ಇಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಪಂಚೆಯನ್ನೇ ಉಡುವುದೇಕೆ?

Posted by:
Give your rating:

ಬೆಂಗಳೂರು, ಅ.18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದಾ ಪಂಚೆಯನ್ನೇ ಏಕೆ ಉಡುತ್ತಾರೆ ಏಕೆ ಗುತ್ತಾ? ಭಾರತೀಯ ವಿದ್ಯಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಬಗ್ಗೆ ಅವರನ್ನೇ ಕೇಳಿದಾಗ ಸ್ವಾರಸ್ಯಕರ ಸಂಗತಿಯೊಂದು ತಿಳಿದುಬಂದಿದೆ.

1995ರ ದಿನಗಳವು. ಸಿದ್ದರಾಮಯ್ಯನವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಯೊಂದು ಸಣ್ಣಗೆ ಕಾಣಿಸಿಕೊಂಡಿತ್ತು. ಅದಕ್ಕೆ ವೈದ್ಯರ ಬಳಿ ಹೇಳಿಕೊಂಡಾಗ ಅವರು ವಿಭಿನ್ನ ವೈದ್ಯೋಪಚಾರ ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಆಗ ಒಣ ಚರ್ಮದ ಸಮಸ್ಯೆ ಬಹಳವಾಗಿ ಕಾಡುತ್ತಿತ್ತಂತೆ. ಅದಕ್ಕೆ ವೈದ್ಯರು ಔಷಧ ನೀಡುವ ಬದಲು ಸಿದ್ದರಾಮಯ್ಯನವರಿಗೆ ಅವರು ಧರಿಸುವ ಉಡುಪನ್ನು ಬದಲಿಸುವಂತೆ ಸಲಹೆ ನೀಡಿದ್ದಾರೆ.

ಅದಕ್ಕೆ ಸಾಹೇಬರು ಸದಾ ಪಂಚೆ ಮತ್ತು ಅದರ ಮೇಲೊಂದು ಬಿಳಿ ಷರ್ಟು ಧರಿಸುತ್ತಾರೆ. ಪ್ಯಾಂಟು ಶರ್ಟು ಕೋಟು ಧರಿಸಬೇಕು ಅಂತ ನನಗೂ ಆಸೆ ಇದೆ. ಆದರೆ ಏನ್ಮಾಡೋಣ ಡಾಕ್ಟರು ಬೇಡ ಅಂದಿದ್ದಾರಲ್ಲಾ ಎಂದು ಪ್ರಶ್ನೆ ಕೇಳಿದ ವಿದ್ಯಾರ್ಥಿಗಳನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಅಂದಹಾಗೆ ಪಂಚೆ ಬಿಳಿ ಷರ್ಟು ಮತ್ತು ಹೆಗಲ ಮೇಲೆ ಟವಲ್ ಸಿದ್ದರಾಮಯ್ಯನವರ ವ್ಯಕ್ತಿತ್ವದ ಹೆಗ್ಗುರುತು ಆಗಿಯೂ ಮಾರ್ಪಟ್ಟಿದೆ!

ಆದರೆ ಮೊನ್ನೆ ಸೆಪ್ಟೆಂಬರಿನಲ್ಲಿ ಚೀನಾದಲ್ಲಿ ಧೋತಿ-ಕುರ್ತಾ ಧರಿಸಲು ಅಲ್ಲಿನ ಹವಾಮಾನ/ ಶಿಷ್ಟಾಚಾರ ಅವಕಾಶ ನೀಡಲಿಲ್ಲ. ಹಾಗಾಗಿ ಅಲ್ಲಿ ಪ್ಯಾಂಟು ಕೋಟು ಹಾಕಿಕೊಳ್ಳಬೇಕಾಯಿತು ಎಂದು ಸಿದ್ದರಾಮಯ್ಯ ಹೇಳಿದರು.

ಆದರೆ ಪಂಚೆ ಮತ್ತು ಬಿಳಿ ಷರ್ಟು ಉಡುಪು ಸಿದ್ದರಾಮಯ್ಯನವನ್ನು ಅನೇಕ ಬಾರಿ ಮುಜುಗರಕ್ಕೀಡು ಮಾಡುವುದೂ ಉಂಟು. ಕಳೆದ ಡಿಸೆಂಬರಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚೊಚ್ಚಲ ಅಧಿವೇಶನದಲ್ಲಿ ತುಂಬಿದ ಸದನದಲ್ಲಿ ಪಂಚೆ ಸಡಿಲಗೊಂಡು, ಜಾರಿತ್ತು. ತಡಬಡಾಯಿಸಿದ ಸಿದ್ದು, ಬೆಳಗಾವಿ ಮಂದಿ ಸ್ವಲ್ಪ ಜಾಸ್ತಿಯೇ ಊಟ ಹಾಕಿಸಿಬಿಟ್ಟರು. ಅದಕ್ಕೆ ಪಂಚೆ ಜಾರುತ್ತಿದೆ ಎಂದು ಹೇಳುತ್ತಾ ಸದನದಲ್ಲಿಯೇ ಸೊಂಟಕ್ಕೆ ಕೈಹಾಕಿ ಪಂಚೆಯನ್ನು ಬಿಗಿಯಾಗಿ ಕಟ್ಟಿಕೊಂಡರು.

ಇನ್ನು ಇತ್ತೀಚೆಗೆ ಮಂಡ್ಯದಲ್ಲಿ ತಮ್ಮ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಎದುರೇ, ಸಂಸದೆ ರಮ್ಯಾ ಅವರ ಪಕ್ಕದಲ್ಲೇ ನಿಂತಿದ್ದ ಸಿದ್ದರಾಮಯ್ಯನವರು ಯಾರು ಏನಾದರೂ ಅಂದಕೊಳ್ಳಲಿ ಬಿಡಿ ಎಂದು ವೇದಿಕೆಯಲ್ಲೇ ಪಂಚೆಯನ್ನು ಸರಿಪಡಿಸಿಕೊಂಡರು.

English summary
Ask Karnataka Chief Minister Siddaramaiah why he wear dhoti kurta always? The CM himself disclosed the secret at an interaction programme with students of Bharatiya Vidya Bhavan here on Thursday. Siddaramaiah said he started wearing dhoti and kurta before taking up politics in 1995 on the advice of a doctor. He suffered from a dry skin problem and the doctor recommended the attire.
Please Wait while comments are loading...
 
X

X
Skip Ad
Please wait for seconds

Bringing you the best live coverage @ Auto Expo 2016! Click here to get the latest updates from the show floor. And Don't forget to Bookmark the page — #2016AutoExpoLive