ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸಿಬಿ ರಚನೆ : ಸರ್ಕಾರಕ್ಕೆ ಶೆಟ್ಟರ್ ಕೇಳಿದ ಪ್ರಶ್ನೆಗಳು

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 22 : ಬಜೆಟ್ ಅಧಿವೇಶನದ ಮೊದಲ ದಿನವಾದ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿರುವ ಸರ್ಕಾರದ ಕ್ರಮದ ವಿರುದ್ಧ ಪ್ರತಿಪಕ್ಷ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿತು. ಎಸಿಬಿ ರಚನೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತು.

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, 'ಲೋಕಾಯುಕ್ತವನ್ನು ದುರ್ಬಲಗೊಳಿಸಲೆಂದೇ ಜಾರಿಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳವು ಭ್ರಷ್ಟರನ್ನು ರಕ್ಷಿಸುವ ಭ್ರಷ್ಟಾಚಾರ ರಕ್ಷಣಾ ದಳವಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಆದ್ದರಿಂದ ಕೂಡಲೇ ಎಸಿಬಿ ರದ್ದು ಮಾಡಿ ಲೋಕಾಯುಕ್ತ ಸಂಸ್ಥೆ ರಕ್ಷಿಸಿ' ಎಂದು ಒತ್ತಾಯಿಸಿದರು. [ಸದನದಲ್ಲಿ ಎಸಿಬಿ ರಚನೆ ಚರ್ಚೆ, ಸಚಿವ ರಮಾನಾಥ ರೈ ನಿದ್ದೆ]

'ಭ್ರಷ್ಟಾಚಾರ ತಡೆಗಟ್ಟುವ ಉದ್ದೇಶದಿಂದ 1984ರಲ್ಲಿ ರಾಮಕೃಷ್ಣ ಹೆಗಡೆ ಲೋಕಾಯುಕ್ತ ವ್ಯವಸ್ಥೆ ಸ್ಥಾಪಿಸಿದರು. ಆದರೆ, ಈಗಿನ ಕಾಂಗ್ರೆಸ್ ಸರಕಾರ ತರಾತುರಿಯಲ್ಲಿ ಎಸಿಬಿ ಸ್ಥಾಪಿಸಿ ಆ ಸಂಸ್ಥೆಯ ಬಾಗಿಲು ಮುಚ್ಚಲು ಹೊರಟಿದೆ' ಎಂದು ಆರೋಪಿಸಿದರು.

jagadeesh shettar

ಲೋಕಾಯುಕ್ತ ರಾಷ್ಟ್ರಕ್ಕೆ ಮಾದರಿ : 'ರಾಷ್ಟ್ರಕ್ಕೆ ಮಾದರಿಯಾಗಿದ್ದ ಲೋಕಾಯುಕ್ತ ಸಂಸ್ಥೆ ಬಲ ಪಡಿಸುವ ಬದಲು ಸಿದ್ಧರಾಮಯ್ಯ ಸರಕಾರ ಅದನ್ನು ದುರ್ಬಲಗೊಳಿಸುತ್ತಿದೆ. ಎಸಿಬಿ ಹಾಗೂ ಅದರ ಮೇಲುಸ್ತುವಾರಿಗೆ ನೇಮಿಸುವ ಜಾಗೃತ ದಳ ಸಲಹಾ ಮಂಡಳಿಯಲ್ಲಿ ಕೆಂಪಯ್ಯನವರಂತಹವರನ್ನು ಸದಸ್ಯರನ್ನಾಗಿ ಮಾಡಲಾಗುತ್ತಿದೆ. ಹಾಗೂ ಎಸಿಬಿ ಮುಖ್ಯಕಾರ್ಯದರ್ಶಿ, ಡಿಪಿಎಆರ್ ಹಾಗೂ ಸಿಎಂ ಅಡಿಯಲ್ಲಿ ಬರುತ್ತದೆ. ಎಸಿಬಿ ಪ್ರಾರಂಭಿಕ ತನಿಖೆ ನಡೆಸಬೇಕಾದರೂ ಸಲಹಾ ಮಂಡಳಿ ಅನುಮತಿ ಪಡೆಯಬೇಕಾಗುತ್ತದೆ' ಎಂದು ಹೇಳಿದರು. [ಎಸಿಬಿ ರಚನೆ : ಕೃಷ್ಣ ಕೊಟ್ಟ ಸಲಹೆ ಕೇಳ್ತಾರಾ ಸಿದ್ದು?]

'ರಾತ್ರೋ ರಾತ್ರಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಿ ಸರಕಾರ ಆದೇಶ ಹೊರಡಿಸಿದೆ. 18 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಆಧಾರವಾಗಿರಿಸಿಕೊಂಡು ಎಸಿಬಿ ರಚಿಸಲು ಸರಕಾರ ಹೊರಟಿದೆ. 18 ವರ್ಷಗಳ ನಂತರ ಸರಕಾರಕ್ಕೆ ಸುಪ್ರೀಂ ತೀರ್ಪು ನೆನಪಾಗಿದ್ದು ಹೇಗೆ ? ಈಗಿರುವ ಮುಖ್ಯಮಂತ್ರಿ, ಸಚಿವರ ಹಾಗೂ ಅಧಿಕಾರಿಗಳ ವಿರುದ್ಧ ಹಲವಾರು ಆರೋಪಗಳಿವೆ. ಆ ಎಲ್ಲ ಆರೋಪಗಳಿಂದ ಮುಕ್ತಿ ಹೊಂದಲು ಎಸಿಬಿ ರಚಿಸಲಾಗಿದೆಯೇ?' ಎಂದು ಶೆಟ್ಟರ್ ಪ್ರಶ್ನಿಸಿದರು. [ಸಂದರ್ಶನ : ಲೋಕಾಯುಕ್ತದ ಅಧಿಕಾರ ಮೊಟಕುಗೊಳ್ಳುವುದಿಲ್ಲ]

'ಎಸಿಬಿ ರಚಿಸುವಂಥಹ ಅಗತ್ಯವೇನಿತ್ತು ಸರಕಾರಕ್ಕೆ ? ಯಾರು ಎಸಿಬಿ ರಚಿಸಲು ಸಲಹೆ ನೀಡಿದ್ದಾರೆ? ಅಧಿಕಾರದಲ್ಲಿರುವವರ ಸುತ್ತ ಇಂತಹ ಐಡಿಯಾಗಳನ್ನು ಕೊಡುವವರ ದಂಡೇ ಇರುತ್ತದೆ' ಎಂದು ವ್ಯಂಗ್ಯವಾಡಿದರು.

English summary
In the assembly session on Monday opposition party BJP demanded Chief Minister Siddaramaiah to withdrawn the order of setting up Anti-Corruption Bureau (ACB).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X