ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಹಗರಣ ವಿವಾದ : ಮೌನ ಮುರಿದ ಅರವಿಂದ್ ಜಾಧವ್!

|
Google Oneindia Kannada News

ಬೆಂಗಳೂರು, ಆಗಸ್ಟ್ 24 : ತಮ್ಮ ವಿರುದ್ಧ ಕೇಳಿಬಂದಿರುವ ಭೂ ಹಗರಣದ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಮೌನ ಮುರಿದಿದ್ದಾರೆ. ಭೂಮಿ ಖರೀದಿ ಕಾನೂನು ಪ್ರಕಾರವೇ ಆಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬುಧವಾರ ಬೆಳಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅರವಿಂದ್ ಜಾಧವ್ ಅವರು, '14 ವರ್ಷಗಳ ಹಿಂದೆ ತಮ್ಮ ತಾಯಿ ತಾರಾಬಾಯಿ ಅವರು ಜಮೀನು ಖರೀದಿ ಮಾಡಿದ್ದರು. ಆಗ ನಾನು ದೆಹಲಿಯಲ್ಲಿದ್ದೆ' ಎಂದು ಹೇಳಿದರು.[ಅರವಿಂದ ಜಾಧವ್ ಅವರ ವಿರುದ್ಧ ಭೂ ಹಗರಣ ಆರೋಪ?]

0Arvind Jadhav breaks silence on land issue

'ಕಾನೂನಿನ ಪ್ರಕಾರವೇ ಜಮೀನನ್ನು ಖರೀದಿ ಮಾಡಲಾಗಿದೆ. ಜಮೀನಿಗೆ ಸಂಬಂಧಿಸಿದಂತೆ ಪೋಡಿಯಾಗದ ಕಾರಣ ವಿವಾದ ಉಂಟಾಗಿದೆ. ಭೂಮಿ ಖರೀದಿ ವಿಚಾರದಲ್ಲಿ ನಾವು ನ್ಯಾಯಾಲಯಕ್ಕೂ ಹೋಗಲು ಸಿದ್ಧ' ಎಂದರು.[ಅರವಿಂದ್ ಜಾಧವ್ ವಿರುದ್ಧ ಎಸಿಬಿಗೆ ದೂರು]

ವರದಿ ಕೊಡುವೆ : 'ಈ ಭೂ ವಿವಾದದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಕೇಳಿದ್ದಾರೆ. ವರದಿಯನ್ನು ನೀಡುತ್ತೇನೆ. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ' ಎಂದು ಅರವಿಂದ್ ಜಾಧವ್ ಹೇಳಿದರು.[ಜಾಧವ್ ವಿವಾದ: ವರದಿ ಕೇಳಿದ ಸಿದ್ದರಾಮಯ್ಯ]

ಭೇಟಿಗೆ ಸೂಚಿಸಿದ ಸಚಿವರು : ಭೂ ಹಗರಣದ ಆರೋಪದ ಬಗ್ಗೆ ವಿವರವಾದ ವರದಿಯ ಜೊತೆ ಬಂದು ತಮ್ಮನ್ನು ಭೇಟಿಯಾಗಿ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಅರವಿಂದ್ ಜಾಧವ್ ಅವರಿಗೆ ಸೂಚನೆ ಕೊಟ್ಟಿದ್ದಾರೆ.

English summary
Karnataka Chief Secretary Arvind Jadhav breaks silence on land issue and said, land purchasing according to law. There is a no volition of law in this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X