ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನದ ಆಕಾಶವಾಣಿ ಎಫ್ ಎಂಗೆ 25ರ ಸಂಭ್ರಮ

By Mahesh
|
Google Oneindia Kannada News

ಹಾಸನ, ಮೇ 04: ಹಾಸನದ ಸಾಲಗಮೆ ರಸ್ತೆಯಲ್ಲಿರುವ ಆಕಾಶವಾಣಿ ಎಫ್ ಎಂ ಕೇಂದ್ರಕ್ಕೆ ಬುಧವಾರ (ಮೇ 04) ಸಂಭ್ರಮದ ದಿನ. ಆಕಾಶವಾಣಿ ಎಫ್ ಎಂ ರೇಡಿಯೋ ಕೇಂದ್ರ ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಖುಷಿ.

ಕರ್ನಾಟಕದ ಎರಡನೇ ಎಫ್ ಎಂ ಕೇಂದ್ರವಾಗಿ 1991ರ ಮೇ 04ರಂದು ಹಾಸನದಲ್ಲಿ ಈ ಕೇಂದ್ರ 102.2 ಕಂಪನಾಂಕಗಳೊಂದಿಗೆ ಆರಂಭವಾಯಿತು. ಹಾಸನದ ಸಾಂಸ್ಕೃತಿಕ ಭಾಗವಾಗಿರುವ ಹಾಸನ ಎಫ್ ಎಂ ಕೇಂದ್ರ ಬೆಳ್ಳಿ ಹಬ್ಬದ ಸಂಭ್ರಮವನ್ನು ವಿಶಿಷ್ಟವಾಗಿ ತನ್ನ ಶೋತೃಗಳೊಡನೆ ಆಚರಿಸಲು ಮುಂದಾಗಿದೆ.

ಆಕಾಶವಾಣಿ ಎಂದ ಮೇಲೆ ನಾಟಕಗಳನ್ನು ಕೇಳಿಸಿಕೊಳ್ಳುವುದು ಒಂದು ಅದ್ಭುತ ಅನುಭವ. ಮೇ 4ರಂದು ರಾತ್ರಿ 9.30ಕ್ಕೆ ಹಾಗೂ ಮೇ 5ರಂದು ರಾತ್ರಿ 10.30ಕ್ಕೆ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ನಾಟಕಗಳನ್ನು ಬಿತ್ತರಿಸಲಾಗುತ್ತದೆ.

All India Radio (Akashvani) Hassan

ಮೇ 6ರಂದು ರಾಷ್ಟ್ರೀಯ ಪುರಸ್ಕೃತ ನಾಟಕ ಅದ್ಯಮ್ಯ (ಜ ಹೋ ನಾರಾಯಣ ಸ್ವಾಮಿ ರಚನೆ ಹಾಗೂ ಎ.ಆರ್ ಗೋಪಾಲ ನಾಯಕ್ ನಿರ್ಮಾಣ ಹಾಗೂ ನಿರ್ದೇಶನ) ಕೇಳಿಸಿಕೊಳ್ಳಬಹುದು.

All India Radio (Akashvani) Hassan

ಜತೆಗೆ ಕೇಳುಗರೊಂದಿಗೆ ನೇರ ಸಂವಾದ, ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ, ಪತ್ರಗಳನ್ನು ಆಧಾರಿಸಿ ಕಾರ್ಯಕ್ರಮ, ಏನಂತೆರಿ-ಚಿನ್ನ ಏಕೆ ಚೆನ್ನ ಎಂಬ ಮಹಿಳಾ ಕಾರ್ಯಕ್ರಮ, ನೇರ ಫೋನ್ ಇನ್ ಕಾರ್ಯಕ್ರಮ, ಕಿಸಾನ್ ವಾಣಿಯಲ್ಲಿ ರೈತರೊಡನೆ ನೇರ ಸಂವಾದ ಕಾರ್ಯಕ್ರಮವಿದೆ. ವರ್ಷವಿಡಿ ಬೆಳಗ್ಗೆ 6.50ಕ್ಕೆ ನಿತ್ಯ ಸಂಜೀವಿನಿ ಆರೋಗ್ಯ ಕಾರ್ಯಕ್ರಮವನ್ನು ಧರ್ಮಸ್ಥಳ ಮಂಜುನಾಥ ಆಯುರ್ವೇದ ಮಹಾವಿದ್ಯಾಲಯ ಪ್ರಾಯೋಜಿಸಿದೆ.

All India Radio (Akashvani) Hassan

ಮಲಬಾರ್ ಗೋಲ್ಡ್ ಅರ್ಪಿಸುವ ಚಿನ್ನದಂಥ ಹಾಡುಗಳ ಜೊತೆಗೆ ಹಲವು ಜನಪ್ರಿಯ ಕಾರ್ಯಕ್ರಮಗಳು ಕೇಳುಗರನ್ನು ತಲುಪಲಿದೆ. ಹಾಸನದ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಕಲೆ, ಶೈಕ್ಷಣಿಕ ಕಾರ್ಯಕ್ರಮಗಳ ವರದಿ ಮಾಡುತ್ತಾ ಬಂದಿರುವ ಎಫ್ ಎಂ ಕೇಂದ್ರಕ್ಕೆ ಒನ್ ಇಂಡಿಯಾ ಕನ್ನಡ ತಂಡದಿಂದಲೂ ಶುಭ ಹಾರೈಕೆಗಳು.

English summary
All India Radio (Akashvani) Hassan Station Celebrates 25th Anniversary today (May 04). Hassan Station was started in 1991 as second FM station in Karnataka. Hassan FM(102.2) has popular for 'Nithya Sanjeevini' and Kisan helpline programs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X