ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಒತ್ತುವರಿ ತೆರವಿಗೆ ಕ್ರಮ, ಸರ್ಕಾರಕ್ಕೆ ಆಪ್ ಪತ್ರ

|
Google Oneindia Kannada News

ಬೆಂಗಳೂರು, ಅ.16 : ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷ ಕರ್ನಾಟಕ ಸ್ವಾಗತಿಸಿದೆ. ಒತ್ತುವರಿಯಾದ ಸರ್ಕಾರಿ ಭೂಮಿಯಲ್ಲಿ ಕೆಲವು ಕಡೆ ಬಡವರು ವಾಸಿಸುತ್ತಿದ್ದು, ಆ ಸ್ಥಳವನ್ನು ತೆರವುಗೊಳಿಸಿದರೆ, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪಕ್ಷ ಮನವಿ ಮಾಡಿದೆ.

ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭೂ ಕಬಳಿಕೆ ವಿರೋಧಿ ಸಮಿತಿ ಸದಸ್ಯರು ನಡೆಸುತ್ತಿದ್ದ 38 ದಿನಗಳ ಹೋರಾಟ ಬುಧವಾರ ಸಂಜೆ ಅಂತ್ಯಗೊಂಡಿದೆ. ಹೋರಾಟಕ್ಕೆ ಬೆಂಬಲ ನೀಡಿದ್ದ ಆಮ್ ಆದ್ಮಿ ಪಕ್ಷ ಸರ್ಕಾರಕ್ಕೆ ಪತ್ರ ಬರೆದಿದ್ದು, ಭೂ ಒತ್ತುವರಿಗೆ ತೆಗೆದುಕೊಂಡ ಕ್ರಮವನ್ನು ಶ್ಲಾಘಿಸಿದೆ.

Aam Admi Party

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದಲ್ಲಿ ಹೋರಾಟ ನಡೆಸಿದ ನಂತರ ಬೆಂಗಳೂರು ನಗರದಲ್ಲಿ ಭೂ ಒತ್ತುವರಿಯನ್ನು ತೆರವುಗೊಳಿಸಲು ಸರ್ಕಾರ ಹೆಚ್ಚುವರಿಯಾಗಿ ಇಬ್ಬರು ಜಿಲ್ಲಾಧಿಕಾರಿಗಳನ್ನು ನೇಮಿಸಲು ಆದೇಶ ಹೊರಡಿಸಿದ ಕ್ರಮವನ್ನು ಪಕ್ಷ ಸ್ವಾಗತಿಸಿದೆ. [ಭೂಗಳ್ಳರ ವಿರುದ್ಧದ ಹೋರಾಟ ಅಂತ್ಯ]

ಭೂ ಕಬಳಿಕೆ ಮಾಡಿಕೊಂಡವರು ಪ್ರಭಾವಿಗಳು ಶ್ರೀಮಂತರು ಆಗಿದ್ದು, ಅವರು ಸರ್ಕಾರದ ಮೇಲೆ ಪ್ರಭಾವ ಬೀರಿ, ನಿರ್ಧಾರವನ್ನು ಅನುಷ್ಠಾನ ಮಾಡದಂತೆ ಒತ್ತಡ ಹೇರಬಹುದು. ಸರ್ಕಾರ ಇದಕ್ಕೆ ತಲೆಬಾಗಬಾರದು ಎಂದು ಪಕ್ಷ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ. [ಭೂಗಳ್ಳರ ವಿರುದ್ಧ ಆಪ್ ಆಮರಣಾಂತ ಉಪವಾಸ]

ಭೂ ಕಬಳಿಕೆ ತೆರವು ಕುರಿತು ಸರ್ಕಾರ ಸಮಿತಿ ರಚನೆ ಮಾಡಿದರೆ, ಆಮ್ ಆದ್ಮಿ ಪಕ್ಷವೂ ಸಮಿತಿಯ ಜೊತೆ ಕೆಲಸ ಮಾಡಲು ಸದಾ ಸಿದ್ಧವಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ವಿಚಾರದಲ್ಲಿ ಎಚ್.ಎಸ್.ದೊರೆಸ್ವಾಮಿ ಅವರು ಸಮಿತಿ ರಚನೆ ಮಾಡಿದರೂ ಅದರಲ್ಲಿ ಪಾಲ್ಗೊಳ್ಳುವುದಾಗಿ ಆಪ್ ಹೇಳಿದೆ. [ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸಿಎಂ ಆದೇಶ]

ಸರ್ಕಾರಿ ಭೂಮಿ ಒತ್ತುವರಿಯಾದ ಕೆಲವು ಪ್ರದೇಶದಲ್ಲಿ ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದ ಜನರು ವಾಸವಾಗಿದ್ದು, ಅವರನ್ನು ತೆರವುಗೊಳಿಸಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರ, ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಆಪ್ ಮನವಿ ಮಾಡಿದೆ.

English summary
Karnataka Aam Aadmi Party (AAP) appreciates Govt attention to the serious issue of land-grabbing in state and for authorizing the creation of two new District Commissioner positions to work independently and specifically to repossess land away from land-mafia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X