ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ಮಂದಿ ಭ್ರಷ್ಟರ ಮೇಲೆ ಎಸಿಬಿ ದಾಳಿ ಪೂರ್ಣ ವಿವರ

By Mahesh
|
Google Oneindia Kannada News

ಬೆಂಗಳೂರು, ಜೂನ್ 16: ಆದಾಯವನ್ನು ಮೀರಿ ಅತಿ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದ ಅಧಿಕಾರಿಗಳ ಮನೆ, ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದವರು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದರು. ಕೋಲಾರ, ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು, ರಾಯಚೂರು ಸೇರಿದಂತೆ ವಿವಿಧೆಡೆ ದಾಳಿ ನಡೆಯಿತು. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡದಿಂದ ನಡೆಸಲಾದ ದಾಳಿ ವಿವರ ಇಲ್ಲಿದೆ...

1. ಕೆ.ಟಿ ಹಾಲಸ್ವಾಮಿ, ಉಪ ಸಾರಿಗೆ ಆಯುಕ್ತರು ಮತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೆ. ಆರ್.ಪುರಂ. ಬೆಂಗಳೂರು ಹಾಗೂ (ಪ್ರಭಾರ) ಜಂಟಿ ಆಯುಕ್ತರು ಸಾರಿಗೆ ಇಲಾಖೆ.

ಬೆಂಗಳೂರು ನಗರದ ಡಾಲರ್ಸ್ ಕಾಲೋನಿ, ವೈಷ್ಣವಿ ಅಪಾರ್ಟ್‌ಮೆಂಟ್ಸ್‌ನಲ್ಲಿರುವ ಇವರ ವಾಸದ ಮನೆ ಹಾಗೂ ವಿಶ್ವೇಶ್ವರಯ್ಯ ಟವರ್‍ಸ್ (ವಿವಿ ಟವರ್ಸ್ ) ನಲ್ಲಿರುವ ಕಚೇರಿ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಎನ್.ಗಾಣದಕಟ್ಟೆ ಗ್ರಾಮದಲ್ಲಿರುವ ಇವರ ತಂದೆಯ ವಾಸದ ಮನೆಯ ಮೇಲೆ ಅಕ್ರಮ ಆಸ್ತಿಯ ಸಂಬಂಧ ಹುಡುಕಾಟ ನಡೆಸಿ ದಾಖಲಾತಿ ಮತ್ತು ಆಸ್ತಿಗಳ ವಿವರಗಳನ್ನು ಪರಿಶೀಲಿಸಲಾಗಿದೆ.

Anti corruption bureau (ACB) raid full details Kolar, Chikkamagaluru, Kalaburagi
* ಬೆಂಗಳೂರು ನಗರ ಆರ್.ಎಂ.ವಿ 2ನೇ ಹಂತದಲ್ಲಿ 24.4‍X 15.25 ಚ.ಅಡಿ ನಿವೇಶನ ತಂದೆಯ ಹಸರಿನಲ್ಲಿರುತ್ತದೆ
* ದಾಸರಹಳ್ಳಿ 14ನೇ ವಾರ್ಡ್, ಬಾಗಲುಗುಂಟೆಯಲ್ಲಿ 30 X40 ಅಡಿ (ಪತ್ನಿಯ ಹೆಸರಿನಲ್ಲಿ) ಮನೆ, ಬೆಂಗಳೂರು ಜಿಲ್ಲೆ,
* ನೆಲಮಂಗಲ ತಾಲ್ಲೂಕು, ಸೋಂಪುರ ಹೋಬಳಿ, ಮಾಕೇನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ 18 ಎಕರೆ 12 ಗುಂಟೆ ಜಮೀನು
* ಬೆಂಗಳೂರು ಜಿಲ್ಲೆ, ನೆಲಮಂಗಲ ತಾಲ್ಲೂಕು, ತ್ಯಾಮಗೊಂಡ್ಲು ಹೋಬಳಿ, ಜಕ್ಕನಹಳ್ಳಿ ಗ್ರಾಮದಲ್ಲಿ 8 ಎಕರೆ 8 ಗುಂಟೆ ಜಮೀನು. (ಒಟ್ಟು 26 ಎಕರೆ 20 ಗುಂಟೆ ಜಮೀನುಗಳು ತಂದೆಯ ಹೆಸರಿನಲ್ಲಿರುತ್ತವೆ).
* ಒಂದು ನಿಸ್ಸಾನ್ ಟೆರೆನೊ ಕಾರ್ ಅಂದಾಜು ಮೌಲ್ಯ 11 ಲಕ್ಷ, ಒಂದು ಫಾರ್ಚೂನರ್ ಕಾರು ಅಂದಾಜು ಮೌಲ್ಯ 28 ಲಕ್ಷ, ಒಂದು ಸ್ವಿಫ್ಟ್ ಕಾರ್ ಅಂದಾಜು ಮೌಲ್ಯ 9 ಲಕ್ಷ ಹಾಗೂ ಒಂದು ಟ್ರಾಕ್ಟರ್ ಮತ್ತು 3 ಮೋಟಾರ್ ಬೈಕ್‌ಗಳು,
* ಸುಮಾರು 530 ಗ್ರಾಂ ಚಿನ್ನದ ಆಭರಣಗಳು ಅಂದಾಜು ಮೌಲ್ಯ 11 ಲಕ್ಷ; 3.5 ಕೆಜಿ ಬೆಳ್ಳಿಯ ಪದಾರ್ಥಗಳು ಅಂದಾಜು ಮೌಲ್ಯ 1.5 ಲಕ್ಷ; ನಗದು ಹಣ 2.7 ಲಕ್ಷ ರು ಪತ್ತೆಯಾಗಿರುತ್ತದೆ. ದಾಖಲಾತಿಗಳು ಪರಿಶೀಲನೆಯಲ್ಲಿರುತ್ತವೆ.

2. ಡಾ|| ಎಸ್.ಎಂ.ವಿ ಕುಮಾರಗೌಡ, ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೋಲಾರ.

* ಬೆಂಗಳೂರು ನಗರದ ಕೆ.ಆರ್‌ಪುರಂನಲ್ಲಿ ಇವರ ವಾಸದ ಮನೆ ಹಾಗೂ ಮುಳುಬಾಗಿಲಿನಲ್ಲಿರುವ ಇವರ ಮನೆ ಮತ್ತು ಇವರ ವಿಹಾರಿಕ ನರ್ಸಿಂಗ್ ಹೋಂ ಮತ್ತು ಅವರ ಮುಳುಬಾಗಿಲಿನಲ್ಲಿ ವಾಸವಿರುವ ಸ್ನೇಹಿತ ಹಾಗೂ ಇವರ ಉದ್ಯಮದ ಪಾಲುದಾರರಾದ ಕಲ್ಲಪಲ್ಲಿ ಪ್ರಕಾಶ ರವರ ಮನೆ ಹಾಗೂ ಇವರ ಕರ್ತವ್ಯ ನಿರ್ವಹಿಸಿರುವ ಜಿಲ್ಲಾ ತರಬೇತಿ ಕೇಂದ್ರ, ಕೋಲಾರದ ಕಛೇರಿಯಲ್ಲಿ ಅಕ್ರಮ ಆಸ್ತಿಯ ಹುಡುಕಾಟ ನಡೆಸಿ ದಾಖಲಾತಿ ಮತ್ತು ಆಸ್ತಿಗಳ ವಿವರಗಳನ್ನು ಪರಿಶೀಲಿಸಲಾಗಿದೆ.

* ಇವರ ವಾಸದ ಮನೆಯಾದ ಬಸವನಪುರ, ಕೃಷ್ಣರಾಜಪುರಂ ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು ಇಲ್ಲಿ 30 X 40 ಅಳತೆಯ 3 ನಿವೇಶನಗಳು (ಪತ್ನಿಯ ಹೆಸರಿನಲ್ಲಿ) ಬಸವನಪುರ, ಕೃಷ್ಣರಾಜಪುರಂ ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು ಇಲ್ಲಿ 40 X60 ಅಡಿ ಅಳತೆಯ ನಿವೇಶನದಲ್ಲಿ 03 ಅಂತಸ್ತಿನಲ್ಲಿ 12 ಮನೆಗಳು ಹಾಗೂ 02 ಅಂಗಡಿಗಳು, ಮುಳಬಾಗಿಲು ನಗರ ಮುತ್ಯಾಲಪೇಟೆಯಲ್ಲಿ 40 X 60 ಅಡಿ ಅಳತೆಯ ನಿವೇಶನದಲ್ಲಿ 03 ಅಂತಸ್ತಿನ ಮನೆ ಇದರಲ್ಲಿ ಸಾಯಿ ವಿಹಾರಿಕಾ ನರ್ಸಿಂಗ್ ಹೋಂ ಹಾಗೂ ವಾಸದ ಮನೆ ಇರುತ್ತದೆ.

ಮುಳಬಾಗಿಲು ನಗರ ಮುತ್ಯಾಲಪೇಟೆಯಲ್ಲಿ 21 X10 ಅಡಿ ಅಳತೆಯ ಮೂರು ಅಂಗಡಿಗಳು. (ಎಲ್ಲವೂ ಪತ್ನಿಯ ಹೆಸರಿನಲ್ಲಿ) ಗುಮ್ಮಕಲ್ಲು, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ ಇಲ್ಲಿ 6 ಎಕರೆ 25 ಗುಂಟೆ ಜಮೀನು, ಕುರುಬರಹಳ್ಳಿ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ ಇಲ್ಲಿ 3 ಎಕರೆ 38 ಗುಂಟೆ ಜಮೀನು, ಸೂರಕುಂಟೆ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ ಇಲ್ಲಿ 3 ಎಕರೆ 34 ಗುಂಟೆ ಜಮೀನು, ಬೋವಿಬಿಕ್ಕನಹಳ್ಳಿ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ ಇಲ್ಲಿ 23 ಗುಂಟೆ ಜಮೀನು, ಮುಳಬಾಗಿಲು ಟೌನ್ ನಲ್ಲಿ 1 ಎಕರೆ 15 ಗುಂಟೆ ಜಮೀನು, (ಎಲ್ಲವೂ ಪತ್ನಿಯ ಹೆಸರಿನಲ್ಲಿ) ವೆಂಕಟೇಶ್ವರ ವೈನ್ಸ್ (ಕಾಂತರಾಜ ಸರ್ಕಲ್, ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ) ಪತ್ನಿಯ ಜೊತೆಗೆ ಆವಣಿ ಗ್ರಾಮದ ಸುಬ್ರಮಣಿ ರವರ ಪಾಲುದಾರಿಕೆಯಲ್ಲಿರುತ್ತದೆ,

ಪತ್ನಿಯ ಹೆಸರಿನಲ್ಲಿ ಜಿಯಾಪಲ್ಲಿ ಗ್ರಾಮ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ ಇಲ್ಲಿ 10 ಎಕರೆ 20 ಗುಂಟೆ ಜಮೀನು. 1,70,410/- ನಗದು ಹಣ; ೬೮೫ ಗ್ರಾಂ ಚಿನ್ನದ ಆಭರಣ; 500 ಗ್ರಾಂ ಬೆಳ್ಳಿಯ ಆಭರಣ; ಪತ್ತೆಯಾಗಿರುತ್ತದೆ. ಒಂದು ಇನ್ನೋವಾ ಕಾರ್, ಓಮಿನಿ ಆಂಬುಲೆನ್ಸ್, ಮೆಸ್ಟ್ರೋ ಹೀರೋ ಮೋಟಾರ್ ಕಾರ್ಪ್ ದ್ವಿಚಕ್ರ ವಾಹನ ಪತ್ತೆಯಾಗಿರುತ್ತದೆ. ದಾಖಲಾತಿಗಳು ಪರಿಶೀಲನೆಯಲ್ಲಿರುತ್ತವೆ.


3. ವೆಂಕಟರಮಣಪ್ಪ, ಹಿರಿಯ ಹಾಸ್ಟೆಲ್ ವಾರ್ಡನ್, ಸರ್ಕಾರಿ ಬಾಲಕರ ಪಿ.ಯು ವಿದ್ಯಾರ್ಥಿ ನಿಲಯ, ಸಮಾಜ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ.

ಇವರು ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಬಾಲಕರ ಪಿಯು ವಿದ್ಯಾರ್ಥಿ ನಿಲಯ, ಪೆರೇಸಂದ್ರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಛೇರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಶಾಂತ್ ನಗರ ಮತ್ತು ಚಾಮರಾಜಪೇಟೆಯಲ್ಲಿರುವ ವಾಸದ ಮನೆಗಳ ಮೇಲೆ ದಾಳಿ.

* 2ನೇ ಹೆಂಡತಿ ನರಸಮ್ಮ ಹೆಸರಿನಲ್ಲಿ ಚಿಕ್ಕಬಳ್ಳಾಪುರ ರೈಲ್ವೇ ನಿಲ್ದಾಣದ ಬಳಿ 45 ‍‍X55 ಹಾಗೂ 45 X 18.5 ಅಡಿ ಅಳತೆಯ 2 ನಿವೇಶನಗಳು
* ಚಿಕ್ಕಬಳ್ಳಾಪುರ ಟೌನ್ ಚಾಮರಾಜಪೇಟೆಯಲ್ಲಿ 35 X30 ಅಡಿ ಅಳತೆಯ ನಿವೇಶನದಲ್ಲಿ ನಿರ್ಮಿಸಿರುವ ಮನೆ,
* ಚಿಕ್ಕಬಳ್ಳಾಪುರ ಮಷ್ಟೂರು ಗ್ರಾಮದಲ್ಲಿ 32 X 38 ಹಾಗೂ 44 X38 ಅಡಿ ಅಳತೆಯ 2 ನಿವೇಶನಗಳಲ್ಲಿ 3 ಮನೆ ಹಾಗೂ 2 ಅಂಗಡಿಗಳನ್ನು ನಿರ್ಮಿಸಿರುತ್ತಾರೆ.
* ಚಿಂತಾಮಣಿ ತಾಲ್ಲೂಕು, ಕಸಬಾ ಹೋಬಳಿ, ಸೊಣ್ಣಶೆಟ್ಟಿಹಳ್ಳಿ 1 ಎಕರೆ 6 ಗುಂಟೆ ಜಮೀನು.

* ಮೊದಲನೇ ಹೆಂಡತಿ ಗಂಗಮ್ಮ ಹೆಸರಿನಲ್ಲಿ ಚಿಂತಾಮಣಿ ತಾಲ್ಲೂಕು, ಕಸಬಾ ಹೋಬಳಿ, ಕರಿಯಪ್ಪನಪಾಳ್ಯದಲ್ಲಿ 2 ಎಕರೆ 7 ಗುಂಟೆ ಜಮೀನು, ಇದಲ್ಲದೇ ಚಿಕ್ಕಬಳ್ಳಾಪುರದ ಬಡವರ ಸಂಘ ಕಾಲೋನಿಯಲ್ಲಿ 40 X32 ಅಳತೆಯ 3 ನಿವೇಶನಗಳಲ್ಲಿ ನಿರ್ಮಿಸಿರುವ ಮನೆ ಹಾಗು ಅಂಗಡಿಗಳು ಹಾಗೂ ಒಂದು ದ್ವಿಚಕ್ರ ವಾಹನ ಪತ್ತೆಯಾಗಿರುತ್ತದೆ.

ಎರಡನೇ ಹೆಂಡತಿ ನರಸಮ್ಮ ರವರ ಮನೆಯಲ್ಲಿ 250 ಗ್ರಾಂ ಚಿನ್ನದ ಆಭರಣಗಳು ಅಂದಾಜು ಮೌಲ್ಯ ಸುಮಾರು 5 ಲಕ್ಷ; 1.5 ಕೆಜಿ ಬೆಳ್ಳಿ ಅಂದಾಜು ಮೌಲ್ಯ 21 ಸಾವಿರ; ಒಂದು ಸ್ವೀಫ್ಟ್ ಕಾರ್ ಅಂದಾಜು ಮೌಲ್ಯ 3.5 ಲಕ್ಷ ಮತ್ತು ಒಂದು ಹೊಂಡಾ ಆಕ್ಟೀವಾ ಮತ್ತು ಒಂದು ಹೀರೋ ಹೊಂಡಾ ದ್ವಿಚಕ್ರ ವಾಹನ.

ವಿವಿಧ ಬಗೆಯ 16 ಎಲ್‌ಐಸಿ ವಿಮಾ ಪಾಲಿಸಿಗಳು; ಪೊಸ್ಟಲ್ ಆರ್.ಡಿ ಮತ್ತು ಎಫ್.ಡಿಗಳು ಮತ್ತು ಕೆನರಾ ಬ್ಯಾಂಕ್‌ನಲ್ಲಿ ಒಂದು ಲಾಕರ್ ಪತ್ತೆಯಾಗಿರುತ್ತದೆ. ದಾಖಲಾತಿಗಳು ಪರಿಶೀಲನೆಯಲ್ಲಿರುತ್ತವೆ.


4. ವಿಜಯ ಕುಮಾರ್ ಎಂ. ಗುಡಗೇರಿ ಕಂದಾಯ ನಿರೀಕ್ಷಕರು, ಶಿಗ್ಗಾಂ ಸರ್ಕಲ್, ಕಂದಾಯ ಇಲಾಖೆ, ಹಾವೇರಿ ಜಿಲ್ಲೆ.
ಹಾವೇರಿ, ಬಸವೇಶ್ವರನಗರ ಬಿ ಬ್ಲಾಕ್‌ನಲ್ಲಿರುವ ಇವರ ವಾಸದ ಮನೆಯಲ್ಲಿ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿಯಲ್ಲಿ ಅಕ್ರಮ ಆಸ್ತಿಯ ಹುಡುಕಾಟ ನಡೆಸಿ ದಾಖಲಾತಿಗಳನ್ನು ಪರಿಶೀಲನೆ.

* ಇವರಿಗೆ ಸೇರಿದ ಬಸವೇಶ್ವರನಗರ ಬಿ ಬ್ಲಾಕ್‌ನಲ್ಲಿರುವ ಮನೆಯು 40 ‍‍X 60 ಚ.ಅಡಿ ಅಳತೆಯ ಡ್ಯೂಪ್ಲೆಕ್ಸ್ ವಾಸದ ಮನೆ, (ಅಂದಾಜು ಮೌಲ್ಯ ಸುಮಾರು 50 ಲಕ್ಷ), ಹಾವೇರಿ ನಗರದಲ್ಲಿ ಪತ್ನಿಯ ಹೆಸರಿನಲ್ಲಿ 35 X40 ಚ.ಅಡಿ 2 ಖಾಲಿ ನಿವೇಶನ ಅಂದಾಜು ಮೌಲ್ಯ 7.5 ಲಕ್ಷ, ಹಾಗೂ 60 X 40 ಚ.ಅಡಿ ಒಂದು ಖಾಲಿ ನಿವೇಶನ ಅಂದಾಜು ಬೆಲೆ 6 ಲಕ್ಷ, ಒಂದು ಸ್ವೀಫ್ಟ್ ಡಿಸೈರ್ ಕಾರ್; 2 ದ್ವಿಚಕ್ರ ವಾಹನಗಳು ಪತ್ತೆಯಾಗಿರುತ್ತದೆ. ದಾಖಲಾತಿಗಳು ಪರಿಶೀಲನೆಯಲ್ಲಿರುತ್ತವೆ.


5. ಬಸವರಾಜ್ ರುದ್ರಪ್ಪ ಗೌಡೂರ್ ಎ.ಇ.ಇ, (ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಪ್ರಭಾರ ಕಾರ್ಯಪಾಲಕ ಅಭಿಯಂತರರು) ಪಂಚಾಯತ್ ರಾಜ್ ಇಲಾಖೆ ರಾಯಚೂರು.

ಇವರ ಕಲಬುರಗಿ, ಲಿಂಗಸುಗೂರಿನಲ್ಲಿರುವ ಮನೆಗಳು ಹಾಗೂ ಕಲುಬುರಗಿಯಲ್ಲಿರುವ ಆಟೋ ಷೋರೂಂ ಹಾಗೂ ರಾಯಚೂರಿನಲ್ಲಿರುವ ಕಛೇರಿ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗಿ, ಇವರ ಹೆಸರಿನಲ್ಲಿ ಎನ್.ಜಿ.ಓ ಕಾಲೋನಿ, ಹೊಸ ಜೇವರ್ಗಿ ರಸ್ತೆ, ಕಲಬುರಗಿಯಲ್ಲಿ 90 X60 ಅಳತೆಯ ಎರಡು ನಿವೇಶನಗಳು ಇವರ ಹೆಂಡತಿಯ ಹೆಸರಿನಲ್ಲಿ ಆಜಾದ್‌ನಗರ ಲಿಂಗಸೂರಿನಲ್ಲಿ 30 X40 ಅಳತೆಯ ಒಂದು ನಿವೇಶನ ಹಾಗೂ

ಕುಣಿಕಲ್ಲೂರು ಗ್ರಾಮದಲ್ಲಿ 10 ಎಕರೆ 38 ಗುಂಟೆ ಜಮೀನು ನಂತರ ಅವರ ಹಿರಿಯ ಮಗನಾದ ವಿನೋದ್‌ಕುಮಾರ್ ರವರ ಹೆಸರಿನಲ್ಲಿ ಆಜಾದ್‌ನಗರ ಲಿಂಗಸೂರಿನಲ್ಲಿ 30 X40 ಅಳತೆಯ ಎರಡು ನಿವೇಶನಗಳು. ರಾಮೇಶ್ವರನಗರ ಕಲಬುರಗಿಯಲ್ಲಿ 30 X40 ಅಳತೆಯ ನಿವೇಶನ, ನಾಗನಹಳ್ಳಿ ಗ್ರಾಮದಲ್ಲಿ 30 X40 ಅಳತೆಯ ನಿವೇಶನ, ಮಹಗಾವ್ ಗ್ರಾಮದಲ್ಲಿ 30 X40 ಅಳತೆಯ 2 ನಿವೇಶನ, ಕುಸ್ನೂರು ಗ್ರಾಮದಲ್ಲಿ 30 X40 ಅಳತೆಯ 3 ನಿವೇಶನ, ಕಲಬುರಗಿಯಲ್ಲಿ 896 ಚ.ಅ ಅಳತೆಯ ಫ್ಲ್ಯಾಟ್, ಜೇವರ್ಗಿಯಲ್ಲಿ 30 X80 ಅಳತೆಯ ನಿವೇಶನ, ಹಾಗೂ ಕಲಬುರಗಿ ಜಿಲ್ಲೆಯ ವಿವಿಧ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ 20 ಎಕರೆ 3 ಗುಂಟೆ ಜಮೀನು,ಪತ್ನಿಯ ಹೆಸರಿನಲ್ಲಿ ಮಟ್ಟೂರಿನಲ್ಲಿ 11 ಎಕರೆ 6 ಗುಂಟೆ ಜಮೀನು, ಮಗನ ಹೆಸರಿನಲ್ಲಿ ಕೊಳ್ಳೂರಿನಲ್ಲಿ 7 ಎಕರೆ 2 ಗುಂಟೆ ಜಮೀನು, ಮಟ್ಟೂರಿನಲ್ಲಿ 4 ಎಕರೆ 37 ಗುಂಟೆ ಜಮೀನು ಹಾಗೂ ಒಂದು ಮಹೀಂದ್ರಾ ಬೊಲೆರೋ ವಾಹನ. 1 ಕೆ.ಜಿ ಚಿನ್ನದ ಆಭರಣಗಳು ಅಂದಾಜು ಮೌಲ್ಯ 30 ಲಕ್ಷ; 5 ಕೆ.ಜಿ ಬೆಳ್ಳಿ ವಸ್ತುಗಳು ಅಂದಾಜು ಮೌಲ್ಯ 2 ಲಕ್ಷ; ಹಾಗೂ ನಗದು ಹಣ 1 ಲಕ್ಷ, 5 ಮ್ಯೂಚುವಲ್ ಫಂಡ್‌ಗಳು ದೊರೆತಿದ್ದು, ದಾಖಲಾತಿಗಳು ಪರಿಶೀಲನೆಯಲ್ಲಿರುತ್ತವೆ.


6. ಬನ್ನಪ್ಪ ಕೋಮಾರ್ ಸಹಾಯಕ ಅಭಿಯಂತರರು, ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ, ಖಾನಪೂರ, ಯಾದಗಿರಿ.
ಇವರು ವಾಸವಿರುವ ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿರುವ ಬಸವೇಶ್ವರನಗರದಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗಿ, ಇವರ ತಂದೆಯ ಹೆಸರಿನಲ್ಲಿ ಯಾದಗಿರಿ ಜಿಲ್ಲೆ, ಕಣೀಕಲ್ ಗ್ರಾಮದಲ್ಲಿ 50 X60 ಚ.ಅಡಿ ನಿವೇಶನ ಹಾಗೂ ಅದೇ ಗ್ರಾಮದಲ್ಲಿ 50 X60 ಚ.ಅಡಿ ಮನೆ ಮತ್ತು 26 ಎಕರೆ 37 ಗುಂಟೆ ಜಮೀನು.

ಇವರ ಪತ್ನಿ ಹೆಸರಿನಲ್ಲಿ ಯಾದಗಿರಿ ನಗರದಲ್ಲಿ 40 X60 ಚ.ಅಡಿಯ ೩ ನಿವೇಶನಗಳು ಇವರ ಹೆಸರಿನಲ್ಲಿ 30 X40 ಚ.ಅಡಿ 2 ನಿವೇಶನಗಳು. ಪತ್ನಿ ಹೆಸರಿನಲ್ಲಿ ಯಾದಗಿರಿ ಜಿಲ್ಲೆ, ಕಣೀಕಲ್ ಗ್ರಾಮದಲ್ಲಿ 2 ಎಕರೆ 23 ಗುಂಟೆ ಕೃಷಿ ಜಮೀನು, ಸಾವೂರು ಗ್ರಾಮದಲ್ಲಿ 2 ಎಕರೆ ಜಮೀನು, ಯಾದಗರಿಯಲ್ಲಿ 1 ಎಕರೆ 4 ಗುಂಟೆ ಜಮೀನು, ಮಲ್ಹಾರ ಗ್ರಾಮದಲ್ಲಿ 10 ಎಕರೆ ಜಮೀನು ಹಾಗೂ

ಒಂದು ಕಾರ್, ಇವರ ಹೆಸರಿನಲ್ಲಿ ಹೀರೋ ಹೊಂಡಾ ಫ್ಯಾಷನ್ ಪ್ರೋ, ಚಿನ್ನದ ಆಭರಣಗಳು 560 ಗ್ರಾಂ ಅಂದಾಜು ಮೌಲ್ಯ; ಸುಮಾರು 5 ಲಕ್ಷಗಳು. ಬೆಳ್ಳಿ 690 ಗ್ರಾಂ ಅಂದಾಜು ಮೌಲ್ಯ 30 ಸಾವಿರ; ಹಾಗೂ ನಗದು ಹಣ 64 ಸಾವಿರ; 5 ಎಲ್‌ಐಸಿ ವಿಮಾ ಪಾಲಿಸಿಗಳು; ಗೃಹೋಪಯೋಗಿ ವಸ್ತುಗಳು ಅಂದಾಜು ಮೌಲ್ಯ4 ಲಕ್ಷಗಳು, 15 ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳು ಹಾಗೂ ಒಂದು ಲಾಕರ್ ಪತ್ತೆಯಾಗಿರುತ್ತದೆ. ದಾಖಲಾತಿಗಳು ಪರಿಶೀಲನೆಯಲ್ಲಿರುತ್ತವೆ.


7. ಸಹದೇವ್ ಭೀಮರಾವ್ ಮಾನ್‌ಕರೆ ಕಾರ್ಯಪಾಲಕ ಅಭಿಯಂತರರು, ಜೆಸ್ಕಾಂ (ಅರ್ಬನ್) ಕಲಬುರಗಿ.
ಇವರ ಕಲಬುರಗಿ ಮತ್ತು ಬೀದರ್ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಕೆಛೇರಿ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗಿ, ಇವರ ಹೆಸರಿನಲ್ಲಿ ಬೀದರ್‌ನ ಕೆಇಬಿ ಎದುರುಗಡೆ 30 X40 ಚ.ಅಡಿ 2 ಅಂತಸ್ತಿನ ವಾಸದ ಮನೆ ಅಂದಾಜು ಮೌಲ್ಯ ಸುಮಾರು ? 38.5 ಲಕ್ಷಗಳು, ಪತ್ನಿಯ ಹೆಸರುನಲ್ಲಿ ಬೀದರ್ ನಗರ ಜೆಸ್ಕಾಂ ಕಛೇರಿ ಮುಂದೆ ಒಂದು ಅಂಗಡಿ, ಕಲುಬುರಗಿ ಬಿದ್ದಾಪುರ ಕಾಲೋನಿಯ ಎಲ್‌ಐಜಿ ಮನೆ, ಬೀದರ್ ನಗರದ ಸಹ್ಯಾದ್ರಿ ಲೇಔಟ್‌ನಲ್ಲಿ ಒಂದು ನಿವೇಶನ, ಕಲಬುರಗಿ ನಗರದ ಬ್ರಹ್ಮಾಪುರ ಗ್ರಾಮದಲ್ಲಿ 2080 ಚ.ಅಡಿಯಲ್ಲಿ ಒಂದು ಅಂತಸ್ತಿನ ಮನೆ,

ಖಾದರನಗರದಲ್ಲಿರುವ ತೋಟದ ಮನೆ ಹಾಗೂ 2 ಎಕರೆ 30 ಗುಂಟೆ ಜಮೀನು ಪತ್ನಿ ಹೆಸರಿನಲ್ಲಿರುತ್ತದೆ. ತಂದೆ ಹೆಸರಿನಲ್ಲಿ ಹುಮನಾಬಾದ್ ತಾಲ್ಲೂಕು ಬೋರಾಳ ಗ್ರಾಮದಲ್ಲಿ 11 ಎಕರೆ 15 ಗುಂಟೆ ಜಮೀನು, ಅಂದಾಜು 8 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತದೆ. ದಾಖಲಾತಿಗಳು ಪರಿಶೀಲನೆಯಲ್ಲಿರುತ್ತವೆ.


8. ಎಸ್.ಪಿ ತಿಪ್ಪಾರೆಡ್ಡಿ ಸಹಾಯಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್ ಭೂಸೇನಾ ನಿಗಮ, ಚಿಕ್ಕಮಗಳೂರು.
ಇವರ ವಾಸದ ಮನೆ ಎಂಐಜಿ-1, ಕೆಹೆಚ್‌ಬಿ ಕಾಲೋನಿ, ಕಡೂರು ಮಂಗಳೂರು ರಸ್ತೆ, ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿರುವ ಇವರ ಅತ್ತೆಯ ಮನೆಯ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗಿ, ಇವರು ವಾಸವಿರುವ ಎಂಐಜಿ-1, ಕೆಹೆಚ್‌ಬಿ ಕಾಲೋನಿಯ ಮನೆಯು ಡ್ಯೂಪ್ಲೆಕ್ಸ್ ಮನೆಯಾಗಿದ್ದು ಅಂದಾಜು ಬೆಲೆ 1 ಕೋಟಿ. ಸದರಿ ಮನೆಯ ಪಕ್ಕದಲ್ಲೇ 30 X50 ಚ.ಅಡಿ ಖಾಲಿ ನಿವೇಶನ ಹೊಂದಿದ್ದು ಅಂದಾಜು ಬೆಲೆ 5 ಲಕ್ಷ; ಇದು ಇವರ ಪತ್ನಿ ಶ್ರೀಮತಿ.ಸಂಗೀತಾ ರವರ ಹೆಸರಿನಲ್ಲಿರುತ್ತದೆ.

ಕುರುವಂಗಿ ಗ್ರಾಮದಲ್ಲಿ 1 ಎಕರೆ 37ಗುಂಟೆ ಜಮೀನು ಇವರ ಪತ್ನಿ ಶ್ರೀಮತಿ.ಸಂಗೀತಾ ರವರ ಹೆಸರಿನಲ್ಲಿರುತ್ತದೆ. ಸದರಿ ಗ್ರಾಮದಲ್ಲಿ 1 ಎಕರೆ 34 ಗುಂಟೆ ಇವರ ಹೆಸರಿನಲ್ಲಿರುತ್ತದೆ. ಅಂದಾಜು ಮೌಲ್ಯ 3.8 ಲಕ್ಷ,

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಎಂ.ಎ ದೊಡ್ಡಿ ಗ್ರಾಮದಲ್ಲಿ 13 ಎಕರೆ ಜಮೀನು ಇವರ ಹೆಸರಿನಲ್ಲಿರುತ್ತದೆ. ಅಂದಾಜು ಮೌಲ್ಯ 40 ಲಕ್ಷ. ಚಿನ್ನದ ಆಭರಣಗಳು ಸುಮಾರು 440 ಗ್ರಾಂ ಅಂದಾಜು ಮೌಲ್ಯ 10 ಲಕ್ಷ; 190 ಗ್ರಾಂ ಚಿನ್ನವನ್ನು ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಅಡವಿಟ್ಟಿರುತ್ತಾರೆ.

ಒಂದು ಮಾರುತಿ 800 ಕಾರ್ ಅಂದಾಜು ಬೆಲೆ 2.5 ಲಕ್ಷ; ಒಂದು ಮಾರುತಿ ಎಸ್‌ಎಕ್ಸ್ 4 ಅಂದಾಜು ಬೆಲೆ 10 ಲಕ್ಷ; ಒಂದು ಹೊಂಡಾ ಆಕ್ಟ್ವೀವಾ ದ್ವಿಚಕ್ರ ವಾಹನ ಮತ್ತು ಸುಜುಕಿ ಸಮೂರಾಯ್ ದ್ವಿಚಕ್ರ ವಾಹನ; ವಿವಿಧ ಬಗೆಯ 20 ವಿಮಾ ಪಾಲಿಸಿಗಳು; 5 ಮ್ಯೂಚುಯಲ್ ಫಂಡಗಳು, ಮಕ್ಕಳ ಹೆಸರಿನಲ್ಲಿ 2 ಲಕ್ಷ ಠೇವಣಿ; ಮನೆಯ ಇತರೆ ಸದಸ್ಯರ ಹೆಸರಿನಲ್ಲಿ ವಿವಿಧ ಬ್ಯಾಂಕಗಳ ಒಟ್ಟು 10 ಖಾತೆಗಳನ್ನು ಹೊಂದಿರುತ್ತಾರೆ. 2 ಲಾಕರಗಳು ಪತ್ತಯಾಗಿರುತ್ತವೆ. ದಾಖಲಾತಿಗಳು ಪರಿಶೀಲನೆಯಲ್ಲಿರುತ್ತವೆ.

English summary
Anti corruption bureau (ACB) sleuths pounced on several houses, establishments and offices of corrupt officials at various places in Karnataka including Kolar,Chikkamagaluru, Kalaburagi, Raichur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X