ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪತಗುಡ್ಡದಲ್ಲಿ ಆಯುರ್ವೇದಿಕ್ ಸಂಸ್ಕರಣಾ ಘಟಕ ಸ್ಥಾಪನೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಗದಗ, ಮಾರ್ಚ್, ೦6 : ಕಪ್ಪತ್ತಗುಡ್ಡದ 33 ಸಾವಿರ ಹೆಕ್ಟೇರ್ ಪೈಕಿ 17,872.24 ಹೆ. ಪ್ರದೇಶವನ್ನು ಸಂರಕ್ಷಿತ ಮೀಸಲು ಅರಣ್ಯ ಎಂದು ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಕೈಗಾರಿಕಾ ನಿಗಮವು ಆಯುರ್ವೇದಿಕ್ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದೆ ಎಂದು ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಟಿ.ಈಶ್ವರ ಹೇಳಿದ್ದಾರೆ.

ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧಿಕಾರಿಗಳ ಜತೆಗೆ ಡೋಣಿ, ಕಡಕೋಳ ಮಾರ್ಗದಲ್ಲಿರುವ ಕಪ್ಪತಗಿರಿಯ ಔಷಧೀಯ ಸಸ್ಯಗಳ ಕಲ್ಪವನ ಪರಿಶೀಲಿಸಿ ಮಾತನಾಡುತ್ತಿದ್ದರು. [ದೇಶದ 6 ಕಡೆ ಫಾರ್ಮಾಪಾರ್ಕ್ ಸ್ಥಾಪನೆ]

Ayurvedic Unit to come up in Kappatagudda wildlife sanctuary Gadag

ಸಂಸ್ಕರಣ ಘಟಕಕ್ಕೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. ಸುರೇಶ, ಕಾರ್ಯಕಾರಿ ನಿರ್ದೇಶಕ ಮಾರ್ಕಂಡೇಯ ಹಾಗೂ ನಿಗಮದ ಆರು ಜನ ಪ್ರಾದೇಶಿಕ ವ್ಯವಸ್ಥಾಪಕರುಗಳ ತಂಡವು ಇಂದು ಗಾಳಿ ಗುಡಿ , ನಂದಿವೇರಿಮಠದ ಸುತ್ತಲೂ, ಕಡಕೋಳ ವಲಯದ ಕಲ್ಪವನ ಔಷಧೀಯ ಸಸ್ಯಗಳ ಸ್ಥಾನ ಹಾಗೂ ಹಿರೇವಡ್ಡಟ್ಟಿ ವ್ಯಾಪ್ತಿಗಳಲ್ಲಿ ವಿವಿಧ ಸ್ಥಳಗಳನ್ನು ಪರಿಶೀಲಿಸಿದೆ.

ವಿಶ್ವದ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ: ಈ ತಂಡವು ವರದಿ ನೀಡಿದ ನಂತರ ಆಯುರ್ವೇದಿಕ ಹಣ್ಣು, ಗಿಡಮೂಲಿಕೆ ಉತ್ಪನ್ನಗಳನ್ನು ವಿಶ್ವದ ಮಾರುಕಟ್ಟೆಗೆ ಪರಿಚಯಿಸಲು ಸಂಸ್ಕರಣ ಘಟಕ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗುವುದು. ಈ ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ 270 ರಿಂದ 300 ರೀತಿಯ ವಿವಿಧ ಹಣ್ಣು, ಗಿಡಮೂಲಿಕೆಗಳು ಲಭ್ಯವಿದ್ದು ಇವುಗಳು ಮಾನವನ ಆರೋಗ್ಯವರ್ಧನೆಗೆ ಉಪಯುಕ್ತವಾಗಿವೆ. [ಅಡ್ಡ ಪರಿಣಾಮ ಬೀರದ ಆಯುರ್ವೇದ ಉತ್ಪನ್ನಗಳು]

Ayurvedic Unit to come up in Kappatagudda wildlife sanctuary Gadag

ಸ್ಥಳೀಯ ಜನರನ್ನು ತರಬೇತಿ ನೀಡಿ ಅವರಿಗೆ ಉದ್ಯೋಗ ಒದಗಿಸುವ ಅವಕಾಶ ಈ ಘಟಕದಲ್ಲಿದ್ದು ಸಂಬಂಧಿತ ಗ್ರಾಮ ಅರಣ್ಯ ಸಮಿತಿಗಳ ಸಮುದಾಯ ಹಾಗೂ ಸಮಾಜದ ಒಳಿತಿಗಾಗಿ ಈ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿರ್ಧರಿಸಿದೆ ಎಂದು ಅಧ್ಯಕ್ಷ ಟಿ. ಈಶ್ವರ ನುಡಿದರು. [ಪ್ರಮೇಹ ಮೋಕ್ಷಂ ಸೇವಿಸಿ ಮಧುಮೇಹದಿಂದ ಮುಕ್ತಿ]

ಗದಗ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾಮನಕಟ್ಟಿ , ಶಿರಹಟ್ಟಿ ವಲಯ ಅರಣ್ಯ ಅಧಿಕಾರಿ ವೀರೇಶ, ಡಿ.ಜಿ.ಎಂ. ಆಯುರ್ವೇದಿಕ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ವಿ. ಪಾಟೀಲ ಉಪಸ್ಥಿತರಿದ್ದರು.

Ayurvedic Unit to come up in Kappatagudda wildlife sanctuary Gadag

ಮುಂಡರಗಿಯಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ, ರಾಜ್ಯ ಜಲಸಂಪನ್ಮೂಲ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹಾಗೂ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಆಯುರ್ವೇದ ಘಟಕ ಸ್ಥಳ ಪರಿಶೀಲನಾ ತಂಡದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

English summary
The Karnataka government has declared Kappatagudda in Gadag district as a wildlife sanctuary and protected forest. Forest officials conducted a survey, inspection of the place for construction of proposed Ayurvedic unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X