ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಸೇರಲಿದ್ದಾರೆ ಆನಂದ್ ಅಸ್ನೋಟಿಕರ್

|
Google Oneindia Kannada News

ಉತ್ತರ ಕನ್ನಡ, ಆ.08 : ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರುವ ಸಾಧ್ಯತೆ ಇದೆ. 'ಆನಂದ್ ಅಸ್ನೋಟಿಕರ್ ಶೀಘ್ರದಲ್ಲೇ ಜೆಡಿಎಸ್ ಸೇರಲಿದ್ದಾರೆ' ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಡಿಕೆಶಿ ಅಕ್ಕ-ಪಕ್ಕ ಕಾಣಿಸಿಕೊಳ್ಳುತ್ತಿರುವ ಜೆಡಿಎಸ್ ರೆಬೆಲ್ ಶಾಸಕರುಡಿಕೆಶಿ ಅಕ್ಕ-ಪಕ್ಕ ಕಾಣಿಸಿಕೊಳ್ಳುತ್ತಿರುವ ಜೆಡಿಎಸ್ ರೆಬೆಲ್ ಶಾಸಕರು

ಅಂಕೋಲಾದಲ್ಲಿ ಸೋಮವಾರ ಮಾತನಾಡಿದ ಮಧು ಬಂಗಾರಪ್ಪ ಅವರು, 'ವಸಂತ್ ಅಸ್ನೋಟಿಕರ್ ಮೊದಲ ಬಾರಿಗೆ ಶಾಸಕರಾಗಿದ್ದು ಕೆಸಿಪಿಯಿಂದ. ಆದ್ದರಿಂದ ಅವರ ಪುತ್ರ ಆಂಮದ ಅಸ್ನೋಟಿಕರ್ ಅವರನ್ನು ಜೆಡಿಎಸ್ ಕರೆತರಲು ಯತ್ನ ನಡೆದಿದೆ' ಎಂದರು.

Anand Asnotikar may join JDS soon

'ಆನಂದ್ ಅಸ್ನೋಟಿಕರ್ ಶೀಘ್ರವೇ ಜೆಡಿಎಸ್ ಪಕ್ಷ ಸೇರಲಿದ್ದು, ಕ್ಷೇತ್ರದಲ್ಲಿ ಸಂಚಾರ ನಡೆಸಲಿದ್ದಾರೆ' ಎಂದರು. ಆನಂದ್ ಅಸ್ನೋಟಿಕರ್ ಕಾರವಾರ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.

ಜಮೀರ್ ಹುಟ್ಟಿದ ಹಬ್ಬಕ್ಕೆ ದೇವೇಗೌಡ್ರು ಕೊಟ್ಟ ಭರ್ಜರಿ ರಾಜಕೀಯ ಗಿಫ್ಟ್ !ಜಮೀರ್ ಹುಟ್ಟಿದ ಹಬ್ಬಕ್ಕೆ ದೇವೇಗೌಡ್ರು ಕೊಟ್ಟ ಭರ್ಜರಿ ರಾಜಕೀಯ ಗಿಫ್ಟ್ !

ಕಾಂಗ್ರೆಸ್ ನಲ್ಲಿದ್ದ ಆನಂದ್ ಅಸ್ನೋಟಿಕರ್ ಬಿಜೆಪಿ ಸೇರಿದ್ದರು. ಚುನಾವಣೆಯಲ್ಲಿ ಜಯಗಳಿಸಿ ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕೆಲಸ ಮಾಡಿದ್ದರು. ನಂತರ ಪಕ್ಷದ ಚಟುವಟಿಕೆಗಳಿಂದ ದೂರವುಳಿದಿದ್ದರು.

2013ರ ಚುನಾವಣೆಯಲ್ಲಿ ಆನಂದ್ ಅಸ್ನೋಟಿಕರ್ ಕಾರವಾರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ 5 ವರ್ಷಗಳಿಂದ ರಾಜಕೀಯದಿಂದ ದೂರವುಳಿದು ಉದ್ಯಮದ ಕಡೆ ಮುಖ ಮಾಡಿದ್ದರು.

English summary
JDS leader Madhu Bangarappa said former minister Anand Asnotikar will join JDS soon. Anand Asnotikar may contest for 2018 election as JDS candidate from Karwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X