ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5,266 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಎಸ್ಆರ್‌ಟಿಸಿ

|
Google Oneindia Kannada News

ಬೆಂಗಳೂರು, ಏ.2 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ವಿವಿಧ ವಿಭಾಗದಲ್ಲಿ ಖಾಲಿ ಇರುವ ಚಾಲಕ ಮತ್ತು ಚಾಲಕ ಕಂ ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 18, 2015.

ಬೆಂಗಳೂರು ಕೇಂದ್ರ 285, ರಾಮನಗರ 190, ತುಮಕೂರು 176, ಕೋಲಾರ 195, ಮೈಸೂರು ನಗರ 107, ಮೈಸೂರು ಗ್ರಾಮಾಂತರ 188, ಹಾಸನ 202, ಚಿಕ್ಕಮಗಳೂರು 172, ದಾವಣಗೆರೆ 397, ಮಂಡ್ಯ 163 ಮತ್ತು ಚಿಕ್ಕಬಳ್ಳಾಪುರ 211 ಹುದ್ದೆಗಳು ಸೇರಿ ಒಟ್ಟು 5,266 ಹುದ್ದೆಗಳು ಖಾಲಿ ಇವೆ.

KSRTC

ವಿದ್ಯಾರ್ಹತೆ : ಚಾಲಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. (ಮುಕ್ತ ವಿವಿ ನೀಡುವ 500 ಅಂಕಗಳ ಎಸ್ಎಸ್ಎಲ್‌ಸಿ ಪ್ರಮಾಣ ಪತ್ರ ಪರಿಗಣಿಸುವುದಿಲ್ಲ). [ಕನ್ನಡದಲ್ಲಿ ನೇಮಕಾತಿ ಆದೇಶ ಓದಿ]

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಎರಡು ವರ್ಷದ ಅವಧಿ ಪೂರ್ಣಗೊಂಡು ಚಾಲ್ತಿಯಲ್ಲಿರುವ ಸರಕು ಸಾಗಣೆ/ಪ್ರಯಾಣಿಕ ಭಾರಿ ವಾಹನ ಚಾಲನಾ ಪರವಾನಿಗೆ ಮತ್ತು ಕರ್ನಾಟಕ ಬ್ಯಾಡ್ಜ್‌ ಹೊಂದಿರಬೇಕು.

ಚಾಲಕ ಕಂ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ಅಥವ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. (ಮುಕ್ತ ವಿವಿ ನೀಡುವ 500 ಅಂಕಗಳ ಎಸ್ಎಸ್ಎಲ್‌ಸಿ ಪ್ರಮಾಣ ಪತ್ರ ಪರಿಗಣಿಸುವುದಿಲ್ಲ).

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಎರಡು ವರ್ಷದ ಅವಧಿ ಪೂರ್ಣಗೊಂಡು ಚಾಲ್ತಿಯಲ್ಲಿರುವ ಸರಕು ಸಾಗಣೆ/ಪ್ರಯಾಣಿಕ ಭಾರಿ ವಾಹನ ಚಾಲನಾ ಪರವಾನಿಗೆ ಮತ್ತು ಚಾಲ್ತಿಯಲ್ಲಿರುವ ನಿರ್ವಾಹಕ ಪರವಾನಿಗಿ ಹಾಗೂ ಕರ್ನಾಟಕ ಬ್ಯಾಡ್ಜ್‌ ಹೊಂದಿರಬೇಕು. [ಅರ್ಜಿ ಸಲ್ಲಿಸಲು ವಿಳಾಸ]

ವಯೋಮಿತಿ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 24 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ 35, 2ಎ/2ಬಿ/3ಎ/3ಬಿ 38, ಪ.ಜಾ/ಪ.ಪಂ/ವರ್ಗ -1 ರ ಅಭ್ಯರ್ಥಿಗಳಿಗೆ 40 ವರ್ಷಗಳು.

ಇಲಾಖೆಯ ಅಭ್ಯರ್ಥಿಗಳು ಅವರು ಸಲ್ಲಿಸಿರುವ ಸೇವಾವಧಿಯ ಗರಿಷ್ಠ 10 ವರ್ಷಗಳಿಗೆ ಮೀರದಂತೆ ವಯೋಮಿತಿ ರಿಯಾಯಿತಿಗೆ ಅರ್ಹರು. ಆದರೆ, ಅವರ ವಯಸ್ಸು 45 ವರ್ಷ ಮೀರಬಾರದು.

ಮಾಜಿ ಸೈನಿಕ ಅಭ್ಯರ್ಥಿಯು ಭಾರತದ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸಿ, ಮಾಜಿ ಸೈನಿಕ ಎಂಬ ಅರ್ಹ ಪ್ರಮಾಣ ಪತ್ರ ಪಡೆದಿದ್ದರೆ ಅವರು ಸಲ್ಲಿಸಿದ ಸೇವೆಯ ಜೊತೆಗೆ ಮೂರು ವರ್ಷಗಳ ವಯೋಮಿತಿಗೆ ಅರ್ಹರು. ಆದರೆ, ಅವರ ವಯಸ್ಸು 45 ವರ್ಷ ಮೀರಿಬಾರದು.

ಅರ್ಜಿ ಶುಲ್ಕ : ಸಾಮಾನ್ಯ ವರ್ಗ/2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 300 ರೂ., ಪ.ಜಾ/ಪ.ಪಂ/ವರ್ಗ 1/ಮಾಜಿ ಸೈನಿಕರಿಗೆ 150 ರೂ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ದೊರೆಯುವ ಚಲನ್ ಪ್ರತಿ ಡೌನ್‌ಲೋಡ್ ಮಾಡಿಕೊಂಡು ಕಚೇರಿಯ ವೇಳೆಯೊಳಗೆ ಎಲೆಕ್ಟ್ರಾನಿಕ್ ಅಂಚೆ ಕಚೇರಿಗಳಲ್ಲಿ ಮಾತ್ರ ಪಾವತಿ ಮಾಡಬಹುದಾಗಿದೆ. ಶುಲ್ಕ ಪಾವತಿ ಮಾಡದೇ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಅರ್ಜಿಯನ್ನು ಕಡ್ಡಾಯವಾಗಿ ಕೆಎಸ್ಆರ್‌ಟಿಸಿ ವೆಬ್‌ಸೈಟ್ ಮೂಲಕ ಮಾತ್ರ ಸಲ್ಲಿಸಬೇಕಾಗಿದೆ. ಏ.18ರ ಸಂಜೆ 5.30ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಏ.20. ನಿಗದಿಪಡಿಸಿದ ದಿನಾಂಕದ ನಂತರ ಬರುವ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

English summary
Karnataka State Road Transport Corporation (KSRTC) invites online applications from the eligible candidates for the posts of Drivers and Drivers cum Conductors in Bengaluru Central, Ramanagar, Tumakuru, Kolar, Mysuru City, Mysuru Rural, Hassan, Chikkamagalur, Davanagere, Mandya and Chikkaballapur Divisions. April 18, 2015 last date to submit application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X