ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ಬಸ್ ಸೇವೆ

|
Google Oneindia Kannada News

ಮಂಡ್ಯ, ಮಾ. 30 : ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಉತ್ಸವ ಸೋಮವಾರ ರಾತ್ರಿ ನಡೆಯಲಿದೆ. ಉತ್ಸವಕ್ಕಾಗಿ ಮಂಡ್ಯ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸೋಮವಾರ ರಾತ್ರಿ 8 ಗಂಟೆಗೆ ವೈರಮುಡಿ ಉತ್ಸವ ಆರಂಭವಾಗಲಿದ್ದು, ಮಂಗಳವಾರ ಮುಂಜಾನೆ 3.30ರ ತನಕ ನಡೆಯಲಿದೆ. ಮಂಡ್ಯ, ಮೈಸೂರು, ನಾಗಮಂಗಲ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಸಾವಿರಾರು ಭಕ್ತರು ಮೇಲುಕೋಟೆಗೆ ಆಗಮಿಸಲಿದ್ದಾರೆ. [ಮೇಲುಕೋಟೆ ದೇವಾಲಯದಿಂದ ಆಭರಣ ನಾಪತ್ತೆ]

melukote

ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು 1,500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮಂಡ್ಯ, ಮೈಸೂರು, ನಾಗಮಂಗಲದಿಂದ ಬರುವ ಪ್ರಯಾಣಿಕರಿಗಾಗಿ ವಿಶೇಷ ಬಸ್ ಸೇವೆ ಒದಗಿಸಲಾಗಿದೆ. [ದೇವಾಲಯದಲ್ಲಿ ನಡೆದ ಅಪಶಕುನಕ್ಕೆ ಬೆಚ್ಚಿಬಿದ್ದ ಜನತೆ]

ಬೆಂಗಳೂರಿನಿಂದ ಬಸ್ ಸೌಲಭ್ಯ : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವೈರಮುಡಿ ಉತ್ಸವಕ್ಕಾಗಿ ಒಂದು ದಿನದ ಪ್ರವಾಸವನ್ನು ಮಾರ್ಚ್ 30 ರಂದು ಏರ್ಪಡಿಸಿದೆ. ಬೆಂಗಳೂರಿನ ಬಾದಾಮಿ ಹೌಸ್‍ನಿಂದ ಮಧ್ಯಾಹ್ನ 3 ಗಂಟೆಗೆ ಈ ಬಸ್ ಹೊರಡಲಿದ್ದು, ಮಂಗಳವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದೆ. ಪ್ರಯಾಣದರ 550 ರೂ. ಹೆಚ್ಚಿನ ಮಾಹಿತಿಗಾಗಿ 43344334, 22275869, 8970650070 ದೂರವಾಣಿ ಸಂಖ್ಯೆ ಕರೆ ಮಾಡಬಹುದಾಗಿದೆ.

English summary
All set for Vairamudi utsav at Sri Cheluva Narayana Swamy temple Melukote, Mandya on Monday, March 30, 2015. At least thousands of pilgrims are expected to witness the annual utsav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X