ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಅಲ್ಪಸಂಖ್ಯಾತರಿಗೊಂದು ವಿಶೇಷ ಮ್ಯಾಗಜೀನ್

|
Google Oneindia Kannada News

ಬೆಂಗಳೂರು, ನ. 6 : ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ ಸಲಿಂಗಕಾಮಿಗಳು, ಉಭಯ ಲಿಂಗಿಗಳು ಮತ್ತು ಲಿಂಗ ಪರಿವರ್ತನೆ ಯಾದವರು ಎದುರಿಸುತ್ತಿರುವ ಸಮಸ್ಯೆ ಆಧಾರವಾಗಿಟ್ಟುಕೊಂಡು ತ್ರೈಮಾಸಿಕ ಮ್ಯಾಗಜೀನ್ ಹೊರತರಲಿದೆ. 'ಅನನ್ಯ' ಹೆಸರಿನಲ್ಲಿ ಹೊರಬರುತ್ತಿರುವ ಮ್ಯಾಗಜೀನ್ ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ.

ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಸುದ್ದಿಗಳು ಮತ್ತು ಅವರ ದೃಷ್ಟಿಕೋನವನ್ನು ಮ್ಯಾಗಜೀನ್ ಬಿಂಬಿಸಲಿದೆ. ಇದರಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಸ್ವತಃ ಬರೆದ ಕತೆ, ಕವನಗಳು ಪ್ರಕಟಣೆಯಾಗಲಿವೆ.[ಚಿತ್ರದುರ್ಗದಲ್ಲಿದೆ ಲೈಂಗಿಕ ಅಲ್ಪಸಂಖ್ಯಾತರ ಡಾಬಾ]

gay

ಲೈಂಗಿಕ ಅಲ್ಪಸಂಖ್ಯಾತರ ಹೋರಾಟ, ಎದುರಿಸಿದ ಮತ್ತು ಎದುರಿಸುತ್ತಿರುವ ಸಮಸ್ಯೆಗಳು, ಕಾನೂನು ನೆರವು, ಸರ್ಕಾರಿ ಸೌಲಭ್ಯಗಳು ಮತ್ತು ತಿಳಿವಳಿಕೆ ಈ ರೀತಿ ಹತ್ತು ಹಲವು ವಿಚಾರಗಳು ಬಿಂಬಿತವಾಗಲಿವೆ.

ಸ್ಥಳಾವಕಾಶ ಕೊರತೆಯೇ?
ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿಶೇಷ ಪತ್ರಿಕೆ ತೆಗೆಯಲು ಯೋಚಿಸಲು ಅನೇಕ ಕಾರಣಗಳಿವೆ. ಚಾಲ್ತಿಯಲ್ಲಿರುವ ಪತ್ರಿಕೆ ಮತ್ತು ಮ್ಯಾಗಜೀನ್ ಗಳಲ್ಲಿ ಸಮುದಾಯಕ್ಕೆ ಸಂಭಂಧಿಸಿದ ಅಭಿಪ್ರಾಯ ವ್ಯಕ್ತಪಡಿಸಲು ಯಾವ ಸೂಕ್ತ ವೇದಿಕೆ ಇರಲಿಲ್ಲ. ಇವರು ಎದುರಿಸುತ್ತಿರುವ ಸಮಸ್ಯೆಯನ್ನು ಸಮಾಜಕ್ಕೆ ತಿಳಿಸುವಂಥ ವೇದಿಕೆಯೊಂದರ ಅಗತ್ಯವಿತ್ತು. ಹಾಗಾಗಿ ಮ್ಯಾಗಜೀನ್ ರೂಪುಗೊಂಡಿತು ಎಂದು ಸಂಪಾದಕ ಉಮೇಶ್ ತಿಳಿಸಿದ್ದಾರೆ.

ಮುದ್ರಣ ಮತ್ತು ಆನ್ ಲೈನ್ ಮಾದ್ಯಮಗಳಲ್ಲಿ ಅನೇಕ ವರ್ಷಗಳ ಅನುಭವವಿರುವ ಉಮೇಶ ಸಂಪಾದಕರಾಗಿ ಕಾರ್ಯನಿರ್ವಹಿಸಲಿದ್ದು 'ಜೀವಾ' ಸಂಸ್ಥೆ ಮ್ಯಾಗಜಿನ್ ಹೊಣೆ ಹೊತ್ತುಕೊಂಡಿದೆ.

English summary
The sexual minority community of Karnataka is launching a quarterly dedicated to issues faced by the Lesbian, Gay, Bisexual and Transgender (LGBT) community, which is the first effort of its kind in the State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X