ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿ ನೀರಿಗೂ ಗುದ್ದಾಡುತ್ತಿರುವ ಜಮಖಂಡಿ ಕೂಲಿ ಕಾರ್ಮಿಕರು

By ರವೀಂದ್ರ ಭಟ್
|
Google Oneindia Kannada News

ಬಾಗಲಕೋಟೆ, ಜನವರಿ 18 : ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಆರ್‌ಸಿ ಕೇಂದ್ರದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಇಲ್ಲಿ ಮೂರು ಬೋರ್‌ ವೆಲ್, ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಕುಡಿಯಲು ಯೋಗ್ಯವಾದ ನೀರು ಸಿಗುತ್ತಿಲ್ಲ. ಉಪ್ಪು ಮಿಶ್ರಿತವಾಗಿರುವ ನೀರು ಬಟ್ಟೆ ತೊಳೆಯಲು ಯೋಗ್ಯವಾಗಿಲ್ಲ.

ಆರ್‌ಸಿ ಕೇಂದ್ರದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಪ್ರತಿದಿನ ಮುಂಜಾನೆ ಕುಡಿಯುವ ನೀರಿಗಾಗಿ ಕುಟುಂಬ ಸಮೇತರಾಗಿ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಜಾನುವಾರುಗಳದ್ದು ಇದೇ ಪರಿಸ್ಥಿತಿಯಾಗಿದ್ದು, ಅವುಗಳು ಕಷ್ಟವನ್ನು ಕೇಳುವವರು ಯಾರೂ ಇಲ್ಲ. [ಬಾಗಲಕೋಟೆ : ಬೆಂಕಿ ಉಗುಳುತ್ತಿದೆ ಕೊಳವೆ ಬಾವಿ!]

ಇಲ್ಲಿನ ಜನರು ಪ್ರತಿವರ್ಷದ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವುದು ಸಾಮಾನ್ಯವಾಗಿದೆ. ಇಲ್ಲಿನ ನಿವಾಸಿಗಳಿಗೆ ಕೃಷ್ಣಾ ನದಿಯಿಂದ ಪೈಪ್‍ಲೈನ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಈಗ ಅಲ್ಲಿನ ನೀರು ಸಂಪೂರ್ಣ ಖಾಲಿಯಾಗಿದ್ದು ಅಳಿದುಳಿದಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. [ಕುಡಚಿ-ಬಾಗಲಕೋಟೆ ರೈಲು ಮಾರ್ಗ 2019ಕ್ಕೆ ಪೂರ್ಣ]

ಮೈಗೂರ ಆರ್‌ಸಿ ಕೇಂದ್ರ ಸೇರಿದಂತೆ ಒಟ್ಟು 5 ಕೇಂದ್ರಗಳಿಗೆ ಜಮಖಂಡಿ ನಗರಕ್ಕೆ ಪೂರೈಕೆಯಾಗುವ ಹಿಪ್ಪರಗಿ ಜಲಾಶಯ ಬಳಿಯ ಪಂಪ್‍ಹೌಸ್‍ನಿಂದ ಶುದ್ಧೀಕರಿಸಿದ ನೀರು ಪೂರೈಕೆ ಮಾಡುವ ಯೋಜನೆ ರೂಪಿಸಲಾಗಿದೆ. ಆದರೆ, ಈ ಯೋಜನೆ ಇನ್ನೂ ಕಾಗದದಲ್ಲೇ ಇದ್ದು, ಜನರನ್ನು ತಲುಪಿಲ್ಲ.

ಟ್ಯಾಂಕರ್ ನೀರು ಜನರಿಗೆ ಸಿಗುತ್ತಿಲ್ಲ

ಟ್ಯಾಂಕರ್ ನೀರು ಜನರಿಗೆ ಸಿಗುತ್ತಿಲ್ಲ

ಆರ್‌ಸಿ ಕೇಂದ್ರಕ್ಕೆ ಪ್ರತಿನಿತ್ಯ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಇಲಾಖೆಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಅದು ಜನರಿಗೆ ಲಭ್ಯವಾಗುತ್ತಿಲ್ಲ. ಮೈಗೂರ ಆರ್‌ಸಿ ಕೇಂದ್ರದಲ್ಲಿನ ಹೈಸ್ಕೂಲ್ ನಲ್ಲಿ ನೀರು ಹಾಕುವುದರಿಂದ ನೀರಿನ ಟ್ಯಾಂಕ್ ಅರ್ಧ ಖಾಲಿಯಾಗುತ್ತಿದೆ. ಇನ್ನೂಳಿದ ನೀರು ಅಲ್ಲಿನ ಜನರಿಗೆ ಸಾಲುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಟ್ಯಾಂಕರ್ ನೀರು ಕೆಲವೇ ನಿಮಿಷದಲ್ಲಿ ಖಾಲಿ

ಟ್ಯಾಂಕರ್ ನೀರು ಕೆಲವೇ ನಿಮಿಷದಲ್ಲಿ ಖಾಲಿ

ಕುಡಿಯುವ ನೀರಿನ ಟ್ಯಾಂಕರ್ ಬರುತ್ತಿದ್ದಂತೆ ವಾಹನದ ಮೇಲೆರುವ ಜನರು ಪೈಪುಗಳನ್ನು ಬಳಸಿ 2 ಸಾವಿರ ಲೀಟರ್ ಟ್ಯಾಂಕರ್‌ಅನ್ನು ಕೆಲವೇ ನಿಮಿಷಗಳಲ್ಲಿ ಖಾಲಿ ಮಾಡುತ್ತಾರೆ. ಇಲ್ಲಿನ ನೀರಿನ ಸಮಸ್ಯೆ ಹೇಗಿದೆ? ಎಂಬುದಕ್ಕೆ ಇದೊಂದು ಉದಾಹರಣೆ.

ಶುದ್ಧ ಕುಡಿಯುವ ನೀರು ಪೂರೈಸಲು ಯೋಜನೆ

ಶುದ್ಧ ಕುಡಿಯುವ ನೀರು ಪೂರೈಸಲು ಯೋಜನೆ

ಮೈಗೂರ ಆರ್‌ಸಿ ಕೇಂದ್ರ ಸೇರಿದಂತೆ 5 ಕೇಂದ್ರಗಳಿಗೆ ಜಮಖಂಡಿ ನಗರಕ್ಕೆ ಪೂರೈಕೆಯಾಗುವ ಹಿಪ್ಪರಗಿ ಜಲಾಶಯ ಬಳಿಯ ಪಂಪ್‍ಹೌಸ್‍ನಿಂದ ಶುದ್ಧ ನೀರು ಒದಗಿಸುವ ಯೋಜನೆ ರೂಪಿಸಲಾಗಿದೆ. ಪಟ್ಟಣದಿಂದ ಆರ್‌ಸಿ ಕೇಂದ್ರಗಳಿಗೆ ಪೈಪ್‍ಲೈನ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಆದರೆ, ಸ್ಥಳೀಯ ನಗರಸಭೆ ಕೇಂದ್ರಗಳಿಗೆ ನೀರು ಪೂರೈಕೆ ಮಾಡಲು ವಿರೋಧ ವ್ಯಕ್ತಪಡಿಸುತ್ತಿದೆ. ಆದ್ದರಿಂದ, ನಿವಾಸಿಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ.

ಕುಡಿಯುವ ನೀರು ಕೊಡಿ ಸಾಕು

ಕುಡಿಯುವ ನೀರು ಕೊಡಿ ಸಾಕು

ಸುಮಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಕೇಂದ್ರಕ್ಕೆ ಸಕಲ ಸೌಲಭ್ಯ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಮೊದಲು ಕುಡಿಯುವ ನೀರು ಕೊಡಿ ಸಾಕು ಎಂದು ನಿವಾಸಿಗಳು ಮನವಿ ಮಾಡುತ್ತಿದ್ದಾರೆ.

ಟ್ಯಾಂಕರ್ ನೀರು ಸರಿಯಾಗಿ ಕೊಡುತ್ತಿಲ್ಲ

ಟ್ಯಾಂಕರ್ ನೀರು ಸರಿಯಾಗಿ ಕೊಡುತ್ತಿಲ್ಲ

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಯವರು ಆರ್‌ಸಿ ಕೇಂದ್ರಕ್ಕೆ ಸರಿಯಾಗಿ ನೀರಿನ ಪೂರೈಕೆ ಮಾಡುತ್ತಿಲ್ಲ. ಹಿರಿಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ. ಆದರೆ, ನೀರು ಲಭ್ಯವಾಗುತ್ತಿಲ್ಲ ಎಂದು ಯುವಕರು ಆರೋಪಿಸುತ್ತಿದ್ದಾರೆ.

English summary
More than 1000 people living in R.C.Kendra colony in Jamkhandi taluk, Bagalkote Dist facing drinking water crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X