ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರ ಸಮಸ್ಯೆಗೆ ಕಿವಿಗೊಡಿ, ಸರ್ಕಾರಕ್ಕೆ ಆಪ್ ಸಲಹೆ

|
Google Oneindia Kannada News

ಬೆಂಗಳೂರು, ಮೇ 31 : ವಾರಕ್ಕೊಂದು ರಜೆ, ಕೆಲಸಕ್ಕೆ ತಕ್ಕ ವೇತನ ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಜೂನ್ 4ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಈ ಸನ್ನಿವೇಶವನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡುವಂತೆ ಆಮ್ ಆದ್ಮಿ ಪಕ್ಷ ಸರ್ಕಾರಕ್ಕೆ ಸಲಹೆ ನೀಡಿದೆ.

ಪಕ್ಷದ ರಾಜ್ಯ ಸಂಚಾಲಕರು ಮತ್ತು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಪೃಥ್ವಿ ರೆಡ್ಡಿ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಸರಿಯಾಗಿ ವೇತನ ಸಿಗದ, ಬಳಲಿದ, ಅತೃಪ್ತ, ಪೋಲಿಸ್ ತಂಡ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಮಾರಕವಾಗಿದೆ ಎಂದು ಹೇಳಿದ್ದಾರೆ. [ಸಾಮೂಹಿಕ ರಜೆಗೆ 50 ಸಾವಿರ ಪೊಲೀಸರ ನಿರ್ಧಾರ]

police

ಇದುವರೆಗೆ ಆಡಳಿತಕ್ಕೆ ಬಂದ ಎಲ್ಲಾ ಸರ್ಕಾರಗಳು ಪೋಲಿಸರ ವ್ಯವಹಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಸಿ ಪೋಲಿಸರನ್ನು ಆತಂಕಕ್ಕೆ ಸಿಲುಕಿಸಿವೆ. ಇದರಿಂದ ಅವರು ನಿರ್ಭಯವಾಗಿ, ನಿಷ್ಪಕ್ಷತೆಯಿಂದ ತಮ್ಮ ತನಿಖೆ ನಡೆಸುವಲ್ಲಿ ವಿಫಲರಾಗಿದ್ದಾರೆ. ಇದಲ್ಲದೆ ಪೋಲಿಸ್ ಪಡೆಯನ್ನು ರಾಜಕೀಯ ಶಕ್ತಿಗಳು ತಮ್ಮ ಖಾಸಗಿ ಸೈನ್ಯದಂತೆಯೂ, ಪೇದೆಗಳನ್ನು ತಮ್ಮ ವೈಯುಕ್ತಿಕ ಜವಾನರಂತೆಯೂ ನಡೆಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. [ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಶಾಕಿಂಗ್ ವರದಿ]

ಸಾಧಾರಣ ಪೋಲಿಸ್ ಸಿಬ್ಬಂದಿ ಸಮಾಜದ ಬಡ ಮತ್ತು ಗ್ರಾಮೀಣ ವರ್ಗದಿಂದ, ಕಷ್ಟಪಟ್ಟು ಅಲ್ಪ-ಸ್ವಲ್ಪ ವಿದ್ಯಾಭ್ಯಾಸ ಪಡೆದು ಬಂದಿರುತ್ತಾರೆ. ಆದರೆ, ಅವರಿಗೆ ಸಿಗುತ್ತಿರುವುದು ಕಡಿಮೆ ಸಂಬಳ, ಅನಿಯಮಿತ ದೀರ್ಘ ಕೆಲಸದ ಸಮಯ ಮತ್ತು ಮರ್ಯಾದೆ/ಸಭ್ಯತೆ ಇಲ್ಲದ ಕೆಲಸದ ವಾತಾವರಣವಾಗಿದೆ. [ಪುಟ್ಟ ಬಾಲಕನಿಗೆ ಪೊಲೀಸ್ ಅಧಿಕಾರಿಗಳ ಸೆಲ್ಯೂಟ್]

ಅಸಭ್ಯ ವಾತಾವರಣದ ಜೊತೆಗೆ ಪೋಲಿಸ್ ಸಿಬ್ಬಂದಿ ದಿನನಿತ್ಯ ತಮ್ಮ ಹಿರಿಯ ಅಧಿಕಾರಿಗಳ ದುರ್ನಡತೆ, ಹೀಯಾಳಿಕೆ ಮತ್ತು ಬೈಗುಳಗಳ ದಾಳಿಯನ್ನೂ ಅನುಭವಿಸಬೇಕಾಗುತ್ತದೆ. ಇವರಿಗೆ ತಮ್ಮ ಅಳಲನ್ನು ತೋಡಿಕೊಳ್ಳುವ, ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಯಾವುದೇ ಮಾರ್ಗಗಳು ಇರುವುದಿಲ್ಲ. ಪೋಲಿಸ್ ಸಿಬ್ಬಂದಿ ಬಹಳ ದಿನಗಳಿಂದ ಪ್ರತ್ಯೇಕ ವೇತನ ಆಯೋಗಕ್ಕೆ ಬೇಡಿಕೆ ನೀಡಿದ್ದರೂ ಯಾರೂ ಇದರ ಬಗ್ಗೆ ಗಮನ ಹರಿಸಿಲ್ಲ.

ಆಮ್ ಆದ್ಮಿ ಪಕ್ಷ ಪೋಲಿಸರ ನ್ಯಾಯಯುತ ಬೇಡಿಕೆಯನ್ನು ಬೆಂಬಲಿಸುತ್ತದೆ ಮತ್ತು ಸರ್ಕಾರ ಕೂಡಲೇ ಅವರ ತೊಂದರೆಗಳನ್ನು ವಿಚಾರಿಸಿಕೊಂಡು, ಅವರು ಮುಷ್ಕರ ಮಾಡುವುದನ್ನು ತಡೆಯಬೇಕೆಂದು ಮತ್ತು ಬಡ ಸಿಬ್ಬಂದಿಯ ತೊಂದರೆಗಳನ್ನು ಶೀಘ್ರವಾಗಿ ಪರಿಹರಿಸಲು ಬೇಕಾದ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸುತ್ತಿದೆ.

ಕೇಂದ್ರ 7ನೇ ವೇತನ ಆಯೋಗ ದೇಶದ ಯಾವುದೇ ಭಾಗದ ಸರ್ಕಾರಿ ನೌಕರನ ಕನಿಷ್ಟ ವೇತನ 18 ಸಾವಿರ ಇರಬೇಕೆಂದು ಶಿಫಾರಸು ಮಾಡಿರುವಾಗ ಕರ್ನಾಟಕದ ಪೋಲಿಸ್ ಪೇದೆಗೆ ಯಾಕೆ ಈ ಬೇಧ ಭಾವ? ಎಂದು ಪಕ್ಷ ಪ್ರಶ್ನಿಸಿದೆ.

ಪಕ್ಷದ ಆಗ್ರಹಗಳು

* ಬೇರೆ ರಾಜ್ಯದಲ್ಲಿ ಪೋಲಿಸರಿಗೆ ಸಿಗುತ್ತಿರುವ ವೇತನ ನಮ್ಮ ರಾಜ್ಯದಲ್ಲೂ ಸಿಗುವಂತಿರಬೇಕು
* ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕು
* ಪೊಲೀಸರಿಗೆ ರಜೆ ಕಾರ್ಮಿಕ ನಿಯಮದಂತೆ ಸಿಗುವಂತಾಗಬೇಕು
* ರಾಜಕಾರಣಿ ಮತ್ತು ವಿಶೇಷ ವ್ಯಕ್ತಿಗಳ ರಕ್ಷಣೆಯಿಂದ ಸಿಬ್ಬಂದಿ ಕಡಿಮೆಗೊಳಿಸಬೇಕು

English summary
Aam Aadmi Party Karnataka offers full support to demands of police and urged the government of Karnataka to reach out to them and avoid situation of mass leaves which may lead to a law and order crisis in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X