ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಸ್ಮಿಕ: ಬಾದಾಮಿಯ ಯುವ ಯೋಧ ಸಾವು

By Srinath
|
Google Oneindia Kannada News

Bagalakot- Badami soldier Salim Walikar died in Nagpur
ಬಾಗಲಕೋಟೆ, ನ.28: ತೀರಾ ಆಕಸ್ಮಿಕ ಘಟನೆಯೊಂದರಲ್ಲಿ ಬಾದಾಮಿ ತಾಲೂಕು ಖಾಜಿ ಬೂದಿಹಾಳ ಗ್ರಾಮದ ಯುವ ಸೈನಿಕರೊಬ್ಬರು ಸಾವಿಗೀಡಾಗಿದ್ದಾರೆ. ಮೃತ ಯೋಧನನ್ನು ಸಲೀಂಸಾಬ ಫಕ್ರುಸಾಬ ವಾಲಿಕಾರ (28) ಎಂದು ಗುರುತಿಸಲಾಗಿದೆ.

ಮಹಾರಾಷ್ಟ್ರದ ನಾಗಪುರದಲ್ಲಿ ಗಡಿ ರೇಖೆ ಬಳಿ ಕ್ಷಿಪಣಿ ಪ್ರಾತ್ಯಕ್ಷಿಕೆ ವೇಳೆ ಟ್ಯಾಂಕರ್ ಬ್ಲಾಸ್ಟ್ ಆಗಿ ಈ ದುರಂತ ಸಂಭವಿಸಿದೆ. ನಾಗಪುರದ ಆರ್‌ಟಿ ರೆಜಿಮೆಂಟ್‌ನ ಕ್ಷಿಪಣಿ ವಿಭಾಗದಲ್ಲಿ ಲಾನ್ಸ್‌ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಸಲೀಂ, ಮಂಗಳವಾರ ಇತರ ಯೋಧರಿಗೆ ಪ್ರಾತ್ಯಕ್ಷಿಕೆ ನೀಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘ‌ಟನೆ ಸಂಭವಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

8 ವರ್ಷಗಳ ಹಿಂದೆ (2006) ಸೇನೆಗೆ ಸೇರಿದ್ದ ವಾಲಿಕಾರ, ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ನಾಗಪುರದಲ್ಲಿ ಪತ್ನಿ ಮಮ್ತಾಜ್ ಬೇಗಂ, ಪುತ್ರ ಹಾಗೂ ಪುತ್ರಿ ಜತೆ ನೆಲೆಸಿದ್ದರು. ಸಕಲ ಸರಕಾರಿ ಗೌರವದೊಂದಿಗೆ ಗುರುವಾರ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನಡೆಸಲು ಗ್ರಾಮದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬಡ ಕುಟುಂಬ: ಮೃತ ಯೋಧನಿಗೆ ಅಪ್ಪ-ಅಮ್ಮ, ಇಬ್ಬರು ಸೋದರರು ಹಾಗೂ ಸೋದರಿ ಇದ್ದು, ಯೋಧನ ಆದಾಯವೇ ಕುಟುಂಬಕ್ಕೆ ಆಧಾರವಾಗಿತ್ತು. ಕಳೆದ ರಂಜಾನ್ ಸಂದರ್ಭದಲ್ಲಿ ವಾಲಿಕಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಘಟನೆಯಿಂದ ಕುಟುಂಬದ ಅವಲಂಬಿತರು ಕಂಗಾಲಾಗಿದ್ದಾರೆ.

English summary
Bagalakot- Badami soldier Salim Walikar died in Nagpur. Salim Walikar, a soldier of the Indian Army and a native of Khaji Budhihal village in Badami taluk, was killed in a freak accident during weapons testing in Nagpur on Tuesday. His mortal remains will be laid to rest with full military honours at his hometown on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X