ಹೆಜ್ಜೆ ಹಾಕಲೇಬೇಡಿ ಎಂಬುದು ಕಕ್ಷಿದಾರರಿಗೆ ನೀಡಲಾಗಿರುವ ಸಂದೇಶ.

English summary
Karnataka Bandh called by various Kannada outfit is is likely to hit normal life in Bangalore and across Karnataka. BMTC and KSRTC officials informed that there will be less number of buses on Saturday, April 18. Here is the guide for the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X