ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುತ್ತೂರಿನಲ್ಲಿ ಜ್ಯೋತಿಷಿಗಳ ಎಕ್ಕಿಳಿಸಿದ ಸಿಎಂ ಸಿದ್ದರಾಮಯ್ಯ

ಸುತ್ತೂರಿನಲ್ಲಿ ಜ್ಯೋತಿಷಿಗಳ ವಿರುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ.

|
Google Oneindia Kannada News

ಮೈಸೂರು, ಜ 25: ಕಾರಿನಲ್ಲಿ ಕಾಗೆ ಕೂತಿತು, ಪಂಚೆ ಮೇಲೆ ಹಿಕ್ಕೆ ಹಾಕಿತು.. ಇದು ಅಪಶಕುನ ಎನ್ನುವ ಪೊಳ್ಳು ಮಾತಿನಿಂದ ಜ್ಯೋತಿಷಿಗಳು ಸಮಾಜದ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸುತ್ತೂರಿನಲ್ಲಿ ಮಂಗಳವಾರ (ಜ) ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಜನರ ನಂಬಿಕೆಗಳ ಮೇಲೆ ನನಗೆ ಆಕ್ಷೇಪವಿಲ್ಲ, ಆದರೆ ಮೂಢನಂಬಿಕೆ ಮತ್ತು ಮೌಢ್ಯವನ್ನು ವಿರೋಧಿಸುತ್ತೇನೆಂದು ಹೇಳಿದರು. (ವಿಧಾನಸೌಧದಲ್ಲಿ ಗೂಬೆ, ಸಿಎಂಗೆ ಅಪಶಕುನ)

astrologers misleading the people cm siddaramaiah in suttur
ಹಿಂದೂ ಧರ್ಮದಲ್ಲಿರುವ ನ್ಯೂನತೆಗಳನ್ನು ತಿದ್ದಲು ಪ್ರಯತ್ನಿಸಿದ ಸ್ವಾಮಿ ವಿವೇಕಾನಂದ ಅವರಂತಹ ಮಹಾನುಭಾವರನ್ನೇ ಟೀಕಿಸುತ್ತಿರುವುದು ನೋವಿನ ವಿಚಾರ. ಯಾರೇ ಆಗಲಿ, ಧರ್ಮದ ಹೆಸರಿನಲ್ಲಿ ಜನರ ದಾರಿ ತಪ್ಪಿಸಬಾರದು ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಅನಾರೋಗ್ಯಕ್ಕೆ ಒಳಗಾಗಿದ್ದ ಕಾಗೆಯೊಂದು ಕಾರಿನಲ್ಲಿ ಕೂತಿತ್ತು. ಅದನ್ನೇ ಹಿಡಿದುಕೊಂಡು ಟಿವಿ ವಾಹಿನಿಯಲ್ಲಿ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದೇ ನುಡಿದಿದ್ದು. ಸಿಎಂ ಪದವಿ ನನಗೆ ಹೋಗಲಿದೆ ಎಂದು ಎರಡು ವರ್ಷದ ಹಿಂದೆ ಭವಿಷ್ಯ ನುಡಿದರು.

ಜ್ಯೋತಿಷಿಗಳ ಭವಿಷ್ಯದಂತೆ ನಾನು ಮುಖ್ಯಮಂತ್ರಿ ಪದವಿ ಕಳೆದುಕೊಂಡೆನೇ? ಬಜೆಟ್ ಮಂಡಿಸಲಿಲ್ಲವೇ, ಸುತ್ತೂರು ಮಠದ ಜಾತ್ರೆಗೆ ಮುಖ್ಯಮಂತ್ರಿಯಾಗಿ ಬಂದಿಲ್ಲವೇ ಎಂದು ಸಿದ್ದರಾಮಯ್ಯ ವಂಗ್ಯವಾಡಿದರು.

ಅದೇ ರೀತಿ ಇನ್ನೊಂದು ಕಾರ್ಯಕ್ರಮಕ್ಕೆ ಹೋದಾಗ ಪಂಚೆ ಮೇಲೆ ಕಾಗೆ ಹಿಕ್ಕೆ ಹಾಕಿತು, ಅದನ್ನು ಹಿಡಿದುಕೊಂಡು ಜ್ಯೋತಿಷಿಗಳು ಭವಿಷ್ಯ ನುಡಿಯಲಾರಂಭಿಸಿದರು. ನನ್ನ ಗ್ರಹಗತಿ ಸರಿಯಿಲ್ಲ ಎಂದರು. ಜ್ಯೋತಿಷಿಗಳು ಮೊದಲು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲಿ ಎಂದು ಸಿದ್ದರಾಮಯ್ಯ ಖಾರವಾಗಿ ನುಡಿದರು. (ಮಾಹಿತಿ: ಪ್ರಜಾವಾಣಿ)

English summary
Astrologers are misleading the people, Chief Minister Siddaramaiah in Suttur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X