ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಶಾಲೆಗೆ ಸೇರಲು ಆಧಾರ್ ಕಾರ್ಡ್ ಕಡ್ಡಾಯವೇನಲ್ಲ"

By Mahesh
|
Google Oneindia Kannada News

ಬೆಂಗಳೂರು, ಅ.16: ಬೆಂಗಳೂರಿನ ಶಾಲೆಯೊಂದರ ಮುಖ್ಯ ಉಪಾಧ್ಯಯರು ತಮ್ಮ ಶಾಲೆಯಲ್ಲಿ ಸುತ್ತೋಲೆ ಹೊರಡಿಸಿ, ಶಾಲಾ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯ ಎಂದಿದ್ದರು. ಈ ವಿಷಯದ ಬಗ್ಗೆ ಸ್ಪಷ್ಟನೆ ಕೋರಿರುವ ಕರ್ನಾಟಕ ಸರ್ಕಾರ, ಆಧಾರ್ ಕಾರ್ಡ್ ಕಡ್ಡಾಯವೇನಲ್ಲ, ಐಚ್ಛಿಕ ಎಂದಿದೆ.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯುವುದಾಗಿ ಶಿಕ್ಷಣ ಇಲಾಖೆ ಗುರುವಾರ ಹೈಕೋರ್ಟ್‌ಗೆ ಹೇಳಿಕೆ ನೀಡಿದೆ.

Aadhaar is not mandatory for schoolchildren, govt. tells High Court

ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ರಾಜಾಜಿನಗರದ ವಾಣಿ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕಿ ಆರ್.ಎಚ್.ಉಷಾ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ರಾಜ್ಯ ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹಿಂಪಡೆಯುವುದಾಗಿ ಹೇಳಿದೆ.

ಈ ಹೇಳಿಕೆಗೆ ಒಪ್ಪಿದ ಅಶೋಕ್ ಬಿ. ಹಂಚಿಗೇರಿ ಅವರಿದ್ದ ನ್ಯಾಯಪೀಠ, ಈ ಹೇಳಿಕೆಗೆ ಅನುಸಾರವಾಗಿ ಶಾಲಾ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ಪೀಠ ಆದೇಶ ನೀಡಿತು.

ಇತ್ತೀಚೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಆಧಾರ್ ಕಾರ್ಡ್ ಬಗ್ಗೆ ಸುತ್ತೋಲೆ ಕಳಿಸಿ ಆಧಾರ್ ಕಾರ್ಡ್ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ನಿರ್ದೇಶಿಸಿದ್ದರು. ಆದರೆ, ಶಾಲೆ ಪ್ರವೇಶ, ಪರೀಕ್ಷೆಗೆ ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳಿರಲಿಲ್ಲ. ಅದರೆ, ಈ ಬಗ್ಗೆ ಗೊಂದಲ ಮೂಡಿತ್ತು. ಶಾಲಾ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕೂಡಾ ಸ್ಪಷ್ಟನೆ ನೀಡಿದ್ದಾರೆ.

English summary
The State government on Thursday told the High Court of Karnataka that Aadhaar for schoolchildren was not mandatory but only optional.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X