ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ನಲ್ಲಿ ಏರ್‌ ಆಂಬ್ಯುಲೆನ್ಸ್ ಸೇವೆ ಲಭ್ಯ

|
Google Oneindia Kannada News

ಬೆಂಗಳೂರು, ಫೆ. 18 : ಬಹುನಿರೀಕ್ಷಿತ ಏರ್‌ ಆಂಬ್ಯುಲೆನ್ಸ್‌ಗಳ ಸೇವೆ ಕರ್ನಾಟಕದಲ್ಲಿ ಅಕ್ಟೋಬರ್ ಅಂತ್ಯಕ್ಕೆ ಲಭ್ಯವಾಗಲಿವೆ. ಏರ್‌ ಆಂಬ್ಯುಲೆನ್ಸ್‌ನಲ್ಲಿ ಮೂವರು ಪ್ಯಾರಾ ಮೆಡಿಕಲ್‌ ಸಿಬ್ಬಂದಿ, ಇಬ್ಬರು ವೈದ್ಯರು ಇರುತ್ತಾರೆ. ಪೈಲೆಟ್ ಸಹ ವೈದ್ಯರಾಗಿರುತ್ತಾರೆ.

ಕರ್ನಾಟಕದಲ್ಲಿ ಏರ್ ಆಂಬ್ಯುಲೆನ್ಸ್ ಸೇವೆ ಒದಗಿಸುವ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಲಾಗಿದೆ. ಏವಿಟರ್ಸ್ ರೆಸ್ಕ್ಯೂ ಎಂಬ ಹೆಸರಿನಡಿ ಏರ್ ಮೆಡಿಕಲ್ ಗ್ರೂಪ್, ಏರ್ ಬಸ್ ಹೆಲಿಕಾಪ್ಟರ್, ಜಿಕೆಐ ಎಂಆರ್‌ಐ ಸಂಸ್ಥೆಗಳು ಜಂಟಿಯಾಗಿ ಈ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಿವೆ. [ಆರೋಗ್ಯ ಕವಚಕ್ಕೆ 198 ಆಂಬ್ಯುಲೆನ್ಸ್ ಸೇರ್ಪಡೆ]

Ambulance

ಏವಿಟರ್ಸ್ ಸಂಸ್ಥೆಯ ಮುಖ್ಯಸ್ಥ ಕ್ಯಾಪ್ಟನ್ ಅರುಣ್ ಶರ್ಮಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಮೊದಲ ಹಂತದಲ್ಲಿ ಅಕ್ಟೋಬರ್‌ನಲ್ಲಿ ಏರ್ ಆಂಬ್ಯುಲೆನ್ಸ್ ಸೇವೆ ಆರಂಭವಾಗಲಿದೆ. [ಬೆಂಗಳೂರಿಗೆ ಬರಲಿದೆ ಬೈಕ್ ಆ್ಯಂಬುಲೆನ್ಸ್]

ಸಂಸ್ಥೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ಈ ಕುರಿತು ಮಾತುಕತೆ ನಡೆಸಿದ್ದು, ವೈಮಾನಿಕ ಇಲಾಖೆಯ ಅನುಮತಿಗಾಗಿ ಕಾಯುತ್ತಿದೆ. ಎರಡನೇ ಹಂತದಲ್ಲಿ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಈ ಸೇವೆ ಆರಂಭವಾಗಲಿದೆ.

50 ಆಂಬ್ಯುಲೆನ್ಸ್ : ಸದ್ಯ ದೇಶದಲ್ಲಿ 50 ಏರ್ ಆಂಬ್ಯುಲೆನ್ಸ್ಅನ್ನು ಪರಿಚಿಸಲು ನಿರ್ಧರಿಸಲಾಗಿದೆ. ಆಂಬ್ಯುಲೆನ್ಸ್‌ನಲ್ಲಿ ಮೂವರು ಪ್ಯಾರಾ ಮೆಡಿಕಲ್ ಸಿಬ್ಬಂದಿ, ಇಬ್ಬರು ವೈದ್ಯರು ಇರುತ್ತಾರೆ. ಪೈಲೆಟ್‌ ಸಹ ವೈದ್ಯರಾಗಿರುತ್ತಾರೆ. ಈ ಸೇವೆ ಪಡೆಯುವವರ ಅನುಕೂಲಕ್ಕಾಗಿ ಕಾಲ್‌ ಸೆಂಟರ್ ಸಹ ಸ್ಥಾಪನೆಯಾಗಲಿದೆ.

ವೆಚ್ಚವೆಷ್ಟು : ಏರ್ ಆಂಬ್ಯುಲೆನ್ಸ್ ಸೇವೆ ಪಡೆಯಲು ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು. ಹೆಸರು ನೋಂದಣಿ ಮಾಡಿದವರಿಗೆ ಮಾತ್ರ ಸೇವೆಯನ್ನು ಒಸಗಿಸಲಾಗುತ್ತದೆ. ವೈಯಕ್ತಿಕವಾಗಿ ಸೇವೆ ಪಡೆಯಲು ವರ್ಷಕ್ಕೆ 18 ಸಾವಿರ ಮತ್ತು ಕುಟುಂಬ ಸದಸ್ಯರಿಗೆ ಸೇವೆ ಪಡೆಯಲು ವರ್ಷಕ್ಕೆ 30 ಸಾವಿರ ಪಾವತಿ ಮಾಡಬೇಕು.

English summary
Bengaluru is likely to get air ambulance facility at by October 2015. Bengaluru, Chennai and Hyderabad will get the dedicated air ambulance facility in this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X